DK Shivakumar: ಬಿ.ವೈ ವಿಜಯೇಂದ್ರಗೆ ಡಿ.ಕೆ ಶಿವಕುಮಾರ್ ಟಕ್ಕರ್!
DK Shivakumar: ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಶೇ 4ರಷ್ಟು ಮೀಸಲಾತಿ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ನೀಡಿರುವ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಿಯಾಕ್ಟ್ ಮಾಡಿದ್ದಾರೆ. ಸರ್ವರಿಗೆ ಸಮ ಬಾಳು, ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಬಿಜೆಪಿ ಬದ್ಧ ಇದೆ. ಆದರೆ ಕಾಂಗ್ರೆಸ್ ಮುಸ್ಲಿಂ ಬಹುಪಾಲು, ಇತರರಿಗೆ ಅಲ್ಪ ಪಾಲು ಎಂಬ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದರು. ಇದೀಗ ಬಿ.ವೈ ವಿಜಯೇಂದ್ರಗೆ ಡಿ.ಕೆ ಶಿವಕುಮಾರ್ ಅವರು ಟಾಂಗ್ ಕೊಟ್ಟಿದ್ದಾರೆ.
ಮುಸ್ಲಿಂ, ಕ್ರೈಸ್ತ, ಸಿಖ್ ಹಾಗೂ ಬೌದ್ಧರು ನಮ್ಮ ದೇಶದ ಕರ್ನಾಟಕ ಪ್ರಜೆಗಳು. ನಾವು ಅಲ್ಪ ಸಂಖ್ಯಾತರಿಗೆ ಹಿಂದುಳಿದವರ ಬಗ್ಗೆ ಚಿಂತೆ ಮಾಡುತ್ತೇವೆ. ಸಮ ಬಾಳು, ಸಮಪಾಲು ಅನ್ನುವರು ತಮ್ಮ ಪಕ್ಷದಲ್ಲಿ ಪರಿಷತ್ ಸದಸ್ಯ, ರಾಜ್ಯಸಭಾ ಸದಸ್ಯ, ಕೇಂದ್ರದಲ್ಲಿ ಮಂತ್ರಿ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಮುಂದುವರಿದು ಇಬ್ಬರು ಕ್ರಿಶ್ಚಿಯನ್, ಮೂರು ಜನ ಮುಸ್ಲಿಮರಿಗೆ ಅಧಿಕಾರ ಕೊಡಿ ನೋಡೋಣ. ಆಗ ವಿಜಯೇಂದ್ರಗೆ ಸಮಬಾಳು, ಸಮಪಾಲು ಅಂತ ಮಾತನಾಡೋದು ಯೋಗ್ಯ ಅನಿಸುತ್ತೆ ಎಂದಿದ್ದಾರೆ.

ಕುವೆಂಪು ನಾಡಗೀತೆ ಸರಿಯಾಗಿ ಓದಲಿ. ಯಾರು ಸೇರಿದರೆ ಶಾಂತಿ ತೋಟ ಆಗುತ್ತೆ ಎಂಬುದನ್ನು ಸರಿಯಾಗಿ ಓದಲಿ. ಈಗ ಅಧ್ಯಕ್ಷರಾಗಿದ್ದಾರೆ ಅವರ ಲೆವೆಲ್‌ನಲ್ಲಿ ಇರಲಿ ಎಂದಿದ್ದಾರೆ. ಮುಂದುವರಿದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಳಿಯುವ ಮೊದಲು ಶಕ್ತಿ ಪ್ರದರ್ಶನ ಕುರಿತು ಮಾತನಾಡಿರುವ ಅವರು, ಚರ್ಚೆ, ವಿವಿಧ ಅಭಿಪ್ರಾಯಗಳನ್ನು ಕೊಡ್ತಿದ್ದಾರೆ. ಎಲ್ಲಾ ಮಂತ್ರಿಗಳು ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಸಭೆ ಮಾಡಿ ಅಂತ ಸೂಚನೆ ನೀಡಿದ್ದೇವೆ. ಆ ಕೆಲಸ ಮುಗಿಯಲಿ, ಆ ಮೇಲೆ ಮಿಕ್ಕಿದ ಎಲ್ಲಾ ಯೋಚನೆ ಮಾಡುತ್ತೇವೆ. ನಮ್ದು 2 ವರ್ಷದ ಸಂಭ್ರಮ ಅಂತೂ ಮಾಡಲೇಬೇಕಾಗಿದೆ. ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರಲು ಶಾಸಕರು ಉತ್ಸುಕ: ಸಲೀಂ ಅಹ್ಮದ್
ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮಾಹಿತಿಯಿದೆ. ಈಗಾಗಲೇ ಅವರಿಬ್ಬರು ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಬಜೆಟ್ ಅನ್ನು ಸಹ ಸ್ವಾಗತಿಸಿದ್ದಾರೆ. ಅವರು ಯಾವಾಗ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ನೋಡಬೇಕಿದೆ. ಜೊತೆಗೆ ಮತ್ತೆ ಕೆಲವು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ಸೇರಲು ಉತ್ಸುಕತೆಯಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಹೇಳಿದ್ದಾರೆ.
ನಟಿ ರನ್ಯಾ ರಾವ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ಸಮಗ್ರವಾಗಿ ತನಿಖೆ ನಡೆಸುತ್ತಿವೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸೂಕ್ತ ಕ್ರಮವಾಗಲಿದೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ಯಾವುದೇ ಪಕ್ಷದವರಿರಲಿ, ರಕ್ಷಣೆಗೆ ಯಾರೂ ಮುಂದಾಗಬಾರದು. ನಮ್ಮಪಕ್ಷದ ಯಾವ ಸಚಿವರು ಸಹ ಅವರಿಗೆ ಬೆಂಬಲ ನೀಡಿಲ್ಲ. ಹಾಗೇನಾದರೂ ದಾಖಲೆಗಳಿದ್ದರೆ ಬಿಜೆಪಿ ಬಿಡುಗಡೆ ಮಾಡಲಿ. ತಪ್ಪಿತಸ್ಥರು ಯಾರೇ ಆಗುದ್ದರೂ ಶಿಕ್ಷೆಯಾಗಲೇಬೇಕು ಎಂದಿದ್ದಾರೆ.
ರಾಜ್ಯ ಸಂಪುಟ ವಿಸ್ತರಣೆ ಮೇ ತಿಂಗಳಲ್ಲಿ ಆಗುವ ಸಾಧ್ಯತೆಯಿದೆ. ಹಿಂದಿ ಸಚಿವ ಸಂಪುಟದಲ್ಲಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಈ ಬಾರಿ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.












Click it and Unblock the Notifications