Get Updates
Get notified of breaking news, exclusive insights, and must-see stories!

ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ಎಚ್‌.ಡಿ.ರೇವಣ್ಣ ದಂಪತಿ

ಹಾಸನ, ಏಪ್ರಿಲ್‌, 26: ರಾಜ್ಯ ವಿಧಾನಸಭೆ ಚುನವಾಣೆ ಹಿನ್ನೆಲೆ ಈಗಾಗಲೇ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಬೇಟೆ ನಡೆಸುತ್ತಿದ್ದಾರೆ. ಅದೆ ರೀತಿ ಹೈ ವೋಲ್ಟೇಜ್‌ ಕ್ಷೇತ್ರವಾದ ಹಾಸನದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ದಂಪತಿ ಇಂದಿನಿಂದ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಿದ್ದಾರೆ.

ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಪರ ರೇವಣ್ಣ ದಂಪತಿ ಬಿರುಸಿನ ಪ್ರಚಾರಕ್ಕಿಳಿದಿದ್ದಾರೆ. ನೀರುಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದು, ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸೆಡ್ಡು ಹೊಡೆಯಲು ದಳಪತಿಗಳು ಮತಬೇಟೆ ನಡೆಸಿದ್ದಾರೆ. ಇನ್ನು ಪ್ರಚಾರ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿ ಆಗಿದ್ದು, ಸ್ವರೂಪ್‌ ಪರವಾಗಿ ಮತಯಾಚನೆ ಮಾಡಿದ್ದಾರೆ.

Karnataka election 2023: HD Revanna family campaign for JDS candidate in Hassan

ಸುಭಾಷ್ ವೃತ್ತ, ಎನ್.ಆರ್‌ ವೃತ್ತದ ಮೂಲಕ ರೋಡ್‌ ಶೋ ನಡೆಸಲಾಗಿದೆ. ಟಿಕೆಟ್ ‌ಕೈ ತಪ್ಪಿದರೂ ಕೂಡ ಹಾಸನ ಕ್ಷೇತ್ರದ ಉಸ್ತುವಾರಿ ತೆಗೆದುಕೊಂಡಿರುವ ಭವಾನಿ ರೇವಣ್ಣ ಅವರು ಸ್ವರೂಪ್‌ ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ರೋಡ್ ಶೋ ನಡೆಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಇದೇ ವೇಳೆ ಹೆಚ್ಚಿನ ಮತಗಳನ್ನು ನೀಡಿ ಸ್ವರೂಪ್‌ ಅವನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳ ವಿವರ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಿಂದ ವಿವಿಧ ರಾಜಕೀಯ ಪಕ್ಷಗಳ ಒಟ್ಟು 73 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾದ ಏಪ್ರಿಲ್‌ 24ರಂದು 13 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದುಕೊಂಡರು. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 12 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದರೆ, ಅರಸೀಕೆರೆ-7, ಬೇಲೂರು-12, ಹಾಸನ- 9, ಹೊಳೆನರಸೀಪುರ-8, ಅರಕಲಗೂಡು-15 ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 10 ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್. ತಿಳಿಸಿದ್ದಾರೆ.

(29292), ಮಂಜೇಗೌಡ ಬಿ.ಎಸ್(ಆಪ್), ಎಂ.ಎ ಗೋಪಾಲಸ್ವಾಮಿ(ಕಾಂಗ್ರೆಸ್), ಸಿ.ಎನ್. ಬಾಲಕೃಷ್ಣ (ಜೆಡಿಎಸ್), ಆರ್.ರಾಜು(ಬಿಎಸ್‌ಪಿ), ಕಿರಣ್ ಟಿ.ಕೆ(ಉತ್ತಮ ಪ್ರಜಾಕೀಯ ಪಕ್ಷ) ಪವಿತ್ರ ಜೆ.ಕೆ(ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ರೇವಣ್ಣ (ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ) ಶಿವಕುಮಾರ್, (ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ನಟರಾಜ ಪಿ.ಎನ್, ಹೆಚ್.ಎಂ ರವಿ, ಸುಬ್ರಹ್ಮಣ್ಯ ಎಂ ಸೇರಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರ

