ಕೆಎಸ್‌ಓಯು ಹಾಸನ ಕೇಂದ್ರದಲ್ಲಿ ಅ.21ರ ತನಕ ಪ್ರವೇಶಕ್ಕೆ ಅವಕಾಶ

ಹಾಸನ, ಅಕ್ಟೋಬರ್ 08 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಪುನಃ ಮಾನ್ಯತೆ ಸಿಕ್ಕಿದೆ. ಹಾಸನದ ಪ್ರಾದೇಶಿಕ ಕೇಂದ್ರದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಪ್ರವೇಶ ಬಯಸಿ ಆಗಮಿಸುತ್ತಿದ್ದಾರೆ.

ಹಾಸನ ನಗರದ ಹೊರವಲಯದ ಎಂ.ಕೃಷ್ಣ ಬಡಾವಣೆಯಲ್ಲಿ ಕೆ.ಎಸ್.ಓ.ಯು ಪ್ರಾದೇಶಿಕ ಕಚೇರಿ ಇದೆ. ಸರ್ಕಾರಿ, ಖಾಸಗಿ, ಸಾಮಾನ್ಯ ಕಾಲೇಜುಗಳು ಪದವಿ ಪ್ರವೇಶ ಪಡೆಯಲು ಸಾಧ್ಯವಾಗದವರು. ಉದ್ಯೋಗ ಮಾಡುತ್ತಿರುವವರು, ಸ್ನಾತಕೋತ್ತರ ಪದವಿ ಮಾಡುವ ಕನಸು ಹೊತ್ತಿರುವವರು ಕೇಂದ್ರದಲ್ಲಿ ಪ್ರವೇಶ ಬಯಸುತ್ತಿದ್ದಾರೆ.

'ಈ ಶೈಕ್ಷಣಿಕ ವರ್ಷದಲ್ಲಿ ಹಲವು ಹೊಸ ಕೋರ್ಸ್‍ಗಳು ಸೇರ್ಪಡೆಯಾಗಿದ್ದು, ಪ್ರವೇಶಾತಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ' ಎಂದು ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಡಾ. ಹರೀಶ್ ಹೇಳಿದ್ದಾರೆ.

KSOU admission in Hassan till October 20

ಹಾಸನ ಪ್ರಾದೇಶಿಕ ಕೇಂದ್ರದ ವಿಶಾಲ ಕಟ್ಟಡದಲ್ಲಿ ಈಗ ಬಿಎ, ಬಿಕಾಂ, ಎಂ.ಎಲ್.ಐ.ಸಿ., ಬಿ.ಎಲ್.ಐ.ಸಿ. ಮತ್ತು ಎಂಎಸ್ಸಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಈಗಾಗಲೇ 600 ಮಂದಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ.

ಪ್ರಾದೇಶಿಕ ಕೇಂದ್ರ ಇಲ್ಲಿ ತನ್ನ ಕಾರ್ಯವನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಇನ್ನು ಮುಂದೆ ಪರೀಕ್ಷೆಗಳು, ತರಗತಿಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾದೇಶಿಕ ಕೇಂದ್ರದಲ್ಲಿಯೇ ನಡೆಸಲಾಗುತ್ತದೆ.

ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಸಿದ್ದ ಪಾಠ, ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ವಿದ್ಯಾಥಿಗಳ ಅನುಕೂಲಕ್ಕಾಗಿ ಅ. 20ರಂದು ಅವರಿಗೆ ಎಲ್ಲಾ ಕೋಸುಗಳಿಗೆ ಪ್ರವೇಶಾತಿ ನಡೆಯುತ್ತದೆ ಹಾಗೂ ಎಲ್ಲಾ ರಜಾ ದಿನಗಳಲ್ಲಿಯೂ ಕಚೇರಿ ತೆರೆದಿರುತ್ತದೆ.

ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳ ಅನುಕೂಲವಾಗಲು ಭಾನುವಾರ ಸಹಿತ ಎಲ್ಲಾ ಬ್ಯಾಂಕ್ ರಜಾ ದಿನಗಳಲ್ಲಿ ಕಚೇರಿಯಲ್ಲೇ ಶುಲ್ಕ ಪಾವತಿಸಿಕೊಂಡು ಪ್ರವೇಶಾತಿ ನೀಡಲಾಗುತ್ತದೆ. ಬಿ.ಪಿ.ಎಲ್., ಪಡಿತರ ಚೀಟಿ ಹೊಂದಿರುವ ಮಹಿಳಾ ವಿಧ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ 25% ರಿಯಾಯಿತಿ ಇದೆ.

ಕೇಂದ್ರದ ವಿಳಾಸ : ಹಾಸನ ಪ್ರಾದೇಶಿಕ ಕೇಂದ್ರ, ಅರಸೀಕೆರೆ ರಸ್ತೆ ಬಿ.ಟಿ. ಕೊಪ್ಪಲು ಕೇಂದ್ರಿಯ ವಿದ್ಯಾಲಯದ ಹತ್ತಿರ, ಎಸ್.ಎಂ. ಕೃಷ್ಣನಗರ, ಹಾಸನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+