Arsikere Constituency: ಈ ಬಾರೀ ಜೆಡಿಎಸ್ ಕೋಟೆಯಲ್ಲಿ ಕೈ ದರ್ಬಾರ್? ಅರಸೀಕರೆಯ ಅರಸ ಆಗೋದ್ಯಾರು!?
ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಈ ಬಾರೀ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ವರದಿ, ವಿಶ್ಲೇಷಣೆ ಓದಿ
ಕಲ್ಪತರು ನಾಡು ಎಂದು ಹೆಸರುವಾಸಿಯಾಗಿ ಅರಸೀಕೆರೆ, ಹಾಸನ ಜಿಲ್ಲೆಯ ಎರಡನೇ ದೊಡ್ಡ ನಗರವಾಗಿದೆ. ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾಗಿ ಹಲವು ಕ್ಷೇತ್ರಗಳನ್ನ ಅರಸೀಕೆರೆ ಒಳಗೊಂಡಿದೆ. ಬೆಟ್ಟ ಗುಡ್ಡಗಳು, ಕುರುಚಲು ಕಾಡು ಹೊಂದಿರುವ ಅರಸೀಕೆರೆಯಲ್ಲಿ ರಾಗಿ, ಮೆಣಸಿನಕಾಯಿ, ಎಣ್ಣೆಕಾಳು, ಜೋಳ ಪ್ರಮುಖ ಬೆಳೆಗಳು. ವೇದಾವತಿ ನದಿ ಅಲ್ಲದೆ ಕ್ಷೇತ್ರದೆಲ್ಲೆಡೆ ದೊಡ್ಡ ಕೆರೆಗಳಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಇಲ್ಲಿ ಉತ್ತಮ ತಳಿಯ ದನ ಕರುಗಳನ್ನೂ ಸಾಕಲಾಗುತ್ತದೆ.
ಈ ಕ್ಷೇತ್ರದಾದ್ಯಂತ ಹೊಯ್ಸಳ ಶೈಲಿಯ ದೇವಸ್ಥಾನಗಳಿದ್ದು, ಮಾಲೆಕಲ್ಲು ತಿರುಪತಿ, ಜಾವಗಲ್ ನರಸಿಂಹ ದೇಗುಲ, ಲಕ್ಷ್ಮಿಪುರದ ಮಹಾಗಣಪತಿ, ಜೇನುಕಲು ಸಿದ್ದೇಶ್ವರ ಸ್ವಾಮಿ, ಬಾಣಾವರದ ತಿಮ್ಮಪ್ಪ ಸ್ವಾಮಿ ದೇಗುಲ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ ನಾವು ಅರಸೀಕೆರೆಯನ್ನ ನೋಡಬಹುದಾಗಿದೆ.

ಇನ್ನು ಇಲ್ಲಿನ ರಾಜಕೀಯ ಇತಿಹಾಸ ನೋಡುವುದಾದರೆ 1957 ರಿಂದಲೂ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಷ್ಟಿಯಲ್ಲೇ ಇದೆ. ಕೇವಲ ಒಂದು ಅವಧಿಗಷ್ಟೇ ಇಲ್ಲಿ ಬಿಜೆಪಿ ಗೆಲುವು ಕಂಡಿದೆ. 1957, 1967, 1972, 1978 ಹಾಗೂ 1983ರಲ್ಲಿ ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರೀ ನಿರಾಸೆಯಾಗಿತ್ತು. ಇಲ್ಲಿ ಕಣಕ್ಕಿಳಿದಿದ್ದ ಸ್ವತಂತ್ರ ಅಭ್ಯರ್ಥಿ ಬಿ. ಡಿ. ಗಂಗಾದರಪ್ಪ ಎಲ್ಲಾ ಪಕ್ಷಗಳನ್ನು ಸೋಲಿಸಿ ಗೆದ್ದಿದ್ದರು. ಆದರೆ 1989ರಲ್ಲಿ ಮತ್ತೆ ಕಾಂಗ್ರೆಸ್ ಕೆ. ಪಿ ಪ್ರಭುಕುಮಾರ್ ಗೆಲುವು ಸಾಧಿಸಿದ್ದರು.
