Get Updates
Get notified of breaking news, exclusive insights, and must-see stories!

Sakleshpur constituency: ತ್ರಿಕೋನ ಸ್ಪರ್ಧೆಯಿಂದ ಈ ಸಲ ಒಡೆಯಲಿದೆಯೇ ಜೆಡಿಎಸ್ ಭದ್ರಕೋಟೆ?

ಬೆಂಗಳೂರು, ಏಪ್ರಿಲ್ 29: ಸಕಲೇಶಪುರ ವಿಧಾನಸಭಾ ಕ್ಷೇತ್ರವು ಜಾತ್ಯಾತೀತ ಜನತಾ ದಳದ (JDS) ಭದ್ರಕೋಟೆಯಾಗಿದೆ. ಇದು ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದ ಜೆಡಿಎಸ್‌ಗೆ ಈ ಬಾರಿ ಸೆಡ್ಡು ಹೊಡೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಸಿದ್ಧವಾಗಿವೆ.

ಜೆಡಿಎಸ್‌ನ ಅಭ್ಯರ್ಥಿಯಾಗಿ ಎಚ್‌.ಕೆ ಕುಮಾರಸ್ವಾಮಿ ಅವರು, ಮುರಳಿ ಮೋಹನ್ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಗೂ ಸಿಮೆಂಟ್ ಮಂಜು ಅವರು ಬಿಜೆಪಿ ಪರ ಕಣಕ್ಕಿಳಿದಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರದ ಕಾವು ಹೆಚ್ಚಾಗಿದೆ. ಅಭಿವೃದ್ಧಿ ಕಾರಣ ಇಟ್ಟುಕೊಂಡೇ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು ಜೆಡಿಎಸ್‌ ಸೋಲಿಸಲು ಸಜ್ಜಾಗಿ ತಂತ್ರ ಹೆಣೆದಿವೆ. ಹೀಗಾಗಿ ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ.

Karnataka Election, Sakleshpur Triangular Fight: HK Kumaraswamy vs Murali Mohan vs Cement Manju

2018 ರಲ್ಲಿ ಬಿಜೆಪಿಯನ್ನು ಜೆಡಿಎಸ್ ಸೋಲಿಸಿತ್ತು. ಬಿಜೆಪಿಯ ಸೋಮಶೇಖರ್ ನಾರ್ವೇ ಅವರು 57,320 ಮತಗಳಿಂದ ಸೋತಿದ್ದರು. ಅಂದು ಕಾಂಗ್ರೆಸ್‌ನ ಸಿದ್ದಯ್ಯ ಅವರಿಗೆ 37,002 ಮತಗಳು ಲಭಿಸಿದ್ದವು. ಜೆಡಿಎಸ್‌ನ ಎಚ್‌ಕೆ ಕುಮಾರಸ್ವಾಮಿ ಅವರು 62,262 ಬಹುಮತಗಳಿಂದ ಗೆದ್ದಿದ್ದರು.

ತ್ರಿಕೋನ್ ಸ್ಪರ್ಧೆ ಹೇಗೆ: ಯಾರ ವರ್ಚಸ್ಸು ಹೇಗಿದೆ?

ಹಿಂದುಳಿದ ವರ್ಗದ ನಾಯಕರಾದ ಎಚ್‌.ಕೆ.ಕುಮಾರಸ್ವಾಮಿ ಅವರು ಮೊದಲು ಬೇಲೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಅದನ್ನು ಬಿಟ್ಟು ಮೀಸಲು ಕ್ಷೇತ್ರ ಸಕಲೇಶಪುರಕ್ಕೆ ಬಂದ ಮೇಲೆ ಮೂರು ಸಲ ಹ್ಯಾಟ್ರಿಕ್ ಭಾರಿಸಿದ್ದಾರೆ. ಕ್ಷೇತ್ರ ವಿಂಗಡಣೆಯಾದ ಮೇಲೆ 2008 ರಿಂದ ಮೂರು ಬಾರಿ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರುವಲ್ಲಿ ಎಚ್‌ಕೆ ಕುಮಾರಸ್ವಾಮಿ ಪಾತ್ರ ಮಹತ್ವದ್ದು. ಒಟ್ಟು ಐದು ಚುನಾವಣೆಯಲ್ಲಿ ಅವರು ಚುನಾಯಿತರಾಗಿದ್ದಾರೆ. ಅವರ ಈ ವರ್ಚಸ್ಸೆ ಈ ಬಾರಿಯು ಕೈ ಹಿಡಿಯಲಿದೆ ಎಂದು ಜೆಡಿಎಸ್ ನಂಬಿದ್ದು, ಎದುರಾಳಿ ಪಕ್ಷಗಳಿಗೆ ಸೆಡ್ಡು ಹೊಡೆದಿದೆ.

