'ಭಾಯಿಯೋ.. ಔರ್ ಬೆಹನೋ..' ನೋಡಿ ಹೀಗಾಗಿದೆ ನನ್ನ ಸ್ಥಿತಿ

ಕಾರವಾರ,ಜೂನ್ 02: ಕ್ರಿಕೆಟ್ ಮೈದಾನದಲ್ಲಿ 'ಅಭಿ ಅಭಿ ಮೈದಾನ್ ಮೆ ಯೇ ಕಿಲಾಡಿ ಪದಾ ರಹಾ ಹೈ..." ಎಂದು ಅವರು ಕಾಮೆಂಟ್ರಿ ಹೇಳುತ್ತಿದ್ದರೆ ಎಲ್ಲರ ಗಮನ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ಇವರ ಕಡೆ ಎಳೆಯುತ್ತಿತ್ತು.


"ಮಹನೀಯರೇ ಮತ್ತು‌ ಮಹಿಳೆಯರೇ... ನಿಮಗಿದೋ ಸುವರ್ಣಾವಕಾಶ..." ಎಂದು ಆಟೊ ರಿಕ್ಷಾದಲ್ಲಿ ಪ್ರಚಾರ ಮಾಡುತ್ತ ನಗರದ ಸುತ್ತ ಸುತ್ತಾಡಿದರೆ ಇವರ ಕಂಚಿನ ಕಂಠದ ಧ್ವನಿ ಕೇಳೋದಕ್ಕಂತಲೆ ಜನ ಒಮ್ಮೆ ರಸ್ತೆಯಲ್ಲೇ ನಿಂತು ಬಿಡುತ್ತಿದ್ದರು. ಆದರೆ ಇಂದು ಒಬ್ಬಂಟಿಯಾಗಿ ಆಸ್ಪತ್ರೆಯ ಬೆಡ್‌ಮೇಲೆ ಒಂಟಿಯಾಗಿ ಕಾಲ ಕಳೆಯುವ ಸ್ಥಿತಿ ಅವರದ್ದಾಗಿದೆ.

famous cricket commentator of Uttar Kannada district is now need people help

ಒಂದು ಕಾಲದಲ್ಲಿ ಜಿಲ್ಲೆಯಲ್ಲೇ ಫೇಮಸ್ ಕಾಮೆಂಟ್ರೇಟರ್ ಆಗಿದ್ದ ಸುರೇಶ ಬಾಡಕರ್ ಅವರ ಸ್ಥಿತಿ ಇದು. ನಾಟಕ, ಸಿನಿಮಾದ ಪ್ರಚಾರ, ಕ್ರಿಕೆಟ್ ಕಾಮೆಂಟ್ರಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ, ಕಾಮೆಂಟ್ರಿ ನೀಡೋ ಯುಗ ಇವರದ್ದಾಗಿತ್ತು ಅಂದು.


ಬಾಡಕರ್ ಮೂಲತಃ ಕಾರವಾರದ ಅರಗಾದವರು. ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿಕಾಂ ಓದಿದವರು. ಆದರೆ, ಎಲ್ಲಿಯೂ ಉದ್ಯೋಗ ಸಿಗದೇ‌ ಕಂಗೆಟ್ಟಿದ್ದ ಅವರಿಗೆ ಕಾಮೆಂಟ್ರಿ ಹೇಳೋ ಹವ್ಯಾಸ ಕೈ ಹಿಡಿದಿತ್ತು.


ಆದರೆ, ಇಂದು ಆ ಕಾಮೆಂಟ್ರಿ ಧ್ವನಿ ಕ್ರಮೇಣ ಕ್ಷೀಣಿಸಿದೆ. ಕಾರಣ ಕಳೆದ 60 ದಿನಗಳಿಂದ ಅವರು ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಮಧುಮೇಹದ ಚಿಕಿತ್ಸೆ ಪಡೆಯುತ್ತಿದ್ದಾರೆ.

famous cricket commentator of Uttar Kannada district is now need people help

ಕಳೆದ 10 ವರ್ಷಗಳಿಂದ ಅವರಿಗೆ ಕಾಡುತ್ತಿರುವ ಈ ಮಧುಮೇಹ ಕಾಯಿಲೆ ಉಲ್ಬಣಿಸಿದ್ದು, ಅವರ ಕಾಲಿನ ಎರಡು ಬೆರಳುಗಳನ್ನು ಕತ್ತರಿಸಲಾಗಿದೆ.

ಸುರೇಶ ಬಾಡಕರ್ ಒಂದು ಸಮಯದಲ್ಲಿ ನಗರದ ಕ್ರಿಕೆಟ್ಟಿಗರ ಹಾಗೂ ಕ್ರಿಕೆಟ್ ಪ್ರೇಮಿಗಳ ಫೇವರಿಟ್. ಲಯಬದ್ಧವಾಗಿ ಹಿಂದಿ, ಕನ್ನಡ, ಇಂಗ್ಲಿಷ್ ನಲ್ಲಿ ಕಾಮೆಂಟ್ರಿ ಹೇಳುತ್ತಿದ್ದ ಇವರು ಇಲ್ಲಿನ ಜನರಿಗೆ ಚಿರಪರಿಚಿತರು.

ಮನೆಯವರ ಜತೆ ಬೇಸರ ಮಾಡಿಕೊಂಡು 1995ರಲ್ಲಿ‌ ಮನೆಯಿಂದ ಹೊರ ಬಂದು, ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ್ದರು. ಹೋಟೆಲ್ ಊಟ, ಊರೂರು ಸುತ್ತಿ ಕಾಮೆಂಟ್ರಿ ಹೇಳುವುದೇ ಅವರ ಜೀವನವಾಯಿತು.

ಸ್ನೇಹಿತರೇ ಎಲ್ಲ ಎಂಬಂತಿದ್ದ ಬಾಡಕರ್, ಮದುವೆ ಕೂಡ ಆಗಿಲ್ಲ. ಆದರೆ, ಇಂದು ಇನ್ಸುಲಿನ್ ಇಂಜೆಕ್ಷನ್ ಪಡೆಯಲೂ ಹಣವಿಲ್ಲ. ಅವರೊಟ್ಟಿಗೆ ಯಾವ ಸ್ನೇಹಿತರೂ ಇಲ್ಲದೇ ಒಬ್ಬಂಟಿಯಾಗಿ ಆಸ್ಪತ್ರೆಯಲ್ಲಿ ರೋಗಿಗಳ ನಡುವೆ ತಾವೂ ದಿನ ದೂಡುತ್ತಿದ್ದಾರೆ.

ಬಾಡಕರ್ ಎಷ್ಟು ಫೇಮಸ್ ಅಂತ ಅಂದ್ರೆ, ಅವರಿಗೀಗ ಚಿಕಿತ್ಸೆ ನೀಡುವ ವೈದ್ಯರು ಕೂಡ ಅವರ ಬಳಿ ಒಂದು ಓವರ್ ಕಾಮೆಂಟ್ರಿ ಹೇಳಿಸಿನೇ ಟ್ರೀಟ್ ಮೆಂಟ್ ಕೊಡೋದಂತೆ‌.

ಏನೇ ಇರಲಿ. ಒಂದು ಕಾಲದಲ್ಲಿ ಕಾಮೆಂಟ್ರಿಯ ರಾಜರಾಗಿದ್ದ ಸುರೇಶ ಬಾಡಕರ್ ಬೇಗ ಗುಣಮುಖರಾಗಬೇಕಿದೆ. ಅವರು ತಮ್ಮ ಕಾಲನ್ನು ಕಳೆದುಕೊಳ್ಳುವ ಭಯದಲ್ಲಿದ್ದು, ಅವರಿಗೆ ಸಹಾಯದ ನೆರವು ಬೇಕಿದೆ. ಅವರು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮತ್ತೆ ಕಾಮೆಂಟ್ರಿ ಹೇಳಲು ನಗರದ ಸುತ್ತ ಸುತ್ತಡಾಲಿ ಎಂದು "ಒನ್ ಇಂಡಿಯಾ ಕನ್ನಡ" ಹಾರೈಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+