ಕೊರೊನಾ ವೈರಸ್: ಗದಗ ಜನರಿಗೆ ಶುಭ ಸುದ್ದಿ!
ಗದಗ, ಜೂನ್ 29: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಕಂಡು ಬಂದ ಬಳಿಕ ಬರೀ ಕೆಟ್ಟಸುದ್ದಿಗಳನ್ನೇ ಕೇಳಿದ್ದ ಗದಗ ಜನರಿಗೆ ಶುಭ ಸುದ್ದಿ ಬಂದಿದೆ.
ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದರಿಂದ ಕಂಟೈನ್ಮೆಂಟ್ ವಲಯ ಎಂದು ಗುರುತಿಸಿದ್ದ ಇಲ್ಲಿನ 6 ಪ್ರದೇಶಗಳನ್ನು ಕೋವಿಡ್-19 ಮುಕ್ತ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಘೋಷಣೆ ಮಾಡಿದ್ದಾರೆ.
ಇಲ್ಲಿನ ಹುಡ್ಕೋ ಕಾಲನಿ 2 ಕ್ರಾಸ್ ಅಂಬಾ ಭವಾನಿ ಗುಡಿ ಹತ್ತಿರದ ಪ್ರದೇಶ , ಲಕ್ಕುಂಡಿ ವಾರ್ಡ ನಂ. 8, ಲಕ್ಕುಂಡಿ ವಾರ್ಡ ನಂ.11, ಗದಗ ಕೆ.ವಿ.ಎಸ್.ಆರ್. ಕಾಲೇಜ ಹತ್ತಿರ ಪಂಚಾಕ್ಷರಿ ನಗರ, ರೋಣ ತಾಲೂಕು ಹೊಳೆ ಆಲೂರ ವಾರ್ಡ ನಂ. 8, ಕಳಸಾಪೂರ ರಸ್ತೆ ಸೇವಾಲಾಲನಗರ ಈ ಆರು ಪ್ರದೇಶಗಳನ್ನು ಕಂಟೈನ್‍ಮೆಂಟ್ ಪ್ರದೇಶವೆಂಬ ಘೋಷಣೆಯಿಂದ ಹಿಂದಕ್ಕೆ ಪಡೆಯಲಾಗಿದೆ.

ಆರು ಪ್ರದೇಶಗಳ ಮೇಲಿದ್ದ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಲಾಗಿದ್ದು, ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಹಿರೇಮಠ ಆದೇಶ ಹೊಡಿಸಿದ್ದಾರೆ.
ಗದಗ್ ನಲ್ಲಿ ಈವರೆಗೆ ಕೊರೊನಾ ವೈರಸ್ ಸೋಂಕಿಗೆ 176 ಜನರು ತುತ್ತಾಗಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಹಾಗು 51 ಸೋಂಕಿತರು ಈವರೆಗೆ ಗುಣಮುಖರಾಗಿದ್ದಾರೆ.












Click it and Unblock the Notifications