ಕೊರೊನಾ ನೆಪ, ಮುಸ್ಲಿಮರ ವಿರುದ್ಧ ಪಿತೂರಿ ಎಂದ ಅಸ್ಸಾಂ ಶಾಸಕನ ಬಂಧನ

ಗುವಾಹಟಿ, ಏಪ್ರಿಲ್ 7: ಕೊರೊನಾ ಹೆಸರಲ್ಲಿ ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಅಸ್ಸಾಂ ಶಾಸಕ ಅಮಿನುಲ್ ಇಸ್ಲಾಂ ಅವರನ್ನು ಬಂಧಿಸಲಾಗಿದೆ.

ಶಾಸಕ ಅಮಿನುಲ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ತುಣುಕಿನ ಬಗ್ಗೆ ವಿಧಾನಸಭಾಧ್ಯಕ್ಷ ಗಮನಕ್ಕೆ ತರಲಾಗಿದೆ. ನಂತರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಮುಖ್ಯಸ್ಥ ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.

ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖಂಡ ಅಮಿನುಲ್ ಇಸ್ಲಾಂ ತಮ್ಮ ಸಹಚರರೊಂದಿಗೆ ಮಾತನಾಡುತ್ತಾ , ಕೊರೊನಾ ಕ್ವಾರಂಟೈನ್ ವ್ಯವಸ್ಥೆ ಅಕ್ರಮ ನಿವಾಸಿಗಳನ್ನು ಬಂಧನದಲ್ಲಿಡುವ ವ್ಯವಸ್ಥೆಗಿಂತ ಕಡೆಯಾಗಿದೆ. ಈ ಕೇಂದ್ರಗಳು ಅತ್ಯಂತ ಕೊಳಕಾಗಿದೆ.

Sedition Case Against Assam MLA Arrested

ಕಳೆದ ತಿಂಗಳು ನವದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಈ ಕೇಂದ್ರಗಳಲ್ಲಿನ ವೈದ್ಯರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ. ಒಟ್ಟಾರೆ ಮುಸ್ಲಿಮರನ್ನು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದರು.

ಕೊವಿಡ್ 19 ನೆಪದಲ್ಲಿ ಮುಸ್ಲಿಮರನ್ನು ಬಲಿಪಶು ಮಾಡಲು ಕೇಂದ್ರ ಸರ್ಕಾರ ಪಿತೂರಿ ನಡೆಸಿದೆ ಎಂದು ಹೇಳಿ ಸಾಮಾಜಿಕ ಸಾಮರಸ್ಯ ಕದಡಲು ಯತ್ನಿಸಿದ ಅಸ್ಸಾಂನ ನಾಗಾಂವ್ ಜಿಲ್ಲೆಯ ಡಿಂಗ್ ಕ್ಷೇತ್ರದ ಶಾಸಕನನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+