• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನದಲ್ಲಿ ಕಾರು ಅಪಘಾತ: ಒಂದೇ ಕುಟುಂಬದ ನಾಲ್ವರು ಸಜೀವ ದಹನ

|

ಹಾಸನ, ಫೆಬ್ರವರಿ 22: ಕಾರು ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವದಹನವಾದ ಘಟನೆ ಹಾಸನದ ಚನ್ನರಾಯಪಟ್ಟಣದ ಬಳಿ ಗುರುವಾರ ನಡೆದಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದಯಪುರ ಸಮೀಪ ಅಪಘಾತ ಸಂಭವಿಸಿದೆ. ಕುಂದಾಪುರ ಮೂಲದ ವಿವೇಕ ನಾಯಕ್,ಪತ್ನಿ ರೇಷ್ಮಾ ನಾಯಕ್, ಮಗಳು ವಿನಂತಿ, ಮಗ ವಿಘ್ನೇಶ್ ಮೃತಪಟ್ಟಿದ್ದಾರೆ.

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ಮೂವರು ಸ್ಥಳದಲ್ಲೇ ಮೃತಪಟ್ಟರೆ, ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ವಿಘ್ನೇಶ್ ಮೃತಪಟ್ಟಿದ್ದಾನೆ. ಬೆಂಗಳೂರಿನ ಸ್ಪೈಕಾರ್ ಸಂಸ್ಥೆಯಲ್ಲಿ ರೀಜನಲ್ ಮ್ಯಾನೇಜರ್ ಆಗಿ ವಿವೇಕ್ ನಾಯಕ್ ಕಾರ್ಯ ನಿರ್ವಹಿಸುತ್ತಿದ್ದ, ಅವರ ತಂದೆ ವಿಠಲ ನಾಯಕ್ ರ ವರ್ಷದ ತಿಥಿಗಾಗಿ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದರು. ಮನೆಯಿಂದ ವಿವೇಕ್ ಕುಟುಂಬ ಸಮೇತರಾಗಿ ಮುಂಜಾನೆ 5.30ಕ್ಕೆ ಹೊರಟಿದ್ದರು.

ನಿದ್ದೆಗೆ ಜಾರಿದ ಚಾಲಕ: ಮುಧೋಳದಲ್ಲಿ ಮೂವರು ಸ್ಥಳದಲ್ಲೇ ಸಾವು

ಉದಯಪುರ ಬಳಿ ಹೋಟೆಲ್ ಹತ್ತಿರ ಬರುತ್ತಿದ್ದಂತೆ ರಸ್ತೆಬದಿಯಲ್ಲಿದ್ದ ಸಣ್ಣ ಕಂಬಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ಶೌಚಾಲಯದ ಗೋಡೆಗೆ ಡಿಕ್ಕಿ ಹೊಡೆದಿದೆ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡಿತ್ತು ಆದರೆ ಬೆಂಕಿ ನಂದಿಸುವಲ್ಲಿ ಸ್ಥಳೀಯರು ವಿಫಲರಾಗಿದ್ದರು ಅಷ್ಟರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

English summary
Four members of a family, including a four year old child, were burnt alive when their care rammed a roadside toilet near udaypura of channarayapatna taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X