ಪ್ರದ್ಯುಮ್ನ ಕೊಲೆ : ಗುರ್ಗಾಂವ್ ಕೋರ್ಟ್ ನಿಂದ ಜಾಮೀನು ನಿರಾಕರಣೆ

Posted By:
Subscribe to Oneindia Kannada

ಗುರ್ಗಾಂವ್, ಜನವರಿ 08: ಗುರ್ಗಾಂವಿನ ರಾಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕ ಪ್ರದ್ಯುಮ್ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, 11ನೇ ತರಗತಿಯ ಬಾಲಕನಿಗೆ ಜಾಮೀನು ನೀಡಲು ಗುರ್ಗಾಂವ್ ನ ನ್ಯಾಯಾಲಯವೊಂದು ನಿರಾಕರಿಸಿದೆ.

ಸಿಬಿಐ(ಕೇಂದ್ರ ತನಿಖಾ ದಳ)ವು ಈ ಕೊಲೆಯ ಕುರಿತು ನಡೆಸುತ್ತಿರುವ ತನಿಖೆ ಪ್ರಗತಿಯಲ್ಲಿರುವುದರಿಂದ ಆರೋಪಿಯನ್ನು ಬಿಡುಗಡೆ ಮಾಡದಂತೆ ಕೋರ್ಟಿಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ಡಿಸೆಂಬರ್ ನಲ್ಲಿ ಮತ್ತು ಜ.8 ರಂದು ಒಟ್ಟು ಎರಡು ಬಾರಿ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ಬಾರಿಯೂ ಜಾಮೀನು ನಿರಾಕರಿಸಿದೆ.

ಪ್ರದ್ಯುಮ್ನ ಹತ್ಯೆ : ಪೊಲೀಸ್ ಬ್ಯಾಂಕ್ ಬ್ಯಾಲನ್ಸ್ ಮೇಲೆ ಸಿಬಿಐ ಕಣ್ಣು

ಸೆಪ್ಟೆಂಬರ್ 8 ರಂದು ಗುರ್ಗಾಂವಿನ ರಾಯನ್ ಶಾಲೆಯ ಶೌಚಾಲಯದಲ್ಲಿ ಪ್ರದ್ಯಮ್ನನ ಕತ್ತು ಸೀಳಿ ಸಾಯಿಸಲಾಗಿತ್ತು. ಘಟನೆಯ ನಂತರ ನಾಪತ್ತೆಯಾಗಿದ್ದ ಶಾಲೆಯ ಬಸ್ ಕಂಡಕ್ಟರ್ ನನ್ನೇ ಅಪರಾಧಿ ಎಂದು ಶಂಕಿಸಲಾಗಿತ್ತಾದರೂ, ಕೆಲ ದಿನಗಳ ನಂತರ ಕಂಡಕ್ಟರ್ ದೋಷಮುಕ್ತ ಎಂಬುದು ಸಾಬೀತಾಗಿತ್ತು. ಆದರೆ ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಇದೇ ಶಾಲೆಯಲ್ಲಿ11 ನೇ ತರಗತಿ ಓದುತ್ತಿದ್ದ 16 ವರ್ಷದ ವ್ಯಕ್ತಿಯೇ ಪ್ರದ್ಯುಮ್ನನನ್ನು ಕೊಲೆಮಾಡಿದ್ದು ತಿಳಿದುಬಂದಿತ್ತು.

Pradyumn murder case: a Gurgaon court rejects bail to accused

ಪ್ರದ್ಯಮ್ನ ಠಾಕೂರ್ ಕುಟುಂಬಸ್ಥರು ಮತ್ತು ಸಾರ್ವಜನಿಕರ ಆಕ್ರೋಷದ ಮೇರೆಗೆ ಓ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Gurgaon(Gurugram) court rejected bail to 11 year old teenager, who was accused of killing 7 year old Pradyumn Thakur in Ryan international school in Gurgaon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