ಕುಮಾರಸ್ವಾಮಿ ಮನೆ ಮೇಲೆ ದಾಳಿಯಾದ್ರೆ ಯಡಿಯೂರಪ್ಪ ಗೆ ಸಮಸ್ಯೆ!

Recommended Video

      If IT attack happened on H DK will be a problem for BSY

      ಹಾಸನ, ಅಕ್ಟೋಬರ್ 22: 'ನನ್ನ ಮನೆ ಮೇಲೆ ಐಟಿ ದಾಳಿ ಆದ್ರೆ ಅಲ್ಲಿ ಸಿಗುವುದು ಯಡಿಯೂರಪ್ಪ ಮಾಡಿರುವ ಅಕ್ರಮಗಳ ದಾಖಲೆಗಳೇ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

      ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಸಿಎಂ ಆಗಿದ್ದಾಗ ಏನಾದರೂ ಸಂಪಾದನೆ ಮಾಡಿದ್ದರೆ ಅದು ಜನರನ್ನು ಮಾತ್ರ, ಸಿಎಂ ಕುರ್ಚಿ ಬಳಸಿಕೊಂಡು ನಾಣು ಲೂಟಿ ಮಾಡಿಲ್ಲ' ಎಂದು ಅವರು ಹೇಳಿದರು.

      'ದೇವೇಗೌಡರನ್ನು ರಾಜ್ಯ ಬಿಡಿ ಎಂದು ನಾನೇ ಹೇಳಿದ್ದೇನೆ. ದೇವೇಗೌಡ ಅವರ ಅವಶ್ಯಕತೆ ರಾಷ್ಟ್ರ ರಾಜಕಾರಣದಲ್ಲಿ ಇದೆ. ಅವರು ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು ಆದರೆ ಅವರು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿರಬೇಕು' ಎಂದು ಅವರು ಹೇಳಿದರು.

      If My House Raided Yediyurappa Will Be In Trouble: Kumaraswamy

      'ರಾಷ್ಟ್ರ ಮಟ್ಟದಲ್ಲಿ ಕೂಡಲೇ ಕ್ರಾಂತಿ ಆಗಬೇಕು ಇಲ್ಲದಿದ್ದರೆ ದೇಶ ಹಾಳಾಗಿ ಹೋಗುತ್ತದೆ. ಈಗಾಗಲೇ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ನೇತೃತ್ವ ವಹಿಸಿಕೊಳ್ಳದೇ ಇದ್ದರೆ ದೇಶ ಹಾಳಾಗುತ್ತದೆ' ಎಂದು ಅವರು ಹೇಳಿದರು.

      ರಾಜ್ಯ, ದೇಶದಲ್ಲಿ ನಡೆಯುತ್ತಿರುವ ದುರಾಡಳಿತದ ವಿರುದ್ಧ ದನಿ ಎತ್ತುವ ಅವಶ್ಯಕತೆ ಇದೆ. ಚುನಾವಣಾ ಘಟನಾವಳಿಗಳಿಗೂ ದೇಶದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳಿಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+