'ರೇವಣ್ಣ ಉತ್ತಮ ವ್ಯಕ್ತಿ. ಆದರೆ ತಕ್ಷಣವೇ ಕೋಪಿಸಿಕೊಳ್ಳುವುದು ಅವರ ಹುಟ್ಟುಗುಣ.

Recommended Video

      ಎಚ್ ಡಿ ರೇವಣ್ಣಗೆ ಕೋಪ ಬಿಡುವಂತೆ ಕಿವಿಮಾತು ಹೇಳಿದ ಎಚ್ ಡಿ ಕುಮಾರಸ್ವಾಮಿ | Oneindia Kannada

      ಹಾಸನ, ಸೆಪ್ಟೆಂಬರ್ 21: 'ನನ್ನ ಸಹೋದರ ಎಚ್ ಡಿ ರೇವಣ್ಣ ಬಹಳ ಹೃದಯವಂತ. ಅವರಿಗೆ 24 ಗಂಟೆಗಳಲ್ಲಿ ಹಾಸನವನ್ನು ಅಭಿವೃದ್ಧಿ ಮಾಡಿಬಿಡಬೇಕು ಅನ್ನೋ ಹುಚ್ಚು ಕನಸಿದೆ. ಆದರೆ ಅವರಿಗೆ ಕೋಪ ಜಾಸ್ತಿ. ಅದರಿಂದಲೇ ಅವರಿಗೆ ಸಮಸ್ಯೆಯಾಗುತ್ತಿರುವುದು' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

      ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಉದಯಪುರದಲ್ಲಿ ಗುರುವಾರ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಮಾತಿನ ನಡುವಲ್ಲಿ ಸಹೋದರ ರೇವಣ್ಣ ಅವರಿಗೆ ಕೋಪ ತ್ಯಜಿಸುವಂತೆ ಸಲಹೆ ನೀಡಿದರು.

      'ರೇವಣ್ಣ ಉತ್ತಮ ವ್ಯಕ್ತಿ. ಆದರೆ ತಕ್ಷಣವೇ ಕೋಪಿಸಿಕೊಳ್ಳುವುದು ಅವರ ಹುಟ್ಟುಗುಣ. ಅವರ ಕೋಪದ ಸ್ವಭಾವದಿಂದಾಗಿ ಅವರು ಮಾಡಿದ ಎಷ್ಟೋ ಅಭಿವೃದ್ಧಿ ಕಾರ್ಯಗಳೆಲ್ಲ ಕಾಣುತ್ತಿಲ್ಲ. ಕೋಪವೊಂದನ್ನು ತ್ಯಜಿಸಿದರೆ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಬಹುದು ಎಂದು ಕುಮಾರಸ್ವಾಮಿ ತುಂಬು ಕಾಳಜಿಯಿಂದ ಹೇಳಿದರು.

      HD Kumaraswamy suggests his brother HD Revanna to give up anger

      "ಎಷ್ಟೋ ಬಾರಿ ಹಾಸನದ ಅಭಿವೃದ್ಧಿಗಾಗಿ ತಕ್ಷಣವೇ ಹಣಬಿಡುಗಡೆ ಮಾಡುವಂತೆ ರೇವಣ್ಣ ನನ್ನ ಬಳಿ ಪಟ್ಟು ಹಿಡಿಯುತ್ತಾರೆ. ಆದರೆ ನನ್ನ ಪರಿಸ್ಥಿತಿಯನ್ನೂ ಅವರು ಅರ್ಥ ಮಾಡಿಕೊಳ್ಳಬೇಕು" ಎಂದು ಸಹ ಅವರು ಹೇಳಿದರು.

      ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಎಚ್ ಡಿ ರೇವಣ್ಣ, ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಒಂದಿಲ್ಲೊಂದು ವಿವಾದಾತ್ಮಕ ನಡೆಯ ಮೂಲಕವೇ ಹೆಸರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+