ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: 50 ವರ್ಷಗಳ ಬಳಿಕ ಅಣ್ಣಿಗೇರಿ ಕೆರೆಗೆ ನೀರು, ಜನರ ಸಂತಸ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್‌, 01: ಅಣ್ಣಿಗೇರಿ ಪಟ್ಟಣಕ್ಕೆ 50 ವರ್ಷಗಳ ಹೋರಾಟದ ನಂತರ ಕೊನೆಗೂ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಅಣ್ಣಿಗೇರಿಯು ಒಂದು ಪ್ರಮುಖ ನಗರವಾಗಿದೆ. ಬ್ಯಾಡಗಿಯಂತೆ ಅಣ್ಣಿಗೇರಿ ಪಟ್ಟಣ ಕೆಂಪು ಒಣ ಮೆಣಸಿನಕಾಯಿಗೆ ತುಂಬಾ ಪ್ರಸಿದ್ಧಿ ಪಡೆದಿದೆ. ಇಷ್ಟೆಲ್ಲ ಪ್ರಸಿದ್ಧಿ ಪಡೆದಿದ್ದರೂ ಕೂಡ ಅಣ್ಣಿಗೇರಿ ಪಟ್ಟಣದ ಜನ ಮಾತ್ರ ಕುಡಿಯುವ ನೀರಿಗಾಗಿ ಬಹಳ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ 76 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಕೆರೆಗೆ ನೀರನ್ನು ಹರಿಸಲಾಗಿದ್ದು, ಜನರು ಆತಂಕದಿಂದ ಹೊರಬಂದಂತಾಗಿದೆ.

ದಾವಣಗೆರೆ ಧಾರಾಕಾರ ಮಳೆ; ಹಲವು ವರ್ಷಗಳ ನಂತರ ಕೋಡಿ ಬಿದ್ದ ಕೆರೆಗಳು ಇವೆ ನೋಡಿದಾವಣಗೆರೆ ಧಾರಾಕಾರ ಮಳೆ; ಹಲವು ವರ್ಷಗಳ ನಂತರ ಕೋಡಿ ಬಿದ್ದ ಕೆರೆಗಳು ಇವೆ ನೋಡಿ

ಎಷ್ಟೇ ಪ್ರಯತ್ನ ಪಟ್ಟರು ಈ ಅಣ್ಣಿಗೇರಿ ಪಟ್ಟಣದ ಜನರ ನೀರಿನ ದಾಹ ತೀರಿಸಲು ಸಾಧ್ಯವಾಗಿರಲಿಲ್ಲ. ಅಣ್ಣಿಗೇರಿ ಪಟ್ಟಣದ ಜನ ಶಾಶ್ವತ ಕುಡಿಯುವ ಯೋಜನೆಗಾಗಿ ಕಳೆದ 50 ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದರು. ಆದರೂ ಕೂಡ ಯಾವುದೇ ಸರ್ಕಾರಗಳು, ಜನ ಪ್ರತಿನಿಧಿಗಳು ಅಣ್ಣಿಗೇರಿ ಪಟ್ಟಣದ ಜನರ ನೀರಿನ ದಾಹ ತೀರಿಸಲು ಮುಂದಾಗಿರಲಿಲ್ಲ. ಅಣ್ಣಿಗೇರಿ ಪಟ್ಟಣದ ನೀರಿನ ದಾಹ ತೀರಿಸಲು ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ಬಳಿ 76 ಹೆಕ್ಟೇರ್‌ ಪ್ರದೇಶದಲ್ಲಿ ಹೊಸದಾಗಿ ಕೆರೆಯನ್ನು ನಿರ್ಮಿಸಲಾಗಿತ್ತು. ಆದರೆ ಕೆರೆಯಲ್ಲಿ ನೀರನ್ನು ಸಂಗ್ರಹಿಸಿರಲಿಲ್ಲ. ಇದರಿಂದ ಪಟ್ಟಣದ ಜನ ತೊಂದರೆಗೆ ಒಳಗಾಗಿದ್ದರು. ಬೇಸತ್ತ ಜನರು ಸರ್ಕಾರಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದರು.

Dharwad; Water storage After 50 years in lake of Annigeri, people expressed happiness

76 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಕೆರೆ ನಿರ್ಮಾಣ
ಇಂದು ಆ ಎಲ್ಲ ಸಂಕಷ್ಟಗಳಿಗೆ ತೆರೆ ಬಿದ್ದಿದ್ದು, ಅಣ್ಣಿಗೇರಿಯ ಶಾಶ್ವತ ಕುಡಿಯುವ ನೀರಿಗೆ ಪರಿಹಾರವಾಗಿದೆ. 76 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಕೆರೆಗೆ ನೀರನ್ನು ಹರಿಸಲಾಗಿದೆ. ಹೀಗೆ ಕೆರೆ ತುಂಬಿಸುವ ಕಾರ್ಯ ಭರದಿಂದ ಸಾಗಿದೆ. 45 ದಿನಗಳಲ್ಲಿ ಕೆರೆಯು ತುಂಬಲಿದ್ದು, ಇದರಿಂದ ಅಣ್ಣಿಗೇರಿ ಪಟ್ಟಣದ ಶಾಶ್ವತ ಕುಡಿಯುವ ನೀರಿಗೆ ಪರಿಹಾರ ದೊರೆತಂತೆ ಆಗಲಿದೆ. ಬಸಾಪೂರ ಗ್ರಾಮದ ಹತ್ತಿರದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಅಣ್ಣಿಗೇರಿ ಪುರಸಭೆ, ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಇದನ್ನು ಆಯೋಜಿಸಲಾಗಿದೆ. ಅಣ್ಣಿಗೇರಿ ಪಟ್ಟಣಕ್ಕೆ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರಿನ ಸರಬರಾಜು ಕಾಮಗಾರಿ 34.88 ಕೋಟಿ ರೂಪಾಯಿ ಅನುದಾನದ ಅಡಿಯಲ್ಲಿ ಕೆರೆಗೆ ನೀರು ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ. ಬಸಾಪೂರ ಗ್ರಾಮದ ಹತ್ತಿರ ಮಲಪ್ರಭಾ ಬಲದಂಡೆ ಕಾಲುವೆಗೆ ಹೊಂದಿಕೊಂಡಿರುವ ಕೆರೆಯ ಜಲಸಂಗ್ರಹಗಾರಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Dharwad; Water storage After 50 years in lake of Annigeri, people expressed happiness

ಪದ್ಮಶ್ರೀ ಪುರಸ್ಕೃತರ ಅಭಿಪ್ರಾಯ ಏನು?
ಕಳೆದ 50 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಹೋರಾಟ ಮಾಡಿದ್ದೇವೆ. ಇಂದು ಅಣ್ಣಿಗೇರಿ ಜನರಿಗೆ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಇದೊಂದು ಉತ್ತಮ ಕಾರ್ಯವಾಗಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಪದ್ಮಶ್ರೀ ಪುರಸ್ಕೃತ ಅಬ್ದುಲ್ ಸಾಬ್ ನಡಕಟ್ಟಿನ ಅವರು ಸಂತಸ ವ್ಯಕ್ತಪಡಿಸಿದರು. ಇಷ್ಟು ದಿನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಊರಿಗೆ ಇದೀಗ ಗಂಗೆ ಹರಿದು ಬಂದಿದ್ದಾಳೆ ಎಂದು ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದರು.

English summary
lake at Annigeri of Dharwad district filled with water after 50 years. Water accumulated in lake, people are expressing happiness. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X