ಅಪಘಾತ; ರಸ್ತೆ ಮೇಲೆ ಚಿಂದಿಯಾಗಿ ಹೋದ ಮೂವತ್ತು ಕುರಿಗಳು, ಮಹಿಳೆ
ಧಾರವಾಡ, ನವೆಂಬರ್ 22: ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿಯ ಕೆಕೆ ಹಳ್ಳಿ ಗ್ರಾಮ ಸಮೀಪದ ತಿರುವಿನಲ್ಲಿ ಕಬ್ಬು ತುಂಬಿದ ಲಾರಿ ಹರಿದು ಕುರಿಗಾಹಿ ಮಹಿಳೆ ಸೇರಿದಂತೆ ಮೂವತ್ತು ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಳಿಯಾಳದ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು ಲಾರಿ ಸಾಗುತ್ತಿತ್ತು. ಲಾರಿಯ ಚಾಲಕನ ನೀರ್ಲಕ್ಷ್ಯತನವೇ ಈ ಘಟನೆಗೆ ಕಾರಣವಾಗಿದ್ದು, ಅತಿ ವೇಗದ ಚಾಲನೆಯಿಂದ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಶೋಭಾ ಯಲ್ಲಪ್ಪ ಕರಿಗಾರ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯ ರಭಸಕ್ಕೆ ಸುಮಾರು ಮೂವತ್ತು ಕುರಿಗಳು ಸಾವನ್ನಪ್ಪಿದ್ದು, ಕುರಿಗಳನ್ನು ಎಳೆದುಕೊಂಡೇ ಸುಮಾರು ದೂರ ಲಾರಿ ಸಾಗಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಕ್ಲೀನರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಕುರಿಗಳು ಹಾಗೂ ಮಹಿಳೆಯ ದೇಹ ರಕ್ತ ಹಾಗೂ ಮಾಂಸದ ಮಡುವಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಸ್ಥಳಕ್ಕೆ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications