ಯಮನೂರು ರೈತರಿಗೆ ಸಾಂತ್ವನ ಹೇಳಿದ ವಾಟಾಳ್ ನಾಗರಾಜ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಧಾರವಾಡ, ಆಗಸ್ಟ್ 06 : 'ಕರ್ನಾಟಕದ ಇತಿಹಾಸದಲ್ಲಿ ಯಮನೂರಿನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ ಘಟನೆ ಅಮಾನವೀಯ. ಬಂಧಿಸಿರುವ ರೈತರು ಮತ್ತು ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಶುಕ್ರವಾರ ವಾಟಾಳ್ ನಾಗರಾಜ್ ಅವರು, ಯಮನೂರು, ಅರೇಕುರಹಟ್ಟಿ ಮತ್ತು ಅಳಗವಾಡಿ ಗ್ರಾಮಗಳಿಗೆ ಭೇಟಿ ನೀಡಿ ಪೊಲೀಸರ ಲಾಠಿ ಚಾರ್ಜ್‌ನಿಂದ ಗಾಯಗೊಂಡ ರೈತರು, ಮಹಿಳೆಯರಿಗೆ ಸಾಂತ್ವನ ಹೇಳಿದರು. 'ರೈತರ ಮೇಲೆ ಪೊಲೀಸರ ಅಮಾನುಷ ದೌರ್ಜನ್ಯ ಸ್ವಾತಂತ್ರ್ಯ ಪೂರ್ವದದಲ್ಲಿ ಬ್ರಿಟಿಷರು ನಡೆಸಿದ ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದಂತೆ ಕಾಣಿಸುತ್ತಿದೆ' ಎಂದರು.[ಯಮನೂರು ಲಾಠಿ ಚಾರ್ಜ್, ಸಿದ್ದರಾಮಯ್ಯ ವಿಷಾದ]

vatal nagaraj

'ರಾಜ್ಯ ಸರ್ಕಾರ ಕೂಡಲೇ ಎಲ್ಲ ಬಂಧಿತ ಅಮಾಯಕ ರೈತರನ್ನು, ವಿದ್ಯಾರ್ಥಿಗಳನ್ನು, ವೃದ್ಧರನ್ನು ಬಿಡುಗಡೆ ಮಾಡಬೇಕು. ಪೊಲೀಸರು ಮಹಿಳೆಯರೆನ್ನದೇ ಅವರ ಮೇಲೂ ದೌರ್ಜನ್ಯವೆಸಗಿದ್ದು ಅಕ್ಷಮ್ಯ ಅಪರಾಧವಾಗಿದೆ. ಗಾಯಗೊಂಡವರ ಪರಿಸ್ಥಿತಿ ಹೇಳತೀರದಾಗಿದೆ. ಇಷ್ಟೆಲ್ಲ ದೌರ್ಜನ್ಯ ನಡೆಸಿದರೂ ಕಳಸಾ-ಬಂಡೂರಿ ಹೋರಾಟವನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುತ್ತೇವೆ' ಎಂದು ವಾಟಾಳ್ ಘೋಷಣೆ ಮಾಡಿದರು.[ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ]

'ಪೊಲೀಸರು ಎಸಗಿದ ದೌರ್ಜನ್ಯದ ಕುರಿತು ನುರಿತ ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸುತ್ತೇನೆ. ಪೇದೆಗಳನ್ನು ಅಮಾನತ ಮಾಡಿದಂತೆ ಲಾಠಿ ಚಾರ್ಜ್‌ಗೆ ಆದೇಶ ನೀಡಿದ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಬೇಕು' ಎಂದು ಒತ್ತಾಯಿಸಿದರು.[ಧಾರವಾಡ: ಯಮನೂರು ಸಂತ್ರಸ್ತರಿಗೆ ಶೆಟ್ಟರ್ ಸಾಂತ್ವನ]

ಪ್ರತಿಭಟನೆ ನಡೆಸಿದ್ದರು : ಮಹದಾಯಿ ನ್ಯಾಯ ಮಂಡಳಿ ಆದೇಶ ಹೊರಬಿದ್ದ ಬಳಿಕ ಜುಲೈ 27 ಮತ್ತು 28ರಂದು ಹಲವು ರೈತರು ಪ್ರತಿಭಟನೆ ಮಾಡಿದ್ದರು. ಜುಲೈ 29ರಂದು ಧಾರವಾಡ ಜಿಲ್ಲೆಯ ಯಮನೂರಿನಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.[ಯಮನೂರು ದೌರ್ಜನ್ಯ, ವರದಿ ಕೇಳಿದ ಹೈಕೋರ್ಟ್]

ಲಾಠಿ ಚಾರ್ಜ್‌ಗೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್, ಪಿಎಸ್‍ಐ ಮತ್ತು 8 ಪೇದೆಗಳನ್ನು ಅಮಾನತು ಮಾಡಲಾಗಿದೆ. ಡಿವೈಎಸ್‌ಪಿ ವರ್ಗವಾಗಿದೆ. ಲಾಠಿ ಪ್ರಹಾರ ಸೇರಿದಂತೆ ಇಡೀ ಘಟನೆ ಕುರಿತು ತನಿಖೆ ಮಾಡಿ ವರದಿ ನೀಡಲು ಎಡಿಜಿಪಿ ದರ್ಜೆ ಅಧಿಕಾರಿ ಕಮಲ್‍ಪಂತ್ ಅವರನ್ನು ನೇಮಕ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Chalavali Vatal Paksha president Vatal Nagaraj visited Yamanuru, Dharwad on Friday, August 5, 2016. Vatal Nagaraj demanded for release of farmers who arrested in the time of protest against Mahadayi tribunal verdict.
Please Wait while comments are loading...