ಇನ್ನೂ 1994ರಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಮೊದಲ ಬಾರಿಗೆ ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪರಮೇಶ್ವರಪ್ಪ ಗೆಲುವು ಸಾಧಿಸಿದರು. ನಂತರ 1999 ರಲ್ಲಿ ಮತ್ತೆ ಅರಸೀಕೆರೆ ಚುಕ್ಕಾಣಿ ಕಾಂಗ್ರೆಸ್ ಪಾಲಾಯ್ತು. 1999 ರಲ್ಲಿ ಕಾಂಗ್ರೆಸ್ ನಿಂದ ಜಿ. ವಿ ಸಿದ್ಧಪ್ಪ ಗೆಲುವು ಸಾಧಿಸಿದರು. ಇನ್ನೂ ಅಚ್ಚರಿ ಅಂದ್ರೆ ಹಲವು ವರ್ಷಗಳಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಕೈ ಸೇರಿದ್ದಿದ್ದ ಕ್ಷೇತ್ರ 2004 ರಲ್ಲಿ ಮೊದಲ ಬಾರಿಗೆ ಬಿಜೆಪಿ ಅರಸೀಕೆರೆಯಲ್ಲಿ ಗೆಲುವಿನ ನಗೆ ಬೀರಿತ್ತು. ಬಿಜೆಪಿ ಪಕ್ಷದ ಎ.ಎಸ್ ಬಸವರಾಜ್ ಗೆದ್ದು ಅರಸೀಕೆರೆ ಕೋಟೆಯಲ್ಲಿ ಕಮಲ ಅರಳಿಸಿದ್ದರು.

2008 ರಿಂದ ಜನಾತ ದಳದ ದರ್ಬಾರ್
2004 ರಲ್ಲಿ ಬಿಜೆಪಿ ವಶದಲ್ಲಿದ್ದ ಕ್ಷೇತ್ರವನ್ನ ತನ್ನ ಹಿಡಿತವನ್ನ ಸಾಧಿಸಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸಾಕಷ್ಟು ಪ್ರಯತ್ನ ಪಟ್ಟಿದ್ದು, 2008 ರಲ್ಲಿ ನಡೆದ ಚುನಾವಣೆಯಲ್ಲಿ ಅರಸೀಕೆರೆಯನ್ನು ಮತ್ತೆ ವಶಪಡಿಸಿಕೊಳ್ಳಬೇಕೆಂದು ಅಖಾಡಕ್ಕಿಳಿದಿದ್ದ ಜೆಡಿಎಸ್ಗೆ ಯಶಸ್ಸು ಸಿಕ್ಕಿತ್ತು.ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದರು. ನಂತರ 2013 ಹಾಗೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಮೂರು ಚುನಾವಣೆಯಲ್ಲೂ ಜೆಡಿಎಸ್ ಪಕ್ಷವೇ ಗೆಲುವು ಸಾಧಿಸುತ್ತಾ ಬಂದಿದೆ.
ಇನ್ನೂ ಜೆಡಿಎಸ್ ಪಕ್ಷದಿಂದ ಸಾಕಷ್ಟು ಅಂತರವನ್ನ ಕಾಯ್ದುಕೊಂಡು ಈ ಬಾರಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡರನ್ನ ಜೆಡಿಎಸ್ ನಲ್ಲಿ ಉಳಿಸಿಕೊಳ್ಳುವ ನಿಟ್ಟನಲ್ಲಿ ಇದುವರೆಗೂ ಜೆಡಿಎಸ್ ಅಭ್ಯರ್ಥಿಯನ್ನ ಘೋಷಿಸಿರಲಿಲ್ಲ. ಆದರೆ ಜೆಡಿಎಸ್ ತೊರೆದು ಕಾಂಗ್ರೆಸ್ ನಾಯಕರ ಜೊತೆಗೆ ಚುನಾವಣಾ ಪ್ರಚಾರವನ್ನ ಶಿವಲಿಂಗೇಗೌಡರು ನಡೆಸುತ್ತಿದ್ದು, ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿದ್ದ ಅರಸೀಕೆರೆಯ ಅರಸ ಆಗೋದ್ಯಾರು ಎನ್ನುವ ಲೆಕ್ಕಾಚಾರ ಜೋರಾಗಿದೆ.

