ಅನಾರೋಗ್ಯ, ಅನರ್ಹ ಸಂಕಷ್ಟದ ನಡುವೆ ದಳಪತಿಗಳ ಟೆಂಪಲ್ ರನ್: ಹಾಸನ ರಂಗನಾಥಸ್ವಾಮಿಗೆ ಹೆಚ್‌ಡಿಡಿ ವಿಶೇಷ ಪೂಜೆ
ಹಾಸನ ಸೆಪ್ಟೆಂಬರ್ 2: ಒಂದೆಡೆ ಹೆಚ್‌ಡಿ ಕುಮಾರಸ್ವಾಮಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಮತ್ತೊಂಡೆದೆ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹವಾಗಿದ್ದಾರೆ. ಈ ನಡುವೆ ದಳಪತಿಗಳ ಕುಟುಂಬ ದೇವಸ್ಥಾನದ ಮೊರೆ ಹೋಗಿದೆ.
ಈ ಸಂಕಷ್ಟದ ನಡುವೆ ಮಾಜಿ ಪ್ರಧಾನಿ ಕುಟುಂಬ ಹೆಚ್.ಡಿ.ದೇವೇಗೌಡರ ಕುಟುಂಬ ಮನೆದೇವರಿಗೆ ಭೇಟಿ ನೀಡಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಮಾವಿನಕೆರೆ ರಂಗನಾಥಸ್ವಾಮಿ ದೇವಲಾಯದಲ್ಲಿಂದು ಶ್ರಾವಣಮಾಸದ ವಿಶೇಷ ಪೂಜೆ ನಡೆಸಲಾಯಿತು.

ಈ ವೇಳೆ ಹೆಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ, ಪುತ್ರ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಮೊಮ್ಮಗ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಪೂಜೆ ವೇಳೆ ಭಾಗಿಯಾಗಿದ್ದರು. ಆದರೆ ಈ ಪೂಜೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿಯಾಗಿರಲಿಲ್ಲ.
ಸಂಸದ ಸ್ಥಾನದಿಂದ ಅನರ್ಹವಾಗಿರೋ ಪ್ರಜ್ವಲ್ ರೇವಣ್ಣ ವಕೀಲರೊಂದಿಗೆ ಚರ್ಚೆಗಾಗಿ ಬೆಂಗಳೂರಿಗೆ ತೆರಳಿದ್ದಾರೆಂದು ತಿಳಿದುಬಂದಿದೆ.
ರಂಗನಾಥನಿಗೆ ಪ್ರಿಯವಾದ ತಾವರೆ ಹೂ ಗುಚ್ಚವನ್ನ ಕೈಯಲ್ಲಿ ಹಿಡಿದು ತಂದ ಭವಾನಿ ರೇವಣ್ಣ ಪತಿಗೆ ಅದನ್ನು ದೇವಸ್ಥಾನದ ಅರ್ಚಕರಿಗೆ ನೀಡಲು ಸೂಚಿಸಿದರು. ಶ್ರಾವಣಮಾಸ ಹಿನ್ನೆಲೆಯಲ್ಲಿ ರಂಗನಾಥಸ್ವಾಮಿಗೆ ದಳಪತಿಗಳ ಕುಟುಂಬ ವಿಶೇಷ ಪ್ರಾರ್ಥನೆ ಸಲ್ಲಿಸಿದೆ.
ಮಗನ ಸಂಸತ್ ಸದಸ್ಯ ಸ್ಥಾನ ಅಸಿಂಧು ಹಿನ್ನೆಲೆ ಸುಪ್ರಿಂನಲ್ಲಿ ಜಯಸಿಗುವಂತೆ ಪ್ರಾರ್ಥನೆ ಸಲ್ಲಿಕೆಸಲಾಯಿತು.
ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೇಳಿಕೆ ಅವರು, 'ಮೊದಲ ಶ್ರಾವಣ ಶನಿವಾರ ನಾನು ಬರಲಿಕ್ಕೆ ಆಗಲಿಲ್ಲ. ಎರಡನೇ ಶ್ರಾವಣ ಶನಿವಾರ ಬಂದಿದ್ದೇನೆ. ಕಳೆದ ಬಾರಿ ದೆಹಲಿ ರಾಜಕಾರಣ ಹಿನ್ನಲೆ ಬರಲಿಕ್ಕೆ ಆಗಲಿಲ್ಲ. ನಾನು ನನ್ನ ಶ್ರೀಮತಿ ಚನ್ನಮ್ಮ ರೇವಣ್ಣ ಭವಾನಿ ಸೂರಜ್ ಎಲ್ಲರೂ ಪೂಜೆಮಾಡಿದ್ದೇವೆ' ಎಂದರು.
