ನಿಮ್ಮ ಜೋಳಿಗೆ ತುಂಬಿಸಿಕೊಳ್ಳಿ, ಆದ್ರೆ ಕಾರ್ಯಕರ್ತರನ್ನ ತುಳಿಬೇಡಿ: ಶಿವಲಿಂಗೇಗೌಡ ವಿರುದ್ಧ ಸ್ವಪಕ್ಷದಲೇ ಆಕ್ರೋಶ
ಹಾಸನ, ಆಗಸ್ಟ್, 08: ಹಾಸನ ಜಿಲ್ಲೆಯ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಪಕ್ಷದೊಳಗೇ ಆಕ್ರೋಶ ಭುಗಿಲೆದ್ದಿದೆ.
ತಮ್ಮ ಜೋಳಿಗೆ ತುಂಬಿಸಿಕೊಳ್ಳುವುದಿದ್ದರೆ ತುಂಬಿಸಿಕೊಳ್ಳಲಿ. ಅದರೆ ಹಾಸನ ಜಿಲ್ಲೆಯ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ತುಳಿದು ಬದುಕುವುದು ಬೇಡ ಎಂದು ಕೆಪಿಸಿಸಿ ಸದಸ್ಯ ಶೇಷೇಗೌಡ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುವ ಮೂಲಕ ಶಾಸಕ ಶಿವಲಿಂಗೇಗೌಡರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸಭಾ ಚುನಾವಣಾ ವೇಳೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಶಾಸಕರಾಗಿರುವ ಶಿವಲಿಂಗೇಗೌಡರು ಸ್ವಪಕ್ಷದ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಮುಖಂಡ ಶೇಷೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಬಂದಿರುವ ಆರೋಪ ಸುಳ್ಳು
ಮತ್ತೊಂದೆಡೆ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳ ಪತ್ರ ವಿಚಾರವಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದ್ದು, ಇದು ಸತ್ಯಕ್ಕೆ ದೂರವಾರ ವಿಚಾರವಾಗಿದೆ. ಚಲುವರಾಯಸ್ವಾಮಿ ಅವರು ಉತ್ತಮ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದ್ದರು.
ಅವರಿಗೆ ಆತರಹದ ರಾಜಕರಣದ ಅವಶ್ಯಕತೆ ಇಲ್ಲ. ವಿನಾಕಾರಣ ಯಾರೋ ಆರೋಪ ಮಾಡಿದ್ದಾರೆ. ಹಿಂದೆಯೂ ಸಹ ಕಂಡಕ್ಟರ್ ಒಬ್ಬರ ಆತ್ಮಹತ್ಯೆ ವಿಚಾರವಾಗಿ ಕೂಡ ವಿಧಾನಸಭೆಯಲ್ಲಿ ಅವರ ವಿರುದ್ಧ ಮಾತನಾಡಿದ್ದರು. ನಾವು ನಮಗೆ ಬೇಕಾದವರಿಗೆ ಟ್ರಾನ್ಸ್‌ಫರ್‌ಗೆ ಲೆಟರ್ ಕೊಡುತ್ತೇವೆ. ಆದರೆ ಅದೊಂದೇ ವಿಚಾರವನ್ನ ಇಟ್ಟುಕೊಂಡು ಸದನದಲ್ಲಿ ಹೇಗೆ ಅವರ ಮೇಲೆ ಮುಗಿಬಿದ್ದರು ನೀವೆ ನೋಡಿದ್ದೀರಿ ಎಂದರು.
ಈಗ ಬಂದಿರುವ ಆರೋಪವು ಸುಳ್ಳು. ಯಾರು ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನಿಮಗೂ ಗೊತ್ತಿದೆ.ಅಧಿಕಾರ ಸಿಗಲಿಲ್ಲ ಅಂತಾ ಹೀಗೆಲ್ಲ ಮಾಡೋದು ಶೋಭೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹೇಳದೆ ಶಾಸಕ ಇಕ್ಬಾಲ್ ಹುಸೇನ್ ಆರೋಪಿಸಿದ್ದರು.
ನಾನು ಯಾರ ಹೆಸರನ್ನು ಹೇಳುವುದಿಲ್ಲ. ಅಧಿಕಾರಿಗಳು ಪತ್ರ ಬರಿದಿದ್ದರಾ? ಅಥವಾ ಯಾರಾದರೂ ಬರೆಸಿದ್ದರಾ? ಎಂಬುದು ತನಿಖೆ ಆದ ಮೇಲೆ ಸತ್ಯಾಸತ್ಯೆತೆ ಏನೆಂದು ಗೊತ್ತಾಗಲಿದೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದರು.












Click it and Unblock the Notifications