Gadag: ತಂದೆಯಿಂದಲೇ ಮಗಳು ಗರ್ಭಿಣಿ: ತಾಯಿ ಆಕ್ರಂದನ
ಗದಗ ಏಪ್ರಿಲ್ 9: ಹೆಣ್ಣುಮಕ್ಕಳನ್ನು ಹೊರಗಡೆ ಹೇಗೆ ಕಳುಹಿಸೋದು ಅಂತ ಯೋಚನೆ ಮಾಡುವಾಗ ಮನೆಯವರಿಂದಲೇ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಯಾರಿಂದ ಅನ್ನೋದು ಗೊತ್ತಾದರೆ ರಕ್ತ ಕುದಿಯುವುದರಲ್ಲಿ ಅನುಮಾನವೇ ಇಲ್ಲ. ಜೀವನ ಪರಿಯಂತ ರಕ್ಷಣೆ ನೀಡಬೇಕಾದ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಗಳು ಗರ್ಭಿಣಿ ಆಗಿರುವುದನ್ನು ತಿಳಿದು ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.
ಹೌದು ಗದಗದಲ್ಲಿ ಇಡೀ ಮಾನವಕುಲವೇ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಗದಗ ಜಿಲ್ಲೆಯಲ್ಲಿ ಕಾಮುಕ ಪೈಶಾಚಿಕ ಕೃತ್ಯಯೊಂದು ಬಯಲಾಗಿದೆ. ಸ್ವತ: ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿದೆ. 16 ವರ್ಷದ ಬಾಲಕಿಯ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದಿದೆ ಎಂದು ದೂರಲಾಗಿದೆ.

ಹೌದು ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದೀಗ ಆರೋಪಿ ರಮೇಶ್ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ರಮೇಶ್ ತನ್ನ 16 ವರ್ಷದ ಮಗಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಆರೋಪಿ ರಮೇಶ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಸದ್ಯ ಬಾಲಕಿ ಗರ್ಭಿಣಿಯಾದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಬಾಲಕಿ ತಂದೆ ತನ್ನ ಮೇಲೆ ಕಳೆದ ಒಂದು ವರ್ಷದಿಂದ ನಿತ್ಯ ಅತ್ಯಾಚಾರ ಎಸಗುತ್ತಿದ್ದ. ಈ ಬಗ್ಗೆ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಕೆ ಹಾಕುತ್ತಿದ್ದ ಎಂದು ಹೇಳಿಕೊಂಡಿದ್ದಾಳೆ.
ವಿಚಾರಣೆ ಬಳಿಕ ತನ್ನದು ತಪ್ಪಿಲ್ಲ. ಮಗಳೇ ಏನೂ ತಪ್ಪು ಮಾಡಿರಬಹುದು. ನಾನು ಅವಳ ತಂದೆ ನಾನೇನು ತಪ್ಪು ಮಾಡಿಲ್ಲ ಎಂದು ಆರೋಪಿ ರಮೇಶ್ ನಾಟಕವಾಡಿದ್ದಾನೆ. ಹೀಗಾಗಿ ಪೊಲೀಸರು ಡಿಎನ್‌ಎ ಪರೀಕ್ಷೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.












Click it and Unblock the Notifications