ಹಾಸನ: ನಮಗೆ ಯಾರೂ ಚಾಣಕ್ಯರಲ್ಲ, ಜನರೇ ನಮ್ಮ ಪಾಲಿನ ಚಾಣಕ್ಯರು, ಬಿಜೆಪಿಗೆ ರೇವಣ್ಣ ಟಾಂಟ್
ಹಾಸನ, ಏಪ್ರಿಲ್, 23: ಹಾಸನ ಜಿಲ್ಲೆಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ವಿಚಾರಕ್ಕೆ ಬೇಲೂರಿನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದು, ಅಮೇರಿಕಾ ಪ್ರೆಸಿಡೆಂಟ್, ರಷ್ಯಾ ಪ್ರೆಸಿಡೆಂಟ್‌ನೂ ಕರೆದುಕೊಂಡು ಬರಲಿ. ನಮಗೆ ದೇವೇಗೌಡರು, ಕುಮಾರಣ್ಣನೇ ಸಾಕು, ಇನ್ಯಾರು ಬೇಡ. ನಮಗೆ ಯಾರು ಚಾಣಕ್ಯ ಅಲ್ಲ, ನಮ್ಮ ಪಾಲಿಗೆ ಜನರೇ ಚಾಣಕ್ಯರಾಗಿದ್ದಾರೆ ಎಂದು ಬಿಜೆಪಿಗೆ ಟಾಂಟ್ ನೀಡಿದರು.
123 ಟಾರ್ಗೆಟ್ ಇಟ್ಟಿದ್ದೀವಿ, ಒಂದು ಭಾರಿ ಬಹುಮತ ಕೊಡಿ. ದೇವೇಗೌಡರು ಸಾಮಾನ್ಯ ರೈತ, ಕುಮಾರಸ್ವಾಮಿ ಸಾಮಾನ್ಯ ರೈತನ ಮಗ. ನಮ್ಮ ಹತ್ತಿರ ಚಾಣುಕ್ಯರು ಅಂತಾ ಯಾರೂ ಇಲ್ಲ. ನಮ್ಮ ಜನರೇ ನಮಗೆ ಚಾಣುಕ್ಯರು ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದರು.

ಜನರ ಆಶೀರ್ವಾದ ಇರುವವರೆಗೂ ನಮಗೇನು ತೊಂದರೆಯಿಲ್ಲ. ಜನ ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿದ್ದು, ಇವೆರಡು ಪಕ್ಷಗಳನ್ನು ಸ್ವಲ್ಪ ದಿನ ವಿಶ್ರಾಂತಿಗೆ ಕಳುಹಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ಅಲ್ಲದೆ ಕುಮಾರಣ್ಣ, ದೇವೇಗೌಡರ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಗ್ರಾಮಗಳ ಅಭಿವೃದ್ಧಿ ಸೇರಿ ಐದು ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದರು.
ಇನ್ನು ಹಾಸನ ಕ್ಷೇತ್ರದಿಂದ ಎಚ್.ಎಸ್.ಪ್ರಕಾಶ್ ಅವರ ಮಗನನ್ನು ನಿಲ್ಲಿಸಿದ್ದೇವೆ. ಭವಾನಿ ಅವರೇ ಅವರ ಕೈ ಎತ್ತಿ ಹೇಳಿದ್ದಾರಲ್ಲಾ, ಇನ್ನೇನು ಬೇಕು. ನಮಗೆ ಬೇಕಿರುವುದು ಪಕ್ಷ, ಜನ, ರಾಜ್ಯ ಉಳಿಯಬೇಕು ಅಷ್ಟೇ ಎಂದರು. ಇನ್ನು ಪ್ರೀತಂಗೌಡ ಸೈಲೆಂಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ನನಗೆ ಮಾತನಾಡುವ ಶಕ್ತಿ ಇಲ್ಲ ಎಂದರು.
ಸ್ವರೂಪ್ ಜೊತೆ ಭವಾನಿ ರೇವಣ್ಣ ರ‍್ಯಾಲಿ
ಹಾಸನ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಕೈ ತಪ್ಪಿದ ಕಾರಣ ಎಚ್.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಇಷ್ಟು ದಿನ ಮುನಿಸಿಕೊಂಡಿದ್ದರು. ಇದೀಗ ಜೆಡಿಎಸ್ ಸ್ವರೂಪ್‌ಗೆ ಟಿಕೆಟ್ ನೀಡಿದ್ದು, ಮುನಿಸನ್ನು ಮರೆತು ಸ್ವರೂಪ್ ಜೊತೆ ಕ್ಷೇತ್ರದಲ್ಲಿ ಭವಾನಿ ರೇವಣ್ಣ ರ‍್ಯಾಲಿ ಮಾಡಿ ಗಮನ ಸೆಳೆದಿದ್ದರು.
ಹೀಗೆ ಭವಾನಿ ರೆವಣ್ಣ ಅವರು ಸ್ವರೂಪ್ ಜೊತೆ ರ‍್ಯಾಲಿ ಮಾಡುವ ಮೂಲಕ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಗೆಲ್ಲಿಸಲೇಬೇಕು ಅನ್ನುವ ಪಣ ತೊಟ್ಟಿದ್ದಾರೆ. ಹಾಸನದ ಅಭ್ಯರ್ಥಿ ಸೂರಜ್ ನೇತೃತ್ವದಲ್ಲಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಪ್ರಜ್ವಲ್ ರೇವಣ್ಣ ಕೂಡ ಭಾಗಿಯಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೀಗೆ ಟಿಕೆಟ್ ಗೊಂದಲದ ಸಿಟ್ಟು ಮರೆತು ಸ್ವರೂಪ್ ಮತ್ತು ರೇವಣ್ಣನವರ ಕುಟುಂಬ
ಇನ್ನು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಭವಾನಿ ರೇವಣ್ಣ ಅವರು ತಾನೇ ಅಭ್ಯರ್ಥಿ ಎಂಬಂತೆ ಉತ್ಸಾಹ ತೋರಿದ್ದಾರೆ. ಹಾಗೆಯೆ ರ‍್ಯಾಲಿಯ ಸಂಪೂರ್ಣ ಸಾರಥ್ಯವನ್ನು ಕೂಡ ಅರವೇ ವಹಿಸಿರುವುದು ಇನ್ನೂ ವಿಶೇಷವಾಗಿದೆ. ಹೀಗೆ ಸ್ವರೂಪ್ ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ತಾವು ಕೂಡ ಜನರತ್ತ ಕೈಬೀಸಿ ಮಿಂಚಿದ್ದರು.
ಎಲ್ಲಾರೂ ಒಟ್ಟಿಗೆ ಸೇರಿ ಹಾಸನದಲ್ಲಿ ಭರ್ಜರಿ ರೋಡ್ ಶೋ ಮಾಡುವ ಮೂಲಕ ಇನ್ನಿತರ ಪಕ್ಷಗಳ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಇದನ್ನೆಲ್ಲ ಗಮನಿಸಿದರೆ ಈ ಬಾರಿ ಶತಾಯಗತಾಯ ಬಿಜೆಪಿ ತೆಕ್ಕೆಯಿಂದ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ದೇವೇಗೌಡರ ಕುಟುಂಬ ಪಣತೊಟ್ಟು ನಿಂತಂದಿದೆ.












Click it and Unblock the Notifications