Hemavathi Reservoir: ಕುಸಿಯುತ್ತಲೇ ಇದೆ ಹೇಮಾವತಿ ಜಲಾಶಯದ ಒಳಹರಿವು, ಇಂದಿನ ನೀರಿನ ಮಟ್ಟ ತಿಳಿಯಿರಿ
ಹಾಸನ, ಆಗಸ್ಟ್, 09: ಜುಲೈ ತಿಂಗಳಿನಲ್ಲಿ ಅಬ್ಬರದ ಮಳೆ ಸುರಿದ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟದಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ ಇದೀಗ ಆಗಸ್ಟ್ ತಿಂಗಳಿನಲ್ಲಿ ಮಳೆಯ ಪ್ರಮಾಣ ತಗ್ಗದ್ದು, ಒಳಹರಿವಿನ ಪ್ರಮಾಣ ಕುಸಿಯುತ್ತಲೇ ಇದೆ. ಹಾಗೆಯೇ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ನೀರಿನ ಮಟ್ಟ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು (ಆಗಸ್ಟ್ 09) ತುಸು ಹೆಚ್ಚಾಗಿದೆ.
ಹೇಮಾವತಿ ಜಲಾಶಯದ ನೀರಿನ ಮಟ್ಟ
* ಒಟ್ಟು ಗರಿಷ್ಠ ಮಟ್ಟ - 2922 ಅಡಿ
* ಇಂದಿನ ಮಟ್ಟ - 2916.15 ಅಡಿಗಳು
* ಸಂಗ್ರಹ ಸಾಮರ್ಥ್ಯ-37.103 ಟಿಎಂಸಿ
* ಇಂದಿನ ಸಂಗ್ರಹ 31.675 ಟಿಎಂಸಿ
* ಒಳಹರಿವು - 2675 ಕ್ಯೂಸೆಕ್
* ಹೊರಹರಿವು - 1390 ಕ್ಯೂಸೆಕ್

ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. 2 ವಾರಗಳ ಹಿಂದೆ ಈ ಜಲಾಶಯಕ್ಕೆ ನೀರು ಹರಿದುಬರುತ್ತಲೇ ಇದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದರು. ಮತ್ತೊಂದೆಡೆ ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು.
ಆದರೆ ಇದೀಗ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆ ಜಲಾಶಯದ ಒಳಹರಿವು ಕುಸಿದಿದೆ. ಒಂದು ವೇಳೆ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಆಗಸ್ಟ್ ತಿಂಗಳ ಅಂತ್ಯದಲ್ಲಿ ಭಾರೀ ಮಳೆಯಾದರೆ ಮತ್ತೆ ಜಲಾಶಯದ ಒಳಹರಿವು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.












Click it and Unblock the Notifications