ಶಿವಲಿಂಂಗೇಗೌಡ ಕಾಂಗ್ರೆಸ್ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಭರ್ಜರಿ ತಯಾರ ನಡೆಸುತ್ತಿದ್ದು, ಜೆಡಿಎಸ್ ಕೋಟೆಯನ್ನ ಉಳಿಸಿಕೊಳ್ಳುವ ಅನಿವಾರ್ಯತೆ ದಳಪತಿಗಳಿಗೆ ಎದುರಾಗಿದ್ದು, ಸೂಕ್ತ ಅಭ್ಯರ್ಥಿಯ ಹುಡುಕಾಟವನ್ನ ನಡೆಸಿದೆ ಎನ್ನಲಾಗಿದೆ. ಇಷ್ಟು ದಿನ ಜೆಡಿಎಸ್ ಭದ್ರಕೋಟೆಯಾಗಿದ್ದ ಅರಸೀಕೆರೆಯಲ್ಲಿ ಈ ಬಾರಿ ಬಹುತೇಕ ಕಾಂಗ್ರೆಸ್ ವಶಕ್ಕೆ ಒಳಪಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಕಾಂಗ್ರೆಸ್ ನಿಂದ ಕೆ.ಎಂ ಶಿವಲಿಂಗೇಗೌಡ ಅಭ್ಯರ್ಥಿಯಾಗಿ ಕಣಕ್ಕಿಳಿಯಲ್ಲಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಗೋವರ್ಧನ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಇನ್ನೂ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್‌ಆರ್ ಸಂತೋಷ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೆಂಗಳೂರು ಜಿಪಂ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ, ಜಿವಿಟಿ ಬಸವರಾಜು, ಅಣ್ಣಾಯಕನಹಳ್ಳಿ ವಿಜಯಕುಮಾರ್ ಸಹ ಟಿಕೆಟ್ ಗಾಗಿ ಲಾಭಿ ನಡೆಸಿದ್ದಾರೆ.
ಇನ್ನೂ ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿದ್ದ ಅರಸೀಕೆರೆಯ ಹಾಲಿ ಶಾಸಕ ಕೆಎಂ ಶಿವಲಿಂಗೇಗೌಡರು ಕಾಂಗ್ರೆಸ್‌ನ ಕೈ ಹಿಡಿದಿದ್ದು, ಒಕ್ಕಲಿಗ ಸಮಾಜದ ಮುಖಂಡ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಹೊಸೂರು ಗಂಗಾಧರ್ ಅಥವಾ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಣಾವರ ಅಶೋಕ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ನಲ್ಲಿ ತಯಾರಿ ನಡೆಸಿದೆ ಎನ್ನಲಾಗಿದೆ.
ಅರಸೀಕೆರೆ ಕ್ಷೇತ್ರದ ಒಟ್ಟು 2,14,763 ಮಂದಿ ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರು 1,08,152 ಆಗಿದ್ದರೆ, ಮಹಿಳಾ ಮತದಾರರು 1,05,604 ಮಂದಿ. ಇತರೆ ಮತದಾರರು ಏಳು ಮಂದಿ ಇದ್ದಾರೆ. ಇನ್ನೂ 2018 ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಶಿವಲಿಂಗೇಗೌಡ, ಕಾಂಗ್ರೆಸ್‌ನ ಜಿ ಬಿ ಶ್ರೀಧರರನ್ನು 43,689 ಮತಗಳ ಅಂತರದಿಂದ ಸೋಲಿಸಿದ್ದು, ಕೆಎಂ ಶಿವಲಿಂಗೇಗೌಡ 93,986 ಮತಗಳನ್ನ ಪಡೆದಿದ್ದರೇ, ಕಾಂಗ್ರೆಸ್ ನ ಜಿ ಬಿ ಶ್ರೀಧರ 50,297 ಮತಗಳನ್ನ ಗಳಿಸಿದ್ದರು ಹಾಗೂ ಬಿಜೆಪಿಯ ಜೆ.ಮರಿಸ್ವಾಮಿ 25,258 ಮತಗಳನ್ನ ಪಡೆದಿದ್ದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications