ಅಕ್ಟೋಬರ್ 21ರಿಂದ ಭಕ್ತರಿಗೆ ಹಾಸನಾಂಬೆ ದರ್ಶನ ಭಾಗ್ಯ

ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲು ಗುರುವಾರ ತೆರೆಯಲಾಗಿದೆ. ಅಕ್ಟೋಬರ್ 21ರಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ಸಿಗಲಿದೆ.ಐತಿಹಾಸಿಕ ದೇಗುಲಕ್ಕೆ ಬರುವ ಭಕ್ತರನ್ನು ಕಾಯಲು 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಹಾಸನ, ಅಕ್ಟೋಬರ್ 20: ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲು ಗುರುವಾರ ತೆರೆಯಲಾಗಿದೆ. ಅಕ್ಟೋಬರ್ 21ರಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ಸಿಗಲಿದೆ.

ಆಶ್ವಯುಜ ಮೊದಲ ಗುರುವಾರದಿಂದ ಬಲಿಪಾಡ್ಯಮಿ ಅಮಾವಾಸ್ಯೆ ತನಕ ದೇವಿ ತನ್ನ ಭಕ್ತರಿಗೆ ದರ್ಶನ ನೀಡುತ್ತಾಳೆ. ಸುಮಾರು 13 ದಿನಗಳ ಈ ಐತಿಹಾಸಿಕ ದೇಗುಲಕ್ಕೆ ಬರುವ ಭಕ್ತರನ್ನು ಕಾಯಲು 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಸಹಾಯಕ ಆಯುಕ್ತ ಎಚ್ಎಲ್ ನಾಗರಾಜ್ ಹೇಳಿದರು. [ಹಾಸನಾಂಬೆ ಸ್ಥಳ ಪುರಾಣ ಓದಿ]

Hasanamba Temple opens for Devotees October 20 - November 1

ಅಕ್ಟೋಬರ್ 20ರಿಂದ ನವೆಂಬರ್ 1ರವರೆಗೆ ಹಾಸನಾಂಬೆ ದೇವಾಲಯ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರುತ್ತದೆ. ಈ ಬಾರಿಯೂ ಸಹ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇಗುಲದ ಸುತ್ತಾ ಶಾಶ್ವತ ಬಾರಿಕೇಡ್‍ನ್ನು ನಿರ್ಮಿಸಲಾಗಿದೆ.

ನಿರ್ಮಾಣ ಹಂತದಲ್ಲಿದ್ದ ರಾಜಗೋಪುರ ಕಾರ್ಯ ಮುಕ್ತಾಯವಾಗಿದ್ದು ಅದಕ್ಕೆ ಚಿನ್ನಲೇಪಿತ ಬಣ್ಣ ಬಳಿಯಲಾಗಿದೆ. ದೀಪಾಲಂಕಾರ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ ಹಾಗೂ ಶೌಚಾಲಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬ ದರ್ಶನಕ್ಕಾಗಿ ಬೆಂಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹೊರ ರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.

ವಿಶೇಷ ಪಾಸ್ ಸೌಲಭ್ಯ: ಭಕ್ತಾದಿಗಳಿಗೆ 300 ರು ಗಳ ವಿಶೇಷ ಪಾಸ್ ಸೌಲಭ್ಯ ಒದಗಿಸಲಾಗುತ್ತಿದೆ. ಕಳೆದ ಬಾರಿ ಸ್ಪೆಶಲ್ ಪಾಸ್ 250 ರು ಗೆ ಲಭ್ಯವಿತ್ತು. ಹಾಸನ ತಹಸೀಲ್ದಾರ್ ಶಿವಶಂಕರಪ್ಪ, ಹಿರಿಯ ಪೊಲೀಸ್ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಸನಾಂಬೆ ಉತ್ಸವ ಸಿದ್ಧತೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+