ದುಬೈ-ನ್ಯೂಯಾರ್ಕ್ ವಿಮಾನ ತುರ್ತು ಲ್ಯಾಂಡಿಂಗ್
ದುಬೈ, ಸೆಪ್ಟೆಂಬರ್ 05 : ದುಬೈ-ನ್ಯೂಯಾರ್ಕ್ ವಿಮಾನದಲ್ಲಿದ್ದ ಪ್ರಯಾಣಿಕರು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವಿಮಾನದಲ್ಲಿದ್ದ 10 ಪ್ರಯಾಣಿಕರು ಅಸ್ವಸ್ಥಗೊಂಡಿದ್ದರು ಎಂದು ದುಬೈ ಎಮಿರೇಟ್ಸ್ ಹೇಳಿದೆ.
ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದೆ. ದುಬೈ ಎಮಿರೇಟ್ಸ್‌ನ ಡಬಲ್ ಡೆಕ್ ಏರ್ ಬಸ್ ಎ388 ವಿಮಾನದಲ್ಲಿದ್ದ ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. 500 ಪ್ರಯಾಣಿಕರಿದ್ದ ವಿಮಾನವನ್ನು ಲ್ಯಾಂಡ್ ಮಾಡಿ, ಅಸ್ವಸ್ಥರಾದ 10 ಜನರಿಗೆ ಚಿಕಿತ್ಸೆ ನೀಡಲಾಯಿತು.

ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ವಿಮಾನ ಆಗಮಿಸುತ್ತಿದ್ದಂತೆ ತುರ್ತಾಗಿ ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಲಾಯಿತು. ಎಲ್ಲಾ ಪ್ರಯಾಣಿಕರಿಗೂ ತಕ್ಷಣ ಇಳಿಯಲು ಅವಕಾಶ ನೀಡಲಾಯಿತು. ಹೆಚ್ಚು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ ಎಂಬ ವರದಿಯನ್ನು ದುಬೈ ಎಮಿರೇಟ್ಸ್ ತಳ್ಳಿಹಾಕಿದೆ.
A row of ambulances #EK203 pic.twitter.com/iXn1bbjmad
— Larry Coben (@LarryCoben) September 5, 2018
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಲ್ಯಾರಿ ಚೋಹೆನ್ ಎಂಬುವವರು ವಿಮಾನ ನಿಲ್ದಾಣದ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆಂಬ್ಯುಲೆನ್ಸ್ ಸೇರಿ ಅಗತ್ಯ ಸೌಲಭ್ಯಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಡಿದ್ದರು.
ಮೊದಲೇ ಅಸ್ವಸ್ಥಗೊಂಡಿದ್ದ ಕೆಲವು ಪ್ರಯಾಣಿಕರು ವಿಮಾನ ಹತ್ತಿದ್ದರು. ವಿಮಾನ ಹಾರಾಟ ಆರಂಭಿಸಿದಾಗ ಅವರು ಮತ್ತಷ್ಟು ಅಸ್ವಸ್ಥರಾದರು ಎಂದು ಕೆಲವು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications