ಗಂಗೂಬಾಯಿ ಹಾನಗಲ್ ಗಾಯನಕ್ಕೆ ಮರುಳಾದ ಪಂ.ಜಸರಾಜ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 19: 'ಸಂಗೀತ ಲೋಕದ ದಿಗ್ಗಜೆ ಡಾ.ಗಂಗೂಬಾಯಿ ಹಾನಗಲ್ ಅವರು ರಾಮನಾಮ ಹಾಡಿನ ಮೂಲಕ ನನಗೆ ಪರಿಚಯವಾದರು. ಇಂದು ಅವರ ಮಗನಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವ ನನ್ನಲ್ಲಿ ಧನ್ಯತಾಭಾವ ನನ್ನಲ್ಲಿ ಮೂಡಿದೆ' ಎಂದು ಹಿಂದೂಸ್ತಾನಿ ಸಂಗೀತಗಾರ ಪದ್ಮವಿಭೂಷಣ ಪಂಡಿತ ಜಸರಾಜ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ 8ನೇ ಗಂಗೂಬಾಯಿ ಹಾನಗಲ್ ಸಂಗೀತ ಮಹೋತ್ಸವದಲ್ಲಿ ಜೀವಮಾನ ಸಾಧನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 'ತಾಯಿ ಗಂಗೂಬಾಯಿ ಸ್ವರ್ಗದಲ್ಲಿಂದಲೇ ತಮ್ಮ ಮಗನಿಗೆ ಪ್ರಶಸ್ತಿ ದೊರಕಿರುವ ಬಗ್ಗೆ ಖಂಡಿತವಾಗಿಯೂ ಖುಷಿ ಪಡುತ್ತಾರೆ' ಎಂದು ಭಾವುಕರಾದರು.['ಹಾಡು ಎಂದಕೂಡಲೇ ಹಾಡದು ಗಾನ ಕೋಗಿಲೆ']

Veteran vocalist Pandit Jasraj

ಹಲವಾರು ಪ್ರಶಸ್ತಿ ಪಡೆದಿರುವ ನನಗೆ ಈ ಗಂಗೂಬಾಯಿ ಹಾನಗಲ್ ಜೀವಮಾನ ಸಾಧನಾ ಪ್ರಶಸ್ತಿ ಲಭಿಸಿರುವುದು ನನ್ನ ಪುಣ್ಯ ಮತ್ತು ಇಂತಹ ದೊಡ್ಡ ಪ್ರಶಸ್ತಿ ಬೇರೆ ಯಾವ ಪ್ರಶಸ್ತಿಯೂ ನನಗೆ ದಕ್ಕಿಲ್ಲ ಎಂದರು. ಗಂಗೂಬಾಯಿ ಅವರ ಪುತ್ರ ನಾರಾಯಣ ಹಾನಗಲ್ ಪಂಡಿತ ಜಸರಾಜ್ ಅವರಿಗೆ ಪ್ರಶಸ್ತಿ ಫಲಕ, ಫಲಪುಷ್ಪ ಹಾಗೂ 1.5 ಲಕ್ಷ ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ನಂತರ ಪಂ.ಜಸರಾಜ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವಿದುಷಿ ಅನುಪಮಾ ಭಾಗವತ್ ಸಿತಾರ ವಾದನ ನುಡಿಸಿದರು. ಡಾ.ಶಾಮಸುಂದರ್ ಕಾಮತ್, ಜಿ.ಎಂ.ಗೋಕರ್ಣ, ಹರೀಶ ಕಪಾಡಿಯಾ ಮತ್ತಿತರರು ಉಪಸ್ಥಿತರಿದ್ದರು.[ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧಾರ್ವಾಡ]

Veteran vocalist Pandit Jasraj

ಪಂಡಿತ ಜಸರಾಜ್ ಯಾರು?

ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಇವರು ಮೂಲತಃ ಹರಿಯಾಣದ ಪಿಲಿಮಂಡೋರಿ ಎಂಬಲ್ಲಿ ಜನವರಿ 28ರಂದು 1930ರಲ್ಲಿ ಜನಿಸಿದರು. ಇವರಿಗೆ ಪದ್ಮವಿಭೂಷಣ, ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ಕಲಾ ರತ್ನ ಪ್ರಶಸ್ತಿ, ಲತಾ ಮಂಗೇಶ್ಕರ್, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಪ್ರಶಸ್ತಿ ಲಭಿಸಿದೆ.[ಸಿಂಗಪುರದಲ್ಲಿ ಜ. 23ರಂದು ಸಂಗೀತದ 'ಲಯತರಂಗ']

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Veteran vocalist Pandit Jasraj to received lifetime achievement award in ceremony of 8th Gangubai Hanagal Sangeet Mahotasav in Hubballi, on Monday, January 18th.
Please Wait while comments are loading...