ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿ: ಮಧು ಬಂಗಾರಪ್ಪ ಕಿಡಿ
ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿ. ಜೆಡಿಎಸ್ ನಾಯಕ ಮಧು ಬಂಗಾರಪ್ಪ ವಾಗ್ದಾಳಿ. ನವಲಗುಂದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಆಕ್ರೋಶ.
ನವಲಗುಂದ (ಧಾರವಾಡ), ಜುಲೈ 21: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಚಡಾ ಮುಖ್ಯಮಂತ್ರಿ ಎಂದು ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಶುಕ್ರವಾರ ಇಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಅವರು ಕಚಡಾ ಮುಖ್ಯಮಂತ್ರಿ. ಸಿಎಂ ಆಗಿದ್ದಾಗ ಅವರು ಎಂದಿಗೂ ರೈತರ ಪರವಾಗಿ ಕಾರ್ಯ ಮಾಡಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ಅವರ ಮೂಗು ಹಿಡಿಯುತ್ತಾರೆ. ಇಲ್ಲಿ ಮೂಗು ಹಿಡಿಯುವ ಬದಲು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂಗು ಹಿಡಿಯಲಿ ಎಂದು ಆಗ್ರಹಿಸಿದರು.
ರೈತರ ಸಂಕಷ್ಟಗಳನ್ನು ಪದೇ ಪದೇ ಉಲ್ಲೇಖಿರುವ ಯಡಿಯೂರಪ್ಪ ಅವರು ರಕ್ತದಲ್ಲಿ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಆದರೆ, ಅವರದ್ದು ಕೆಟ್ಟ ರಕ್ತ. ರೈತ ವಿರೋಧಿ ರಕ್ತ ಎಂದು ಅವರು ಹೇಳಿದರು.












Click it and Unblock the Notifications