ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನಾಂಬ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಪೂರ್ಣ: 3.69 ಕೋಟಿ ರೂ. ಆದಾಯ ಸಂಗ್ರಹ

|
Google Oneindia Kannada News

ಹಾಸನ ಅಕ್ಟೋಬರ್ 29: ವರ್ಷಕ್ಕೆ ಒಂದು ಬಾರಿ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆಯ ದೇವಸ್ಥಾನದ ಹುಂಡಿ ಎಳಿಕೆ ಕಾರ್ಯ ಪೂರ್ಣಗೊಂಡಿದೆ. ತಡರಾತ್ರಿವರೆಗೂ ಎಣಿಕೆ ಕಾರ್ಯ ಮಾಡಲಾಯಿತು. ಈ ವೇಳೆ 69 ಕೋಟಿ ರೂ. ಆದಾಯ ಸಂಗ್ರಹವಾಗಿರುವುದು ತಿಳಿದು ಬಂದಿದೆ.

ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 13ರಂದು ಅಕ್ಟೋಬರ್​ 27ರವರೆಗೂ ತೆರೆಯಲಾಯಿತು. ಈ ವೇಳೆ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷದ 51 ಸಾವಿರದ 251 ರೂ ಆದಾಯ ಸಂಗ್ರಹವಾಗಿದೆ. ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂ ಸಂಗ್ರಹವಾದರೆ, ವಿಶೇಷ ದರ್ಶನದ ಪಾಸ್ ಮಾರಾಟದಿಂದಲೂ 1 ಕೋಟಿ 48 ಲಕ್ಷದ,27 ಸಾವಿರದ 600 ರೂ ಸಂಗ್ರಹವಾಗಿದೆ. ಜೊತೆಗೆ ಲಡ್ಡು ಪ್ರಸಾದ ಮಾರಾಟ ದಿಂದ 32 ಲಕ್ಷದ 82 ಸಾವಿರದ 716 ರೂ ಆದಾಯ ಬಂದರೆ ಎಲ್ಲಾ ಮೂಲಗಳೂ ಸೇರಿ ಒಟ್ಟು 3,69,51,251 ರೂ ಸಂಗ್ರಹವಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಹಾಸನಾಂಬೆಯ ದರ್ಶನ ಕಲ್ಪಿಸಲಾಗುತ್ತದೆ. ಅರ್ಚಕರು ಗರ್ಭಗುಡಿ ಬಾಗಿಲಿಗೆ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ಅಕ್ಟೋಬರ್ 13ರಂದು ಹಾಸನಾಂಬೆ ಭಕ್ತರಿಗೆ ದರ್ಶನ ನೀಡಿದ್ದಳು. ಸತತ ಒಂದು ಗಂಟೆ ಕಾಲ ಗರ್ಭಗುಡಿ ಬಾಗಿಲ ಸಮೀಪ ಪೂಜೆ ಮಾಡಲಾಯಿತು. ಒಟ್ಟು 15 ದಿನ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

Hasanamba Temple Hundi Collection

ಮೊದಲ ದಿನ ದೇಗುಲ ಸ್ವಚ್ಛ ಮಾಡಬೇಕೆಂದು ಗರ್ಭಗುಡಿಗೆ ಬೀಗ ಹಾಕಲಾಯಿತು. ರೂಢಿಯಂತೆ ಪ್ರತೀ ವರ್ಷ ಬಾಗಿಲು ತೆರೆದ ಬಳಿಕ ಆ ಕ್ಷಣ ದೇಗುಲದಲ್ಲಿ ಹಾಜರಿರುವ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈ ವರ್ಷ ಅರ್ಚಕರು ಏಕಾ ಏಕಿ ಗರ್ಭಗುಡಿಗೆ ಬೀಗಹಾಕಿ ಹೋಗಿದ್ದಾರೆ.

ಆದರೆ ಇನ್ನೂ ಸಾವಿರಾರು ಭಕ್ತರು ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಅಧಿಕೃತವಾಗಿ ಮೊದಲ ದಿನ‌ ಭಕ್ತರಿಗೆ ದರ್ಶನ ಇರೋದಿಲ್ಲ ಎಂಬ ಸೂಚನೆ ಇದ್ದರೂ ಭಾರೀ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿರುವುದು ಗಮನಾರ್ಹ. ಆದರೂ ಹಾಸನಾಂಬೆಯ ಮೊದಲ ದಿನದ ದರ್ಶನಕ್ಕಾಗಿ ನೂಕು ನುಗ್ಗಲು ಉಂಟಾಗಿತ್ತು. ದೇಗುಲದ ಆವರಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಹಾಸನಾಂಬೆ ಉತ್ಸವದ ವೈಭವ ತಗ್ಗಿತ್ತು. ಆದ್ರೆ, ಈ ಸಲ ಅದ್ಧೂರಿ ಉತ್ಸವವನ್ನು ಜಿಲ್ಲಾಡಳಿತ ಮಾಡಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

ಹಾಸನಾಂಬೆ ದೇಗುಲ ಹಲವು ಪಾವಡಗಳಿಂದಲೂ ಭಕ್ತರನ್ನ ಸೆಳೆಯುತ್ತೆ. ದೇವಿಗೆ ಒಮ್ಮೆ ಹಚ್ಚಿದ ಹಣತೆ ಆರಲ್ಲ. ದೇವರ ಮುಡಿಗಿಟ್ಟ ಹೂ ಬಾಡಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡ್ಕೊಂಡು ಬಂದಿದೆ. ಹೀಗೆ, ಈ ಸಲವೂ ಈ ಪಾವಡವನ್ನು ದೇವಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

English summary
The doors of the historic Hassanambe temple were opened on October 13 to October 27. This time the highest amount of revenue has been collected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X