ನಾನೇ ಭವಿಷ್ಯ ಹೇಳ್ತೀನಿ, ಸರ್ಕಾರಕ್ಕೆ ಯಾವ ಆಪತ್ತೂ ಇಲ್ಲ: ರೇವಣ್ಣ

ಹಾಸನ, ಜನವರಿ 26: ಮೈತ್ರಿ ಸರ್ಕಾರಕ್ಕೆ ಆಪತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ, ಆದರೆ ನಾನು ಭವಿಷ್ಯ ಹೇಳ್ತೀನಿ ಸರ್ಕಾರಕ್ಕೆ ಏನೂ ಆಗಲ್ಲ ಎಂದು ಸಚಿವ ಎಚ್‌.ಡಿ.ರೇವಣ್ಣ ಅವರು ಹೇಳಿದರು.

ಭವಿಷ್ಯ, ಪೂಜೆ, ಶಕುನಗಳನ್ನು ಹೆಚ್ಚು ನಂಬುವ ರೇವಣ್ಣ ಅವರು ಇಂದು ಹಾಸನದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವುಗಳ ಉದಾಹರಣೆಗಳನ್ನೇ ಬಳಸಿ ಸರ್ಕಾರ ಬೀಳುವುದಿಲ್ಲ ಎಂದು ಭರವಸೆ ನೀಡಿದರು.

ಫೆಬ್ರವರಿ 8ಕ್ಕೆ ಸರ್ಕಾರಕ್ಕೆ ಕಂಟಕ ಇದೆ ಎಂದು ಕೆಲಸರು ಹೇಳುತ್ತಿದ್ದಾರೆ. ಅದೆಲ್ಲವೂ ಸುಳ್ಳು. ಈ ಸರ್ಕಾರವನ್ನು ಯಾರೂ ಅಲ್ಲಾಡಿಸಲಾಗಲ್ಲ, ಭವಿಷ್ಯದಲ್ಲಿ ಸರ್ಕಾರ ಇನ್ನಷ್ಟು ಗಟ್ಟಿಯಾಗಲಿದೆ ಎಂದು ರೇವಣ್ಣ ಹೇಳಿದರು.

coalition government will stay 5 years: HD Revanna

ಸುಮ್ಮನೆ ಸುಳ್ಳು ಸುದ್ದಿ ಹರಡಿಸುವವರ ಮಾತಿಗೆ ಕಿವಿಗೊಡಬೇಡಿ, ಬೇಕಿದ್ದರೆ ಯುಗಾದಿ ನಂತರ ಒಳ್ಳೆ ಪಂಚಾಗ ಬರುತ್ತದೆ ಅದನ್ನು ನೋಡಿ ನಾನೇ ಮತ್ತೊಮ್ಮೆ ಭವಿಷ್ಯ ಹೇಳುತ್ತೇನೆ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ರೇವಣ್ಣ ಹೇಳಿದರು.

ಬಿಜೆಪಿಯವರು 104 ಜನ ಶಾಸಕರಿದ್ದೀರಿ, ನೀವು ಸರ್ಕಾರದ ಲೋಪಗಳನ್ನು ಎತ್ತಿ ಹಿಡಿಯಿರಿ ಅದನ್ನು ಬಿಟ್ಟು ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡಿ ಆಪರೇಷನ್ ಮಾಡಲು ಪ್ರಯತ್ನಿಸಬೇಡಿ ಎಂದು ಕಿವಿಮಾತು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+