ಈ ವೇಳೆ ಪ್ರಜ್ವಲ್ ಬಗ್ಗೆ ಮಾತನಾಡಿದ ಅವರು, 'ಪ್ರಜ್ವಲ್ ಬೆಳಿಗ್ಗೆ ಪೂಜೆ ಮುಗಿಸಿ ಬೆಂಗಳೂರಿಗೆ ಹೋಗಿದ್ದಾರೆ. ಯಾವುದೇ ಮುಚ್ಚುಮರೆ ಇಲ್ಲ. ಅವರ ಆರ್ಡರ್ ಕಾಪಿ ಇನ್ನೂ ಸಿಕ್ಕಿಲ್ಲ. ಪೂರ್ಣ ಆರ್ಡರ್ಸ್ ಕಾಪಿ ಸಿಗದೆ ನಾನು ಕಾಮೆಂಟ್ ಮಾಡೋಕಾಗಲ್ಲ. ನಾನು ಒಬ್ಬ ಮಾಜಿ ಪ್ರಧಾನಿಯಾಗಿ ಗೌಪ್ಯವಾಗಿ ಇಡುವುದು ಸಮಂಜಸವಲ್ಲ. ಸಾಮಾನ್ಯವಾಗಿ ಸುಪ್ರೀಂಕೋರ್ಟ್ ನಲ್ಲಿ ಸ್ಟೇಗೆ ಹೋಗೋದು ನಡೆಯುತ್ತೆ. ಬೆಳಿಗ್ಗೆ ವಕೀಲರ ಭೇಟಿಗೆ ಪ್ರಜ್ವಲ್ ಹೋಗಿದ್ದಾನೆ' ಎಂದರು.
ಇನ್ನೂ ಕುಮಾರಸ್ವಾಮಿ ಬಗ್ಗೆ ಅವರು ಪ್ರಸ್ತಾಪ ಮಾಡಿದರು, 'ಕುಮಾರಸ್ವಾಮಿಯವರು ನಾಳೆ ಡಿಸ್ಚಾರ್ಜ್ ಆಗ್ತಾರೆ. ಅವರಿಗೆ ಕನಿಷ್ಠ ನಾಲ್ಕೈದು ದಿನ ರೆಸ್ಟ್ ಮಾಡಿ ಎಂದಿದ್ದಾರೆ. ವೈರಲ್ ಇನ್ಫೆಕ್ಷನ್ ಆಗಿದೆ ನಾನೂ ಕೂಡ ರೆಸ್ಟ್ ಮಾಡೋದಕ್ಕೆ ಹೇಳಿದ್ದೇನೆ. ನಮಗೆ ಸ್ವಾಭಾವಿಕವಾಗಿ ಶಕ್ತಿ ಇರುವಷ್ಟು ಪಕ್ಷಕ್ಕೆ ಹೋರಾಡುತ್ತೇವೆ' ಎಂದರು.
'ಇಂದು ನಾಳೆ ಹುಟ್ಟೂರಿನಲ್ಲೇ ಇರುತ್ತೇನೆ. ಮುಂದಿನ ವಾರವೂ ಪೂಜೆಗೆ ಬರಿತ್ತೇನೆ. ಹಾಸನ ಜಿಲ್ಲೆಒಂದೇ ಅಲ್ಲಾ ಬೇರೆ ಬೇರೆ ಕಡೆ ಪ್ರವಾಸ ಮಾಡುತ್ತೇನೆ. ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತೆ ಎಂಬುದನ್ನ ನಾನು ಹೇಳಬಾರದು. ಜಡ್ಜ್ಮೆಂಟ್ ನಲ್ಲಿ ಏನಿದೆ ಎಂದುದೇ ಇನ್ನು ಗೊತ್ತಿಲ್ಲ. ನ್ಯಾಯಾಧೀಶರು ಏನು ತೀರ್ಪು ಕೊಟ್ಟಿದ್ದಾರೆ ಅದರ ಬಗ್ಗೆ ನಾನು ಮಾತನಾಡೋದಿಲ್ಲ. ಮುಂದಿನ ಕಾನೂನು ಹೋರಾಟಮಾಡುತ್ತೇವೆ' ಎಂದ ಹೆಚ್ಡಿಡಿ ಪ್ರಜ್ವಲ್ ಬಗ್ಗೆ ಹೇಳಿದರು.












Click it and Unblock the Notifications