Cauvery dispute: ಸಮಯ ಬಂದಾಗ ನಾನೇ ಮಾತನಾಡ್ತೇನೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೀಗೆ ಹೇಳಿದ್ದೇಕೆ?
ಹಾಸನ, ಸೆಪ್ಟೆಂಬರ್, 03: ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದ್ದು, ಈ ನಿಲುವಿನ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಹಾಗೆಯೇ ಹಾಸನ ತಾಲೂಕಿನ ಬೈಲಹಳ್ಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಸಿದ್ದರಾಮಯ್ಯ ಅವರ ಸಭೆಯಲ್ಲಿ ಮಾತನಾಡಿದ್ದು, ಸಭೆಯಲ್ಲಿ ನಡೆದ ಮಾತಿನ ಸಾರಾಂಶವನ್ನು ಹೇಳಿದ್ದಾರೆ. ಒಂದು ಕಡೆ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವನ್ನು ಕೊಡಲಿಲ್ಲ. ಮತ್ತೊಂದೆಡೆ ಪ್ರಾಧಿಕಾರ ಇನ್ನೂ ಏನೂ ತೀರ್ಮಾನ ಮಾಡಿಲ್ಲ. ಹಾಗೆಯೇ ಮಂಡ್ಯದಲ್ಲಿ ಕಾವೇರಿ ಹೋರಾಟ ನೆಡೆಯುತ್ತಿದೆ. ಈಗ ನಾನು ಏನೂ ಮಾತನಾಡುವುದಿಲ್ಲ, ಸಮಯ ಬಂದಾಗ ಮಾತನಾಡುತ್ತೇನೆ. ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು ಎಂಬ ಸನ್ನೀವೇಶ ಬಂದಾಗ ಮಾತನಾಡುತ್ತೇನೆ ಎಂದರು.
ಎಚ್.ಡಿ.ದೇವೇಗೌಡ ಅಸಮಾಧಾನ
ಇನ್ನು ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಮಾತನಾಡಿ, ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಾಂಬೆಯಲ್ಲಿ 28 ಸದಸ್ಯರ ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಯಿತು. ಆಗ ಸೆಪ್ಟೆಂಬರ್ 30ರೊಳಗೆ ಎಲ್ಲಾ ಸೀಟ್ ನಿಗಧಿ ಮಾಡುತ್ತೇವೆ ಅಂತಾ ಹೇಳಿದ್ದು ಏನಾಗುತ್ತದೆಯೋ ನೋಡೋಣ ಎಂದು INDIA ಕಮಿಟಿಯ ವಿರುದ್ಧ ವಾಗ್ದಾಳಿ ನಡೆಸಿದರು.

ಈಗಾಗಲೇ ಒಂದು ಕಮಿಟಿ ಮಾಡಿದ್ದಾರೆ, ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ? ಅಥವಾ ಆ ಒಕ್ಕೂಟದ ಸಂಚಾಲಕರು ಯಾರು ಅಂತ ಹೇಳಿದ್ದಾರಾ?, ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. ಎರಡು ದಿನ ಮೀಟಿಂಗ್ ನಡಿಯಿತು. ಇನ್ನೂ ಚುನಾವಣೆ ಏಳು-ಎಂಟು ತಿಂಗಳು ಇದೆ. ನೋಡೋಣ ಬನ್ನಿ ನಾನು ಬದುಕಿದ್ದೀನಿ ಎಂದು ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದರು.
ಕಾವೇರಿ ವಿವಾದಕ್ಕೆ ಸಂಕಷ್ಟ ಸೂತ್ರವೊಂದೇ ಪರಿಹಾರ
ಆಪರೇಷನ್ ಮಾಡುತ್ತಲೇ ಭಾರತೀಯ ಜನತಾ ಪಕ್ಷದವರು ಬೀದಿಗೆ ಬಂದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪ ಮಾಡಿದರು. ಹಾಗೆಯೇ ಇದೆ ವೇಳೆ ಕಾವೇರಿ ವಿವಾದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಅನ್ನುವ ವಿವರವನ್ನು ಇಲ್ಲಿ ಗಮನಿಸಿ.
