ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಇಬ್ಬರು ಪಿಸ್ತೂಲ್ ಮಾರಾಟಗಾರರ ಬಂಧನ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಜೂನ್, 30: ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ನವನಗರ ಪೊಲೀಸರು ಬಂಧಿಸಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ತಿಳಿಸಿದ್ದಾರೆ.

ಅವರು ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡುತ್ತ, ವಿಜಯಪುರ ಜಿಲ್ಲೆಯ ಅಪ್ಜಲಪುರದ ಹಸನ ಚಾಂದಸಾಬ ಕರಜಗಿ (22) ಮತ್ತು ಬೆಳಗಾವಿ ಜಿಲ್ಲೆಯ ಸುಳೇಭಾವಿಯ ಕೈಲಾಶನಗರದ ಅಮಿತಕುಮಾರ ಶ್ಯಾಮು ಗಾಡಿವಡ್ಡರ (22) ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂದರು. ಬಂಧಿತರಿಂದ 4 ಪಿಸ್ತೂಲ್, 17 ಜೀವಂತ ಗುಂಡು ಮತ್ತು 2 ಮ್ಯಾಗಜಿನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.[ಪಿಸ್ತೂಲ್ ಮಾರಾಟ: ವಿಜಯಪುರದ ಶಿಕ್ಷಕ ಹುಬ್ಬಳ್ಳಿ ಪೊಲೀಸರ ಬಲೆಗೆ]

hubballi

ಹಿಂದಿನ ಪ್ರಕರಣದ ವಿವರ:
ವ್ಯಕ್ತಿಯೊಬ್ಬರು ಪಿಸ್ತೂಲ್ ಇಟ್ಟುಕೊಂಡಿರುವ ಪ್ರಕರಣ ಕಳೆದ ಮೇ ತಿಂಗಳಿನಲ್ಲಿ ಜರುಗಿತ್ತು. ಈ ಪ್ರಕರಣದ ಬೆನ್ನ ಹಿಂದೆ ಬಿದ್ದಿದ್ದ ನವನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆರೋಪಿಗಳನ್ನು ವಿಜಯಪುರದ ತೊರವಿ ಹದ್ದಿಯ ನಬೀಲಾಲ ಕರ್ಜಗಿ ಅವರ ಹೊಲದಲ್ಲಿ ಬಂಧಿಸಿದ್ದಾರೆ.[ಹುಬ್ಬಳ್ಳಿ ಕಿಮ್ಸ್ ನಲ್ಲಿ ಪಾರ್ಕಿಂಗ್ ನಿರ್ವಹಣೆ ಬೇಕಿತ್ತಾ?]

ಸಾಹಿತಿ ಎಂ ಎಂ ಕಲಬುರ್ಗಿಯವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಅವಳಿ ನಗರದಲ್ಲಿ ಈ ಬಗೆಯ ಘಟನಗೆಳು ಮತ್ತೆ ಮತ್ತೆ ನಡೆಯುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ.

English summary
Two gunrunner who had come to supply 4 sophisticated pistols to an arms dealer in the city was arrested after a raid by the Hubballi Police on 30 June, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X