ಹಾಸನ: ಕಲ್ಲುಕ್ವಾರೆಯಲ್ಲಿ ಸಿಡಿಮದ್ದು ಸ್ಫೋಟಕ್ಕೆ ಮೂವರು ಸಾವು
ಹಾಸನ, ಮೇ 02 : ಜಿಲ್ಲೆಯ ಕಟ್ಟಾಯ ಬಳಿ ಸೋಮವಾರ ಕಲ್ಲುಕ್ವಾರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಗದೀಶ್(50), ಪುನೀತ್(22), ಮತ್ತು ನಾಗರಾಜು(40) ಎಂದು ಗುರುತಿಸಲಾಗಿದೆ. ಇನ್ನೂ ಕೆಲವಾರು ಮಂದಿಗೆ ಗಾಯಗಳಾಗಿವೆ. ಬಂಡೆ ಸಿಡಿಸಲು ನಿನ್ನೆ ಇಲ್ಲಿ ಜಿಲೆಟಿನ್ ಸಿಡಿಮದ್ದು ಅಳವಡಿಸಲಾಗಿತ್ತು. ಗುಡುಗು ಸಿಡಿಲ ರಭಸಕ್ಕೆ ಜಿಲೆಟಿನ್ ಸ್ಫೋಟಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications