ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಪಾಮೃತ ಉದ್ಘಾಟಿಸಿ, ಎಳನೀರು ಹೀರಿದ ದೇವೇಗೌಡರು!

|
Google Oneindia Kannada News

ಹಾಸನ, ಸೆಪ್ಟೆಂಬರ್ 27 : ಎಳನೀರು ಉತ್ಪನ್ನಗಳನ್ನು ಮಾರಾಟ ಮಾಡಲು ಹಾಸನದಲ್ಲಿ ನಿರ್ಮಿಸಿರುವ 'ಕಲ್ಪಾಮೃತ' ಮಾದರಿ ಮಳಿಗೆಯನ್ನು ಮಾಜಿ ಪ್ರಧಾನಿ, ಹಾಸನ ಸಂಸದ ಎಚ್.ಡಿ.ದೇವೇಗೌಡ ಉದ್ಘಾಟಿಸಿದರು.

ಕಲ್ಪಾಮೃತ ತೆಂಗು ಉತ್ಪನ್ನ ಮಾರಾಟ ವ್ಯವಸ್ಥೆಗೆ ಹೊಸ ಹೆಜ್ಜೆಕಲ್ಪಾಮೃತ ತೆಂಗು ಉತ್ಪನ್ನ ಮಾರಾಟ ವ್ಯವಸ್ಥೆಗೆ ಹೊಸ ಹೆಜ್ಜೆ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ವಿಶೇಷ ಆಸಕ್ತಿ ವಹಿಸಿ ಎಳನೀರು ಉತ್ಪನ್ನಗಳ ಮಾರಾಟಕ್ಕೆ'ಕಲ್ಪಾಮೃತ' ಮಳಿಗೆಯನ್ನು ಆರಂಭಿಸಲು ಒಪ್ಪಿಗೆ ನೀಡಿದ್ದಾರೆ. ಇದರ ಮಾದರಿ ಮಳಿಗೆಯನ್ನು ಬುಧವಾರ ದೇವೇಗೌಡರು ಉದ್ಘಾಟಿಸಿದ್ದಾರೆ.

HD Deve Gowda inaugurates Kalpamrutha hut in Hassan

ಕಲಾಮೃತ ಮಳಿಗೆಯಲ್ಲಿ ಎಳನೀರು ಸವಿದ ದೇವೇಗೌಡರು, ತೆಂಗಿನ ಉತ್ಪನ್ನಗಳಿಂದ ಮಾಡಬಹುದಾದ ಆಹಾರ ಪದಾರ್ಥಗಳು ಹಾಗೂ ವಿವಿಧ ಬಗೆಯ ಪಾನಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಯವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದರಿಂದ ಜಿಲ್ಲೆಯ ಹಾಗೂ ರಾಜ್ಯದ ತೆಂಗಿನ ಉತ್ಪಾದಕರಿಗೆ ಅನುಕೂಲವಾಗುವ ವಿಶ್ವಾಸ ವ್ಯಕ್ತಪಡಿಸಿದರು.

'ರೈತರಿಗೆ ಕಲ್ಪಾಮೃತದಂತ ಮಾರುಕಟ್ಟೆ ಮತ್ತು ತಾಂತ್ರಿಕ ನೆರವು ಒದಗಿಸುವುದರಿಂದ ಎಳನೀರು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ರಾಸಾಯನಿಕ ಹಾಗೂ ಕೃತಕ ಬಣ್ಣ ಮಿಶ್ರಣಗಳ ಜ್ಯೂಸ್ ಕುಡಿಯುವ ಬದಲು ಜೀವಾಮೃತ ಸೇವನೆ ಆರೋಗ್ಯಕ್ಕೆ ಉತ್ತಮವಾಗಲಿದೆ' ಎಂದರು ಹೇಳಿದರು.

ಶ್ರವಣಬೆಳಗೊಳ : ಮಸ್ತಕಾಭಿಷೇಕದಲ್ಲಿ ಪ್ರವಾಸಿಗರಿಗೆ ಎಳನೀರು ಭಾಗ್ಯಶ್ರವಣಬೆಳಗೊಳ : ಮಸ್ತಕಾಭಿಷೇಕದಲ್ಲಿ ಪ್ರವಾಸಿಗರಿಗೆ ಎಳನೀರು ಭಾಗ್ಯ

'ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಇಂತಹ ಮಾರಾಟ ಮಳಿಗೆ ಪ್ರಾರಂಭವಾಗಬೇಕು. ರಾಜ್ಯಕ್ಕೆ ಇದರ ವಿಸ್ತರಣೆಯಾಗಬೇಕು ಕೇಂದ್ರದಿಂದ ದೊರೆಯಬಹುದಾದ ಆರ್ಥಿಕ ಹಾಗೂ ತಾಂತ್ರಿಕ ನೆರವುಗಳನ್ನು ಒದಗಿಸಲು ಪ್ರಯತ್ನ ನಡೆಸಲಾಗುತ್ತದೆ' ಎಂದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕರಾದ ಹೆಚ್.ಎಸ್. ಪ್ರಕಾಶ್, ನಗರ ಸಭೆ ಅಧ್ಯಕ್ಷರಾದ ಡಾ.ಹೆಚ್.ಎಸ್.ಅನಿಲ್ ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Hassan district administration setuped Kalpamrutha huts to promote coconut water, products. Former PM and Hassan MP HD Deve Gowda inaugurated hut on September, 27, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X