ಅಸ್ಸಾಂನಲ್ಲಿ 80 ಪ್ರಯಾಣಿಕರಿದ್ದ ನಾಡ ದೋಣಿ ಮುಳುಗಿ ಹಲವರು ನಾಪತ್ತೆ

ಗುವಾಹತಿ (ಅಸ್ಸಾಂ), ಅಕ್ಟೋಬರ್ 17: ಅಸ್ಸಾಂನ ಸೋನಿತ್ ಪುರ್ ಜಿಲ್ಲೆಯ ಜಿಯಾ ಭರಾಲಿ ನದಿಯಲ್ಲಿ ಗುರುವಾರ ದೋಣಿಯೊಂದು ಮುಳುಗಿದ್ದು, ಹಲವರು ನಾಪತ್ತೆ ಆಗಿದ್ದಾರೆ. ನದಿಯಲ್ಲಿ ಮುಳುಗಿದ್ದು ನಾಡದೋಣಿ ಎಂದು ವರದಿಗಳಿಂದ ತಿಳಿದುಬಂದಿದೆ. ಲಾಲ್ ಟಪು ಬಳಿಯ ಬಿಹಿಯಾ ಗ್ರಾಮದಿಂದ ತೇಜ್ ಪುರ್ ನಲ್ಲಿ ಇರುವ ಪಂಚ್ ಮಿಲೆ ಪ್ರದೇಶಕ್ಕೆ ತೆರಳುತ್ತಿತ್ತು. ಮಾರ್ಗ ಮಧ್ಯೆ ದೋಣಿ ಮಗುಚಿದೆ.

ಎಪ್ಪತ್ತರಿಂದ ಎಂಬತ್ತು ಮಂದಿ, ಜತೆಗೆ ಹಲವು ಮೋಟಾರ್ ಬೈಕ್ ಗಳು ದೋಣಿಯಲ್ಲಿ ಇದ್ದವು. ತೇಜ್ ಪುರ್ ನ ಪಂಚ್ ಮಿಲೆಯಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಗೆ ಜನರು ತೆರಳುತ್ತಾರೆ. ದೋಣಿ ಮುಳುಗಿದಾಗ ಹಲವರು ಈಜಿ ಸುರಕ್ಷಿತವಾಗಿ ದಡ ಸೇರುವಲ್ಲಿ ಸಫಲರಾಗಿದ್ದಾರೆ.

Several Missing After Boat Capsizes In River In Assam

ಈ ಮಧ್ಯೆ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್ ಡಿಆರ್ ಎಫ್) ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ನಾಪತ್ತೆ ಆಗಿರುವವರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+