ಹಾಸನ: ಹೇಮಾವತಿ ಮುಳುಗಡೆ ಸಂತ್ರಸ್ತರಿಂದ ಅರೆಬೆತ್ತಲೆ ಪ್ರತಿಭಟನೆ
ಹಾಸನ, ಸೆಪ್ಟೆಂಬರ್ 26: ಹೇಮಾವತಿ ಮುಳುಗಡೆ ಸಂತ್ರಸ್ತರು ಹಾಸನ ಡಿಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ಜಲಾಶಯ ನಿರ್ಮಾಣವಾಗಿ 50 ವರ್ಷ ಕಳೆದರೂ ಭೂಮಿ ಸಿಗದೆ ಪರದಾಡುತ್ತಿರುವ ಸಂತ್ರಸ್ತರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸುಮಾರು 50 ವರ್ಷದ ಹಿಂದೆ ನಿರ್ಮಾಣವಾದ ಹೇಮಾವತಿ ಜಲಾಶಯಕ್ಕೆ ಸ್ಥಳೀಯರು ಭೂಮಿ ನೀಡಿದ್ದು, ಪರಿಹಾರಕ್ಕಾಗಿ ಇನ್ನೂ ಪರದಾಡುತ್ತಿದ್ದಾರೆ. ಭೂಮಿ ಕೊಡಿ ಇಲ್ಲಾ ಜಲಾಶಯದ ನೀರು ಖಾಲಿ ಮಾಡಿ, ನಮ್ಮ ಜಮೀನು ನಮಗೆ ಕೊಡಿ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

ಹೆಚ್ ಆರ್ ಪಿ ಯೋಜನೆಯಲ್ಲಿ ಜಮೀನು ನೀಡಿದ್ದರೂ ಪೋಡಿ( ಜಮೀನಿನ ಭಾಗ ಮಾಡುವುದು ) ಮಾಡಿಲ್ಲ. ಹತ್ತಾರು ವರ್ಷಗಳಿಂದ ಜಮೀನು ಪೋಡಿ ಮಾಡಿಕೊಡದೆ ಸತಾಯಿಸುತ್ತಿದ್ದಾರೆ . ಕೆಲಸವರಿಗೆ ನೀಡಿರುವ ಭೂಮಿಯನ್ನು ಬೇಗ ಪೋಡಿ ಮಾಡಿಕೊಡಿ ಎಂದು ಪ್ರತಿಭಟನಾ ನಿರತ ಸಂತ್ರಸ್ತರು ಆರೋಪಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಮಸ್ಯೆಯಾಗಿದೆ. ಪೋಡಿ ಮಾಡದಿರುವುದರಿಂದ ಸಾಲ ಸೌಲಭ್ಯ, ಬೆಳೆ ಪರಿಹಾರ ಪಡೆಯಲಾಗುತ್ತಿಲ್ಲ ಎಂದು ಆರೋಪಿಸಿ ಆಲೂರು, ಸಕಲೇಶಪುರ ತಾಲೂಕಿನ ಹೆಚ್ ಆರ್ ಪಿ ಸಂತ್ರಸ್ತ ಜಮೀನುದಾರರು ಪ್ರತಿಭಟನೆ ನಡೆಸಿದ್ದಾರೆ.

ಹೇಮಾವತಿ ಜಲಾಶಯದಿಂದ ನೀರು ಹರಿಸದಂತೆ ಜೆಡಿಎಸ್ ಪ್ರತಿಭಟನೆ
ಹಾಸನ: ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಡ್ಯಾಂಗೆ ಮುತ್ತಿಗೆ ಹಾಕಲು ಯತ್ನಿಸಿದರು.
ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಗೇಟ್ ಮುಂಭಾಗ ಜಮಾವಣೆಗೊಂಡ ಜೆಡಿಎಸ್ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಗೊರೂರು-ಅರಕಲಗೂಡು ರಸ್ತೆ ಸಂಚಾರ ತಡೆದು ಧರಣಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ನಗರಸಭೆ ಸದಸ್ಯರಾದ ಸಿ.ಆರ್. ಶಂಕರ್, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಅಮೀರ್ ಜಾನ್, ಚಂದ್ರೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications