ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಹಬ್ಬ; ಹಾಸನದಲ್ಲಿ ಪ್ರೀತಂ ಗೌಡ ಸೀರೆ ವಿತರಣೆ, ಕೆಲವೆಡೆ ಟಿವಿ, ಗಣೇಶ ಮೂರ್ತಿ ವಿತರಣೆ!

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಆಗಸ್ಟ್‌ 25 : ಚುನಾವಣೆ ಇನ್ನೂ ತಿಂಗಳುಗಳೇ ಇವೆ, ಆದರೆ ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯ ಹಲವು ಕ್ಷೇತ್ರದಲ್ಲಿ ಚುನಾವಣಾ ರಂಗು ಪಡೆದುಕೊಳ್ಳುತ್ತಿದೆ. ಅದರಲ್ಲೂ ಹಾಸನ ವಿಧಾನಸಭಾ ಕ್ಷೇತ್ರದಲ್ಲಂತೂ ಮತ್ತೊಮ್ಮೆ ಕಮಲ ಅರಳಿಸಬೇಕೆಂದು ಶಾಸಕ ಪ್ರೀತಂಗೌಡ ಪಣ ತೊಟ್ಟಿದ್ದಾರೆ.

ಹಾಸನ ನಗರದಲ್ಲಿ ವಿರೋಧ ಪಕ್ಷಗಳು ಪ್ರಬಲ ಅಭ್ಯರ್ಥಿಗಾಗಿ ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ ಎನ್ನುವುದನ್ನ ಅರಿತಿರುವ ಪ್ರೀತಂ ಗೌಡ, ಕುಟುಂಬ ರಾಜಕಾರಣ ಅಸ್ತ್ರವನ್ನು ಪ್ರಯೋಗಿಸಿ, ಅದನ್ನು ವಿರೋಧಿಸುತ್ತಾ ಕ್ಷೇತ್ರದಾದ್ಯಂತ ಓಡಾಟ ಮಾಡುತ್ತಿದ್ದಾರೆ. ಜೊತೆಗೆ ಜನರಿಗೆ ಹಲವು ರೀತಿಯ ಕೊಡುಗೆ ನೀಡಿ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಗಣೇಶ ಪ್ರತಿಷ್ಠಾಪನೆ, ವಿಸರ್ಜನೆಗೆ ಸರಕಾರದಿಂದ ಮಾರ್ಗಸೂಚಿ ಬಿಡುಗಡೆಗಣೇಶ ಪ್ರತಿಷ್ಠಾಪನೆ, ವಿಸರ್ಜನೆಗೆ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ

ಕ್ಷೇತ್ರದಲ್ಲಿ ಮತಗಳನ್ನ ಸೆಳೆಯುವುದಕ್ಕೆ ಮುಂದಾಗಿರುವ ಪ್ರೀತಂ, ಗೌರಿ ಗಣೇಶ ಹಬ್ಬದ ಹಿನ್ನಲೆ ಕ್ಷೇತ್ರದ ಮಹಿಳೆಯರಿಗೆ ಸೀರೆಗಳನ್ನು ಹಂಚಿಕೆ ಮಾಡಿದ್ದಾರೆ. ಮನೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಬಾಗಿನ ಕೊಡುತ್ತಿರುವ ಶಾಸಕರು, 75 ಸಾವಿರಕ್ಕೂ ಅಧಿಕ ಬಾಗಿನದ ಕಿಟ್ ಗಳನ್ನ ನೀಡುತ್ತಿದ್ದಾರೆ. ಒಂದು ಬಾಗಿನದ ಕಿಟ್ ನಲ್ಲಿ ಸೀರೆ, ಬಳೆ, ಕುಂಕುಮ ಇದ್ದು, ಕಾರ್ಯಕರ್ತರು ಮನೆ ಮನೆಗೆ ಹೋಗಿ ಕೊಡುತ್ತಿದ್ದಾರೆ.

Ganesha Chaturthi: Political Leaders Gift Saree, TV and Ganesha Idols to Party Activists

ವಿರೋಧ ಪಕ್ಷಗಳಿಂದ ಆಕ್ರೋಶ
ಶಾಸಕ ಪ್ರೀತಂ ಗೌಡ ಕೊಡುತ್ತಿರುವ ಬಾಗಿನದ ಕಿಟ್ ವಿತರಣೆ ಮಾಡುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿವೆ. ರಾಜಕಾರಣಕ್ಕಾಗಿ ಇಂತಹ ಕೀಳು ಮಟ್ಟಕ್ಕೆ ಕ್ಷೇತ್ರದ ಶಾಸಕರು ಇಳಿದಿದ್ದಾರೆ. ಕಳಪೆ ಗುಣಮಟ್ಟದ ಸೀರೆಗಳನ್ನ ತರಿಸಿ ಹಂಚುತ್ತಿದ್ದಾರೆ. ಮತಗಳಿಗಾಗಿ‌ ಮಾಡುವ ಈ ರೀತಿಯ ಗಿಮಿಕ್‌ಗಳಿಗೆ ಜನರು ಬಲಿಯಾಗುವುದಿಲ್ಲ. ಕಳೆದ ಹಲವು ದಶಕಗಳಿಂದ ನಮ್ಮ ತಂದೆಯವರಾದಿಯಾಗಿ ಕ್ಷೇತ್ರದಲ್ಲಿ ಹಲವು ಶಾಸಕರಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಆದರೆ ಪ್ರೀತಂಗೌಡರಷ್ಟು ಕೀಳು ಮಟ್ಟದ ರಾಜಕಾರಣ ಯಾರೂ ಮಾಡಿರಲಿಲ್ಲ.‌ ಅವರು‌ ಮಾಡಿರುವ ಅನೇಕ ಕಾಮಗಾರಿಗಳೂ ಕೂಡಾ ಕಳಪೆಯಿಂದ ಕೂಡಿದ್ದು, ಸರಕಾರದ ಕಾಮಗಾರಿಗಳಲ್ಲಿ ಪರ್ಸಂಟೇಜ್ ತೆಗೆದುಕೊಂಡು ಹೀಗೆ ಸೀರೆ ಹಂಚುವುದಕ್ಕೆ ಮುಂದಾಗಿದ್ದಾರೆ ಎಂದು ಶಾಸಕ ಪ್ರೀತಂಗೌಡ ವಿರುದ್ಧ ಜೆಡಿಎಸ್ ಮುಖಂಡ ಸ್ವರೂಪ್ ಆರೋಪಿಸಿದ್ದಾರೆ.‌

ರಂಗುಪಡೆದ ಚುನಾವಣೆ ವರ್ಷದ ಗಣೇಶೋತ್ಸವ; ಗಣೇಶ ಮೂರ್ತಿ ವಿತರಣೆಗೆ ರಾಜಕೀಯ ಪಕ್ಷಗಳ ಪೈಪೋಟಿರಂಗುಪಡೆದ ಚುನಾವಣೆ ವರ್ಷದ ಗಣೇಶೋತ್ಸವ; ಗಣೇಶ ಮೂರ್ತಿ ವಿತರಣೆಗೆ ರಾಜಕೀಯ ಪಕ್ಷಗಳ ಪೈಪೋಟಿ

ಹಾಸನ ಜಿಲ್ಲಾ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಪ್ರೀತಂಗೌಡ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೂಡಾ ಪ್ರಬಲ ಕ್ಯಾಂಡಿಡೇಟ್ ಹಾಕಿ ಗೆಲ್ಲಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ಅದೇನೇ ಆದರೂ ಚುನಾವಣಾ ಸಂದರ್ಭಗಳಲ್ಲಿ ಇದೆಲ್ಲಾ ಸಾಮಾನ್ಯವಾಗಿದೆಯಾದರೂ ಅಂತಿಮ ನಿರ್ಧಾರ ಮತದಾರನ ಕೈಯಲ್ಲಿರುತ್ತದೆ.

Ganesha Chaturthi: Political Leaders Gift Saree, TV and Ganesha Idols to Party Activists

ಚನ್ನಪಟ್ಟಣದಲ್ಲಿ ಗಣಪತಿ ಹಂಚುವುದರಲ್ಲೂ ರಾಜಕೀಯ
ಹಬ್ಬವನ್ನು ರಾಜಕಾರಕ್ಕೆ ಬಳಸಿಕೊಳ್ಳುವ ಯತ್ನ ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಉಚಿತ ಗಣೇಶ ನೀಡುವುದಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ಮುಖಂಡ ಜಯಮುತ್ತು ತಮ್ಮ ತಾಯಿಯ ನೆನೆಪಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಉಚಿತವಾಗಿ 501 ಗಣೇಶ ಮೂರ್ತಿಗಳ ವಿತರಣೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ಇತ್ತ ಜೆಡಿಎಸ್ ಮುಖಂಡರ ಗಣೇಶ ಮೂರ್ತಿ ವಿತರಣಗೆ ಸೆಡ್ಡು ಹೊಡೆದು ಇದೇ ಮೂದಲ ಬಾರಿಗೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್ ಕೂಡ 1000 ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಜೆಡಿಎಸ್, ಬಿಜೆಪಿ ಮುಖಂಡರ ಉಚಿತ ಗಣೇಶ ಮೂರ್ತಿ ವಿತರಣೆ ಪೈಪೋಟಿಯಲ್ಲಿ ಗಣೇಶೋತ್ಸವ ರಾಜಕೀಯ ರಂಗು ಪಡೆದಿದೆ.

ಟಿವಿ ವಿತರಣೆ

ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರು ಗೌರಿಹಬ್ಬದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರಿಗೆ ಟಿವಿಗಳನ್ನು ವಿತರಿಸುತ್ತಿದ್ದಾರೆ. ಗ್ರಾ.ಪಂ ಚುನಾವಣೆಗಳಲ್ಲಿ ಗೆದ್ದ ಮತ್ತು ಸೋತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಉಚಿತವಾಗಿ 32 ಇಂಚಿನ ಟಿವಿಗಳನ್ನು ವಿತರಿಸುತ್ತಿದ್ದಾರೆ. ಟಿವಿಯನ್ನು ಆನ್ ಮಾಡುತ್ತಿದ್ದಂತೆ ಸಚಿವ ಕೆ.ಸಿ. ನಾರಾಯಣಗೌಡ ಮತ್ತವರ ಕಾರ್ಯಕ್ರಮಗಳು, ಪ್ರಧಾನಿ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಸಹಿತ ದೃಶ್ಯಗಳು ಬರುವಂತೆ ಇನ್ ಬಿಲ್ಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

English summary
Political Leaders from BJP and JDS , Gifted Saree, TV and Ganesha Idols to Party Activists in Hassan, channapatna and KR Pete,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X