ಹಾಸನದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಬಸ್‌

ಹಾಸನ, ಜೂನ್‌ 30: ರಾಜ್ಯದಲ್ಲೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಬಸ್‌ ಸಂಚಾರವನ್ನು ಶುಕ್ರವಾರ ಹಾಸನದಲ್ಲಿ ಆರಂಭಿಸಲಾಗಿದೆ.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಕನಸಿನ ಯೋಜನೆಯಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್‌ ಸಂಚಾರಕ್ಕೆ ಮೊದಲ ದಿನ ಕೇವಲ ಮೂವರು ವಿದ್ಯಾರ್ಥಿನಿಯರು ಬಂದಿದ್ದರು. ಬೆಳಗ್ಗೆ 8.30ಕ್ಕೆ ಹೊಳೆನರಸೀಪುರದಿಂದ ಹೊರಟ ಬಸ್‌ 10 ಗಂಟೆಗೆ ಹಾಸನ ತಲುಪಿತು. 3 ವಿದ್ಯಾರ್ಥಿನಿಯರು ಬಸ್‌ನಲ್ಲಿ ಇದ್ದ ಕಾರಣ ಇತರೆ 11 ಮಹಿಳಾ ಪ್ರಯಾಣಿಕರಿಗೂ ಅವಕಾಶ ಕಲ್ಪಿಸಲಾಯಿತು.

ಮೊದಲ ದಿನವಾಗಿದ್ದರಿಂದ ವಿದ್ಯಾರ್ಥಿಗಳು ಬಂದಿಲ್ಲ, ಪ್ರಚಾರದ ಕೊರತೆಯೂ ಇದೆ ಎನ್ನಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಂದೇ ಬಸ್‌ನಲ್ಲಿ ಪ್ರಯಾಣಿಸುವುದರಿಂದ ಸಾಕಷ್ಟು ತೊಂದರೆ, ಗಲಾಟೆಗಳಾಗುತ್ತದೆ ಎಂದು ಪಾಲಕರು ನೀಡಿದ್ದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದರು.

Exclusive bus for girl students launched in Hassan

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಪ್ರಸ್ತಾಪ ಸಲ್ಲಿಸಿ ಯೋಜನೆ ಅನುಷ್ಠಾನಗೊಳಿಸಿದರು. ಆದರೆ, ಯಾವುದೇ ಪ್ರಚಾರ ನಡೆಸದೆ ಏಕಾಏಕಿ ಜಾರಿಗೊಳಿಸಿದ್ದರಿಂದ ಅರಿವಿರದ ವಿದ್ಯಾರ್ಥಿಗಳು ಎಂದಿನಂತೆ ತಾವು ಹೋಗುವ ಬಸ್‌ಗಳಲ್ಲೇ ಸಂಚರಿಸಿದರು. ವಿದ್ಯಾರ್ಥಿನಿಯರಿಗಾಘಿಯೇ ಪ್ರತ್ಯೇಕ ಬಸ್‌ ಸಂಚಾರ ಯೋಜನೆ ಹೊಳೆನರಸೀಪುರ ತಾಲೂಕಿಲ್ಲಿ ಯಶಸ್ವಿ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+