ದೇವೇಗೌಡರ ಭಾವಚಿತ್ರವಿರುವ ಬೋರ್ಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Posted By:
Subscribe to Oneindia Kannada

ಹೊಳೆನರಸೀಪುರ, ಜುಲೈ 26: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಭಾವಚಿತ್ರವುಳ್ಳ ಬೋರ್ಡ್ ವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿ ಎಚ್ ಡಿ ದೇವೇಗೌಡ ಅವರ ಅಭಿಮಾನಿಗಳ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ದೇವೇಗೌಡ ಅವರ ಅಭಿಮಾನಿಗಳು ಹೊಳೆನರಸೀಪುರ -ಚೆನ್ನರಾಯಪಟ್ಟಣದ ರಸ್ತೆ ತಡೆದು, ಆಕ್ರೋಶ ವ್ಯಕ್ತಪಡಿಸಿದರು. ಗನ್ನಿಕಡ ಗ್ರಾಮದಲ್ಲಿ ಈ ಘಟನೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಜಿಲ್ಲೆಯ ಅನೇಕ ಕಡೆಯಿಂದ ಹೊಳೆನರಸೀಪುರ ಸೇತುವೆ ಬಳಿ ಜಮಾಯಿಸಿ ನಂತರ ಪ್ರತಿಭಟನೆ ಕೈಗೊಂಡರು.

Holenarasipura: HD Deve Gowda Banner Burnt by Miscreants

ವಳಂಬಿಗೆ, ಗನ್ನಿಕಡ, ಅಡಿಕೆಕೆರೆ, ಹೊಸೂರು, ಉಲಿವಾಲ ಹಾಗೂ ಮೂಲೇ ಕಾಳೇನಹಳ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಡಾ ದೇವೇಗೌಡರ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಒ, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಘಟನೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪಿಎಸ್ ಐ ವಿಜಯಕೃಷ್ಣ ಅವರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮಾಡಿದರು. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Holenarasipura: HD Deve Gowda Banner Burnt by Miscreants in Gannikada village off Holenarasipura-Chennarayapatna road.
Please Wait while comments are loading...