ಜಿ.ವಿ.ಬಸವರಾಜು (ಬಿಜೆಪಿ), ಕೆ.ಎಂ ಶಿವಲಿಂಗೇಗೌಡ( ಕಾಂಗ್ರೆಸ್) ಎನ್.ಆರ್ ಸಂತೋಷ್, (ಜೆಡಿಎಸ್), ನವೀನ್ ಎಸ್.ಕೆ(ಉತ್ತಮ ಪ್ರಜಾಕೀಯ ಪಕ್ಷ), ಉಮೆಶ್ ಬಿ.ಎಂ(ಕರ್ನಾಟಕ ರಾಷ್ಟ್ರ ಸಮಿತಿ) ಹೊಳೆಯಪ್ಪ(ಲೋಕಶಕ್ತಿ) ಹಾಗೂ ಪಕ್ಷೇತರ ಅಭ್ಯರ್ಥಿ ಡಿ. ಕಿಶೋರ್ ಕುಮಾರ್ ಸೇರಿ 7 ಅಭ್ಯರ್ಥಿಗಳು ಸಪಧೆ.

ಬೇಲೂರು ವಿಧಾನಸಭಾ ಕ್ಷೇತ್ರ

ಹೆಚ್.ಕೆ ಸುರೇಶ್ (ಬಿಜೆಪಿ), ಪರ್ವತೇ ಗೌಡ ಹೆಚ್.ಪಿ(ಆಪ್), ಬಿ.ಶಿವರಾಮ್ (ಕಾಂಗ್ರೆಸ್), ಕೆ.ಎಸ್.ಲಿಂಗೇಶ್ (ಜೆಡಿಎಸ್), ಗಂಗಧಾ‌ ಡಿ.ಎಸ್(ಬಿಎಸ್‌ಪಿ), ಆದೇಶ್.ಸಿ.ಎನ್ (ಕರ್ನಾಟಕ ರಾಷ್ಟ್ರ ಸಮಿತಿ), ಡಿ.ಡಿ ಲೊಕೇಶ್ (ಆರ್.ಪಿ.ಐ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ದಿನೆಸ್ ಹೆಚ್. ಆರ್, ಪರಮೇಶ್ ಎನ್.ಎಂ, ಪ್ರದೀಪ್ ಹೆಚ್.ಸಿ, ಡಿ.ಆ‌ ಮಲ್ಲಿಕಾರ್ಜುನ, ಮಹೇಶ್‌ ಬಿ.ಆರ್ ಸೇರಿ ಒಟ್ಟು 12 ಮಂದಿ ಕಣದಲ್ಲಿದ್ದಾರೆ.

ಹಾಸನ ವಿಧಾನಸಭಾ ಕ್ಷೇತ್ರ

ಹೆಚ್.ಪಿ ಸ್ವರೂಪ್ (ಜೆಡಿಎಸ್), ಪ್ರೀತಂ ಜೆ.ಗೌಡ(ಬಿಜೆಪಿ) ಎ.ಟಿ ಯೋಗೀಶ್ (ಆಪ್), ಬಿ.ಕೆ ರಂಗಸ್ವಾಮಿ( ಕಾಂಗ್ರೆಸ್), ಮಲ್ಲಯ್ಯ (ಬಿಎಸ್‌ಪಿ), ರಮೇಶ್ ವಿ(ಕರ್ನಾಟಕ ರಾಷ್ಟ್ರೀಯ ಸಮಿತಿ), ಸ್ವರೂಪ್ ಬಿ.ಎಂ(ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಆರ್.ಜಿ.ಸತೀಶ್, ಹೆಚ್.ವಿ.ಸ್ವಾಮಿ ಸೇರಿ ಒಟ್ಟು 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರ

ಜಿ.ದೇವರಾಜೇಗೌಡ(ಬಿಜೆಪಿ), ಗೀತಾ ಬಿ(ಆಪ್), ಶ್ರೇಯಸ್ ಎಂ.ಪಟೇಲ್ (ಕಾಂಗ್ರೆಸ್), ಹೆಚ್‌ಡಿ.ರೇವಣ್ಣ (ಜೆಡಿಎಸ್), ತಾರೇಶ್ ಹೆಚ್.ಎಸ್ (ಬಿಎಸ್‌ಪಿ), ಬಿ.ಕೆ ನಾಗರಾಜ(ಕರ್ನಾಟಕ ರಾಷ್ಟ್ರ ಸಮಿತಿ), ಹೆಚ್.ಡಿ ರೇವಣ್ಣ (ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ) ಹಾಗೂ ಪಕ್ಷೇತರ ಅಭ್ಯರ್ಥಿ ಡಿ.ಆರ್ ರಂಗಸ್ವಾಮಿ ಕಣದಲ್ಲಿದ್ದಾರೆ ಸೇರಿ ಒಟ್ಟು 8 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಅರಕಲಗೂಡು ವಿಧಾನಸಭಾ ಕ್ಷೇತ್ರ