2004 ರಿಂದ ಸಕಲೇಶಪುರ ಜೆಡಿಎಸ್ ಪಾಲಾಗಿದೆ. ಮೊದಲಿನಿಂದ ಬಿಜೆಪಿ ಜೊತೆಗೆ ಕಾಂಗ್ರೆಸ್ ತೀವ್ರ ಫೈಟ್ ನೀಡುತ್ತಾ ಬಂದಿದೆ. ಕಾಂಗ್ರೆಸ್‌ ಅಭ್ಯರ್ಥಿ ಮುರಳಿ ಮೋಹನ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಜನರ ಮಧ್ಯೆ ಇದ್ದುಕೊಂಡು ಅವರ ಸಮಸ್ಯೆ ಆಲಿಸಿದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಬಂದಿದ್ದ ಅವರಿಗೆ ಅಲ್ಲಿನ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಅವರು ಮರಳಿ ಕಾಂಗ್ರೆಸ್ ಸೇರಿ 2023ರ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

Karnataka Election, Sakleshpur Triangular Fight: HK Kumaraswamy vs Murali Mohan vs Cement Manju

ಪಕ್ಷ ತೊರೆದರೂ ಸಹ ಕಾಂಗ್ರೆಸ್ ಮರಳಿ ಆಹ್ವಾನ ನೀಡಿ ಗೌರವಯುತವಾಗಿ ನಡೆಸಿಕೊಂಡಿದೆ. ಪುನಃ ಸಕಲೇಶಪುರ ಕ್ಷೇತ್ರದ ಟಿಕೆಟ್ ನೀಡಿದೆ. ಪಕ್ಷ ಸಂಘಟನೆ ಜೊತೆಗೆ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಅನುದಾನ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದರೂ ಸಹ ಕ್ಷೇತ್ರದ ಜೆಡಿಎಸ್‌ ಶಾಸಕರು ಅನುದಾನಕ್ಕಾಗಿ ಪ್ರಯತ್ನಿಸದಂತೆ ಕಂಡು ಬರುತ್ತಿಲ್ಲ ಎಂದು ಈ ಹಿಂದೆ ಮುರಳಿ ಮೋಹನ್ ಹೇಳಿದ್ದರು. ಅವರು ಜೆಡಿಎಸ್ ಲೋಪದೋಷಗಳನ್ನು ಇಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೂ ಸಾಕಷ್ಟು ಬೆಂಬಲ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಕಾರ್ಯಕರ್ತರಲ್ಲಿ ಹುರುಪು: ಆನ್‌ಲೈನ್‌ನಲ್ಲೂ ಪ್ರಚಾರ

ಬಿಜೆಪಿಯಿಂದ ಕಳೆದ ಭಾರಿ ಟಫ್ ಫೈಟ್ ನೀಡಿದ್ದ ನಾರ್ವೇ ಸೋಮಶೇಖರ್ ಅವರು ಚುನಾವಣೆ ನಂತರ ಎಲ್ಲಿಯೂ ಕಾಣಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ 2018ರಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಮೆಂಟ್ ಮಂಜು ಅವರನ್ನು ಈ ಬಾರಿ ಕಣಕ್ಕಿಳಿಸಿದೆ. ಅವರು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಸರತ್ತು ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಉತ್ಸಾಹದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ಪ್ರಚಾರ ನಡೆಸಿದೆ, ನಾಮಪತ್ರ ಸಲ್ಲಿಕೆ ವೇಳೆಯೆ 25ಸಾವಿರ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿದೆ. ಸಾಕಷ್ಟು ಹಣವಂತರು ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪ್ರಬಲ ಕಾರ್ಯಕರ್ತ ಶ್ರಮಿಕನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕಾರಣದಿಂದ ಈ ಬಾರಿ ಬಿಜೆಪಿ ಮೇಲೆ ಜನರ ಒಲವಿದೆ ಎನ್ನಲಾಗಿದೆ.

ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ

ಜೆಡಿಎಸ್ ಇಲ್ಲಿ 15 ವರ್ಷಗಳಿಂದ ಆಡಳಿತ ನಡೆದರೂ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ. ಅವರು ಜನರಿಗೆ ಮೋಸ ಮಾಡಿದೆ. ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಲ್ಲ. ಹೀಗಾಗಿ ಬೇಸತ್ತಿರುವ ಜನರು ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೆ ಬಿಜೆಪಿ ಅಸ್ತ್ರವಾಗಿದ್ದುಕೊಂಡು ಬಿಜೆಪಿ ಜನರ ಮುಂದೆ ಹೋಗಲಿದೆ. ಜೆಡಿಎಸ್ ಶಾಸಕರಿಗೆ ಅಭಿವೃದ್ಧಿಯ ಇಚ್ಛಾಶಕ್ತಿ ಕೊರತೆ ಇತ್ತು. ಎಚ್‌ಕೆ ಕುಮಾರಸ್ವಾಮಿ ಸಕಲೇಶಪುರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ಇದೆಲ್ಲವು ಬಿಜೆಪಿಗೆ ವರವಾಗುವ ಸಾಧ್ಯತೆ ಇದೆ. ಹೀಗಾಗಿ ಸದರಿ ಚುನಾವಣೆಯಲ್ಲಿ ಸಕಲೇಶಪುರದಲ್ಲಿ ತ್ರಿಕೋನ್ ಸ್ಪರ್ಧೆ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+