ಯೋಗೇಶ್ ಗೌಡ ಕೊಲೆ ಪ್ರಕರಣ: ಆರು ಜನರ ವಿರುದ್ಧ ಸಿಬಿಐ ಎಫ್‌ಐಆರ್
ಧಾರವಾಡ, ಸೆಪ್ಟೆಂಬರ್ 26: ಭಾರಿ ಕುತೂಹಲ ಮೂಡಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಪ್ರಕರಣದ ಆರೋಪಿಗಳಾದ ಬಸವರಾಜ ಶಿವಪ್ಪ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಸೆಪ್ಟೆಂಬರ್ 9ರಂದು ಸಿಬಿಐಗೆ ವರ್ಗಾಯಿಸಿತ್ತು.
2017 ರ ಜೂನ್ 15 ರಂದು ಧಾರವಾಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಗೌಡ ಅವರನ್ನು ಜಿಮ್ ನಲ್ಲಿ ಮಚ್ಚುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ರಾಜ್ಯ ಪೊಲೀಸರು ಐವರನ್ನು ಬಂಧಿಸಿದ್ದರು.

ಅಂದಿನ ಸಚಿವ ವಿನಯ್ ಕುಲಕರ್ಣಿ ಅವರು ಆಪ್ತರೂ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ ಎನ್ನಲಾಗಿತ್ತು. ಆದ್ಧರಿಂದಲೇ ಪ್ರಕರಣವನ್ನು ಈಗಿನ ಸರ್ಕಾರವು ಸಿಬಿಐಗೆ ಒಪ್ಪಿಸಿತ್ತು.
ಕೊಲೆಯ ಸುತ್ತಾ ಆಗ ಸರಣಿ ಘಟನೆಗಳು ನಡೆದಿದ್ದವು. ಕೊಲೆಯಾದ ಯೊಗೀಶ್ ಗೌಡ ಪತ್ನಿ ಕಾಂಗ್ರೆಸ್ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದರು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಕ್ಕಿಹಾಕಿಸಲು ಯತ್ನಿಸಲಾಗಿದೆ. 'ನನ್ನ ಭಾವ (ಯೋಗೀಶ್ ಗೌಡ ಅವರ ಅಣ್ಣ) ಮತ್ತು ಬಿಜೆಪಿ ಸೇರಿ ಈ ಸಂಚು ರೂಪಿಸಿವೆ' ಎಂದು ಆರೋಪಿಸಿದ್ದರು.

ಕೆಲವು ದಿನಗಳ ಬಳಿಕ, ಯೊಗೀಶ್ ಗೌಡ ಕೊಲೆ ಆರೋಪಿಗಳನ್ನು ಜೈಲಿನಲ್ಲಿಯೇ ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಯೋಗೀಶ್ ಗೌಡ ಅವರ ಅಣ್ಣ ಗುರುನಾಥ್ ಗೌಡ ಅವರು ಇನ್ನೂ ಮೂವರೊಂದಿಗೆ ಈ ಬಗ್ಗೆ ಮಾತನಾಡಿದ ಆಡಿಯೋ ಪೊಲೀಸರಿಗೆ ಲಭ್ಯವಾದ ಕಾರಣ ಆಗಬಹುದಾಗಿದ್ದ ಅನಾಹುತ ತಪ್ಪಿತ್ತು.












Click it and Unblock the Notifications