ಹೆಚ್. ಯೋಗಾರಮೇಶ್ (ಬಿಜೆಪಿ), ಜಿ.ಟಿ ಜವರೇಗೌಡ(ಆಪ್), ಹೆಚ್.ಪಿ ಶ್ರೀಧರ್‌ಗೌಡ(ಕಾಂಗ್ರೆಸ್), ಎ.ಮಂಜು(ಜೆಡಿಎಸ್), ಹರೀಶ್ ಎ.ಪಿ(ಬಿಎಸ್‌ಪಿ), ಕೇಶವಮೂರ್ತಿ ಹೆಚ್. ಟಿ (ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ), ಮಂಜುನಾಥ ಹೆಚ್.ಪಿ (ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿ), ಶಿವರಾಜ್ ಜಿ.ಆರ್ (ಉತ್ತಮ ಪ್ರಜಾಕೀಯ ಪಕ್ಷ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಎಂ.ಟಿ ಕೃಷ್ಣಗೌಡ, ಪುಟ್ಟರಾಜ, ಪುನೀತ್ ಬಿ.ಆರ್, ವಿಜಯ ಭಾರತಿ, ಎಂ.ಸಿ ವಿಶ್ವನಾಥ, ಎಂ.ಆರ್ ಶಿವಣ್ಣ, ಶ್ರೀನಿವಾಸ್ ಎಂ.ಜಿ ಸೇರಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರ

ಎಸ್.ಮಂಜುನಾಥ(ಬಿಜೆಪಿ), ಕೆ.ಎಸ್.ಪವನ್ ಕುಮಾರ್ (ಆಪ್), ಮುರಳಿ ಮೋಹನ್ (ಕಾಂಗ್ರೆಸ್), ಕುಮಾರಸ್ವಾಮಿ ಹೆಚ್. ಕೆ(ಜೆಡಿಎಸ್), ಡಿ.ಶಿವಮ್ಮ(ಬಿಎಸ್‌ಪಿ), ಪ್ರದೀಪ್ ಬಿ.ವಿ( ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ), ಹೆಚ್. ಎಸ್ ಕುಮಾರಸ್ವಾಮಿ(ಕರುನಾಡ ಪಾರ್ಟಿ), ಪ್ರತಾಪ್ (ಉತ್ತಮ ಪ್ರಜಾಕೀಯ ಪಕ್ಷ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ರವಿ ಜಿ.ಸಿ., ವೇಣು ಎಂ.ಆರ್ ಸೇರಿ 10 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ ಎಂದು ಅರ್ಚನಾ ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ

ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾದ ಸೋಮವಾರ 13 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಶ್ರವಣಬೆಳಗೊಳದಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಜಿ ನಂಜೇಗೌಡ, ಅರಸೀಕೆರೆಯಲ್ಲಿ ಆಮ್ ಆದ್ಮ ಪಕ್ಷದ ಜಿ.ಜಿ ದಯಾನಂದ, ಬಿಎಸ್ ಪಿಯ ಎನ್.ಸಿ ಚಂದ್ರಶೇಖರ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಬಿ.ಎಸ್ ಅಶೋಕ, ರವಿ, ಹೆಚ್. ಆರ್ ರಾಜೇಶ್, ಡಿ.ಜಿ ರಂಗಪ್ಪ ಸೇರಿ 6 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಬೇಲೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಭವ್ಯ ಸಿ.ಆರ್ ನಾಮಪತ್ರ ಹಿಂಪಡೆದಿದ್ದಾರೆ.

ಹಾಸನದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಕಾವ್ಯ ಹೆಚ್‌.ಜಿ ಹಾಗೂ ಕೆ.ಪಿ ಶಿವಕುಮಾರ್ ನಾಮಪತ್ರ ಹಿಂಪಡೆದಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆದಿಲ್ಲ. ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ದಿವಾಕ‌ ಗೌಡ ಸಿ.ಡಿ, ಪಕ್ಷೇತರ ಅಭ್ಯರ್ಥಿ ಎ.ಎಂ ಮಲ್ಲೇಶ್ ಹಾಗೂ ಸಕಲೇಶಪುರದಲ್ಲಿ ಪಕ್ಷೇತರ ಅಭ್ಯರ್ಥಿ ಲೋಕೇಶ್ ಕುಮಾರ್ ಕೆ. ಇವರು ನಾಮಪತ್ರ ಹಿಂಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+