ಮುಸ್ಲಿಮ್ ಕಾರ್ಮಿಕರಿಗಾಗಿ ಯುಎಇಯಲ್ಲಿ ಮಸೀದಿ ನಿರ್ಮಿಸಿದ ಭಾರತೀಯ ಕ್ರಿಶ್ಚಿಯನ್ ಚೆರಿಯನ್

ದುಬೈ, ಮೇ 9: ಆತ ಭಾರತೀಯ ಕ್ರಿಶ್ಚಿಯನ್. ಮುಸ್ಲಿಂ ಕಾರ್ಮಿಕರಿಗಾಗಿ ಯುಎಇಯಲ್ಲಿ ಮಸೀದಿ ನಿರ್ಮಿಸಿದ್ದು, ರಮ್ಜಾನ್ ನ ಪವಿತ್ರ ಮಾಸದಲ್ಲಿ ಎಂಟುನೂರು ಕಾರ್ಮಿಕರಿಗೆ ಇಫ್ತಾರ್ ನೀಡುತ್ತಿದ್ದಾರೆ. ನಲವತ್ತೊಂಬತ್ತು ವರ್ಷದ ಶಾಜಿ ಚೆರಿಯನ್ ಕೇರಳದ ಕಾಯಂಕುಲಂನವರು. ಶಾಜಿ ಅವರು ಫುಜೈರಾದಲ್ಲಿ ಐವತ್ಮೂರು ಕಂಪೆನಿಗಳ ನೌಕರರಿಗೆ ವಾಸ್ತವ್ಯಕ್ಕೆ ಬಾಡಿಗೆ ನೀಡಿದ್ದು, ಅವರಿಗಾಗಿ ಕಳೆದ ವರ್ಷ ಮಸೀದಿ ನಿರ್ಮಿಸಿದ್ದರು.

ಮರಿಯಾಂ ಉಮ್ ಐಸಾ ಎಂಬ ಹೆಸರಲ್ಲಿ ಚೆರಿಯನ್ ಮಸೀದಿ ನಿರ್ಮಿಸಿದ್ದಾರೆ. ಇವರ ಬಳಿ ಬಾಡಿಗೆಗೆ ಇದ್ದ ಕಾರ್ಮಿಕರು ರಮ್ಜಾನ್ ಮಾಸದಲ್ಲಿ ಹತ್ತಿರದ ಮಸೀದಿಗಳಿಗೆ ಟ್ಯಾಕ್ಸಿಗಳ ಮೂಲಕ ಹೋಗುತ್ತಿದ್ದರು. ಅವರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಈ ಮಸೀದಿ ನಿರ್ಮಾಣ ಮಾಡಿದ್ದಾರೆ.

ಕೆಲವು ನೂರು ದಿರ್ಹಾಮ್ ಗಳೊಂದಿಗೆ ಚೆರಿಯನ್ ಹದಿನಾರು ವರ್ಷಗಳ ಹಿಂದೆ ಯುಎಇಗೆ ಬಂದವರು. ಎಂಟುನೂರು ಕಾರ್ಮಿಕರು, ವಿವಿಧ ಕಂಪೆನಿಗಳ ಹಿರಿಯ ಸಿಬ್ಬಂದಿಗೆ ಹವಾ ನಿಯಂತ್ರಿತ ಸಭಾಗೃಹದಲ್ಲಿ ಇಫ್ತಾರ್ ಆಯೋಜಿಸಿದ್ದಾರೆ. "ಕಳೆದ ವರ್ಷ ರಮ್ಜಾನ್ ನ ಹದಿನೇಳನೇ ರಾತ್ರಿ ಮಸೀದಿ ಆರಂಭವಾಗಿತ್ತು. ಆಗ ಬಾಕಿ ಉಳಿದಿದ್ದ ದಿನ ಇಫ್ತಾರ್ ನೀಡಿದ್ದೆ. ಈ ವರ್ಷದಿಂದ ಎಲ್ಲ ದಿನವೂ ಮಾಡುತ್ತಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

Mosque built to Muslim workers by Indian Christian in UAE

ಇಫ್ತಾರ್ ಕೂಟದಲ್ಲಿ ಖರ್ಜೂರ, ತಾಜಾ ಹಣ್ಣುಗಳು, ತಿಂಡಿ, ಹಣ್ಣಿನ ರಸ, ನೀರು, ಬಿರಿಯಾನಿ ಇರುತ್ತದೆ. 'ದಿನಕ್ಕೆ ಒಂದೊಂದು ರೀತಿ ಬಿರಿಯಾನಿ ವ್ಯವಸ್ಥೆ ಮಾಡಿದ್ದೇನೆ. ಒಂದೇ ರೀತಿಯದ್ದನ್ನು ತಿನ್ನುವುದರಿಂದ ಅವರಿಗೆ ಬೇಸರ ಆಗಬಹುದು" ಎಂದು ಚೆರಿಯನ್ ಹೇಳಿದ್ದಾರೆ.

ಪಾಕಿಸ್ತಾನಿ ಬಸ್ ಡ್ರೈವರ್ ಅಬ್ದುಲ್ ಖಯೂಂ ಎಂಬುವರು ಮಾತನಾಡಿ, ಜಗತ್ತಿಗೆ ಇಂಥ ಜನರು ಬೇಕು. ಇಂಥ ಜನರು ಇಲ್ಲದಿದ್ದರೆ ಜಗತ್ತೇ ಕೊನೆ ಆಗುತ್ತದೆ ಎಂದು ಹೇಳಿದ್ದಾರೆ. ಅಲ್ ಹಯಲ್ ಕೈಗಾರಿಕಾ ಪ್ರದೇಶದ ‌ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಕಾಂಪ್ಲೆಕ್ಸ್ ನಲ್ಲಿ ಮಸೀದಿ ಇದೆ. ಏಕಕಾಲಕ್ಕೆ ಇನ್ನೂರೈವತ್ತು ಮಂದಿ ಇಲ್ಲಿ ಪ್ರಾರ್ಥನೆ ಸಲ್ಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+