'ನನಗೂ ಸ್ವಾಭಿಮಾನ ಇದೆ': ಡಿಕೆಶಿ ಆರೋಪಕ್ಕೆ ರೇವಣ್ಣ ಗರಂ
ಹಾಸನ, ಜೂನ್ 15: ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರು ತಮ್ಮ ಖಾತೆಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಡಿಕೆಶಿವಕುಮಾರ್ ಆರೋಪ ಮಾಡಿದ್ದಕ್ಕೆ ಸಿಟ್ಟಾಗಿರುವ ರೇವಣ್ಣ ಅವರು ಡಿಕೆಶಿ ಮೇಲೆ ಗರಂ ಆಗಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನಗೂ ಸ್ವಾಭಿಮಾನ ಇದೆ, ಹೀಗೆಲ್ಲಾ ನನ್ನನ್ನ ಹೆದರಿಸಿದ್ರೆ, ಓಡಿಹೋಗಲ್ಲ' ಎಂದು ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಎದುರೇಟು ನೀಡಿದ್ದಾರೆ.
ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಂತ ನಾನು ಯಾರಿಗೂ ಪತ್ರ ಬರೆದಿಲ್ಲ, ನನಗೂ ಸ್ವಾಭಿಮಾನ ಇದೆ, ಆ ರೀತಿಯ ಕಾರ್ಯಕ್ಕೆ ನಾನು ಕೈ ಹಾಕುವುದಿಲ್ಲ, ಅವರ ಖಾತೆಯಲ್ಲಿ ಹಸ್ತಕ್ಷೇಪ ಮಾಡಿದ್ರೆ ಸಾಕ್ಷಿ ತೋರಿಸಲು ಎಂದು ಅವರು ಸವಾಲು ಹಾಕಿದರು.

ಮುಖಾಮುಖಿ ಸಿಕ್ಕಾಗ ಅವರ ಬಳಿಯೇ ಈ ವಿಷಯ ಚರ್ಚೆ ಮಾಡುತ್ತೇನೆ ಎಂದ ಅವರು, ಹಾಗೇನಾದರೂ ದೂರು ಬಂದರೆ ನೇರವಾಗಿ ನನ್ನನ್ನು ಕರೆದು ಮಾತನಾಡಿ ಎಂದು ಡಿಸಿಎಂ ಬಳಿ ಹೇಳಿದ್ದೇನೆ ಎಂದು ಅವರು ಹೇಳಿದರು.
ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರು ತಮ್ಮ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡುತ್ತಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ಅವುರ ಆರೋಪಿಸಿದ್ದರು.












Click it and Unblock the Notifications