ನಗರದಲ್ಲಿಂದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾವೇರಿ ವಿವಾದದಲ್ಲಿ ರಾಜ್ಯದ ರೈತರ ಹಿತಾಸಕ್ತಿಯನ್ನು ಸರ್ಕಾರ ಕಾಪಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟರು. ಇದು ನೂರು ವರ್ಷಗಳ ವಿವಾದವಾಗಿದೆ. ನಮಗೂ ತಮಿಳುನಾಡು ಹಾಗೂ ನಾಲ್ಕು ರಾಜ್ಯಗಳಿಗೆ ಈ ವಿಷಯದಲ್ಲಿ ಕೋರ್ಟ್ ಹೋಗಿ ನಿರ್ಣಯ ಆದೇಶ ಆಗಿ ಕಾವೇರಿ ಮ್ಯಾನೇಜ್ಮೆಂಟ್ ಮಾಡಲಾಗಿದೆ. ಈ ಸಲ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಸಾಕಷ್ಟು ನೀರಿನ ಸಂಗ್ರಹ ನಮಲ್ಲಿ ಇಲ್ಲ. ಕಾರಣ ಕಾನೂನು, ಕೋರ್ಟ್ ನಮ್ಮ ಹಿತಾಸಕ್ತಿ ನೋಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ನಮ್ಮ ಸರ್ಕಾರ ಮನವರಿಕೆ ಮಾಡಿದೆ. ಇನ್ನೂ ಇದೊಂದು ಸಂಕಷ್ಟ ಪರಿಸ್ಥಿತಿ. ಈ ಸಂಕಷ್ಟ ಸೋತ್ರ ಇನ್ನೂ ಬಂದಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಿ ಸಂಕಷ್ಟ ಸೋತ್ರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಕಾಂಗ್ರೆಸ್‌ನಿಂದ ಬಿಜೆಪಿ ಶಾಸಕರು ಬರುತ್ತಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆ ತರಹ ಮಾಡಿನೇ ಬೀದಿಗೆ ನಿಂತಿದ್ದಾರೆ. ಜನರ ಆದೇಶನೇ ಬೇರೆ, ಜನರ ಆಶೋತ್ತರಗಳ ವಿರುದ್ಧ ನಡೆದುಕೊಂಡಿದ್ದರಿಂದ 2008ರಲ್ಲೂ ಬಹುಮತ ಇಲಲ್ಲ, 2018 ರಲ್ಲಿಯೂ ಬಹುಮತ ಇಲ್ಲ. ಆವಾಗ ಆಪರೇಷನ್ ಕಮಲ ಮಾಡಿದರಲ್ಲ ಏನಾಯಿತು? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಇನ್ನೂ ವಿರೋಧ ಪಕ್ಷದ ನಾಯಕನ ಮಾಡಲಿಕ್ಕೆ ಆಗಿಲ್ಲ. ಕರ್ನಾಟಕದ ಇತಿಹಾಸದಲ್ಲಿಯೇ ವಿರೋಧ ಪಕ್ಷದ ನಾಯಕನಿಲ್ಲಿದೇ ಕಾಲಹರಣ ಮಾಡತ್ತಿದ್ದಾರೆ. ಯಾರು ಬಿಜೆಪಿಗೆ ನಮ್ಮ ಶಾಸಕರು ಹೋಗುವುದಿಲ್ಲ, ಸರ್ಕಾರ ಸ್ಥಿರವಾಗಿದೆ. ಅವಧಿ ಸಂಪೂರ್ಣ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಮತ್ತೇ ಅಸಮಾಧಾನಗೊಂಡು ಸಿಎಂಗೆ ಪತ್ರ ಬರೆದ ವಿಚಾರ ಕುರಿತು ಮಾತನಾಡಿದ ಅವರು, ಬಸವರಾಜ ರಾಯರಡ್ಡಿ ಮಂತ್ರಿ ಆದವರು, ಹಿರಿಯ ಶಾಸಕರು, ನಮ್ಮ ಸ್ನೇಹಿತರು. ಅಧಿಕಾರಿಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಅವರಿಗೆ ಗೊತ್ತಿದೆ. ನನಗೆ ಅವರು ಅಸಮಾಧಾನಗೊಂಡಿದ್ದಾರೆ ಅಂತಾ ಅನಿಸುವುದಿಲ್ಲ. ಹೆಚ್ಚು ಅಭಿವೃದ್ಧಿ ಮಾಡಬೇಕೆನ್ನುವ ಬಗ್ಗೆ ಹೆಚ್ಚು ಉತ್ಸಾಹ ಹೊಂದಿರುವರು. ಏನಾದರೂ ಆಗಿದ್ದರೆ ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ ಎಂದರು.
ಎಸ್‌ಸಿ, ಎಸ್‌ಟಿ ಇಲಾಖೆ ಹಣ ಐದು ಗ್ಯಾರಂಟಿಗಳಿಕೆ ಬಳಕೆ ಆರೋಪ ಕುರಿತು ಮಾತನಾಡಿದ ಅವರು, ಇದು ಸುಳ್ಳು ಎಸ್ಸಿ ಪಿಇಟಿ ನಾನ್ ಗ್ರಾಂಟೆಬಲ್ ಅನುದಾನ ಎಸ್‌ಸಿ, ಎಸ್ಟಿ ಅವರಿಗೆ ಅಲ್ಲದೇ ಬೇರೇ ಉದ್ದೇಶಕ್ಕೆ ಬಳಕೆ ಮಾಡುವುದಕ್ಕೆ ಬರುವುದಿಲ್ಲ. ಬೇರೆ ಉದ್ದೇಶಕ್ಕೆ ಬಳಸಬಾರದು ಎಂಬ ಉದ್ದೇಶದಿಂದ 7 ಡಿಗೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಯಾವುದೇ ಕಾರಣಕ್ಕೂ ಬೇರೆ ಕಡೆ ಅಥವಾ ಐದು ಗ್ಯಾರಂಟಿಗಳಿಗೆ ಕೊಡುವುದಕ್ಕೆ ಬರಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications