ಸಾರಿಗೆ ಇಲಾಖೆಯಿಂದ ಧಾರವಾಡದಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಪ್ರಾರಂಭ

ಧಾರವಾಡ, ಜನವರಿ 4: ಕರ್ನಾಟಕದ ಸಾರಿಗೆ ಇಲಾಖೆಯು ರಾಯಪುರ ಕೈಗಾರಿಕಾ ಪ್ರದೇಶದಲ್ಲಿ ಧಾರವಾಡ ಪಶ್ಚಿಮ ಆರ್.ಟಿ.ಒನಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ(ಐಅಂಡ್‌ಸಿ) ಕೇಂದ್ರಕ್ಕೆ ಚಾಲನೆ ನೀಡಿತು. ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಶಾಸಕ ಅರವಿಂದ್ ಬೆಲ್ಲದ್, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ.ಡಿ. ಶಿವಯೋಗಿ ಕಳಸದ ಈ ಐಅಂಡ್‌ಸಿ ಕೇಂದ್ರವನ್ನು ಉದ್ಘಾಟಿಸಿದರು.

ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಇರುವ ಹಾಗೂ ಹೊಸ ವಾಹನಗಳನ್ನು ನಿಯಂತ್ರಿಸಲು ನಿರ್ಧರಿಸಿದೆ. ಈ ಕೇಂದ್ರವು ವಾಹನದ ಹೊರಗಿನ ತಪಾಸಣೆ ಮತ್ತು ಸಂಪೂರ್ಣ ರಸ್ತೆಗೆ ಇಳಿಯಬಹುದಾದ ಅರ್ಹತೆಯನ್ನು ಅಂತಿಮಗೊಳಿಸುವಲ್ಲಿ ಇರುವ ಅಂತರ ತುಂಬುತ್ತದೆ. ಈ ಸುಧಾರಿತ ಮತ್ತು ಸ್ವಯಂಚಾಲಿತ ಐ ಅಂಡ್ ಡಿ ಕೇಂದ್ರಗಳು ವಾಹನಗಳನ್ನು ರಸ್ತೆ ಹಾಗೂ ಸುರಕ್ಷತೆಯ ವಾಹನಗಳ ಕ್ರಮಗಳ ಅನ್ವಯ ತಪಾಸಣೆ ನಡೆಸುತ್ತವೆ. ಬಹಳ ಮುಖ್ಯವಾಗಿ ಸ್ಮಾರ್ಟ್-ಕಾರ್ಡ್ ಆಧರಿತ ನೋಂದಣಿ ಮತ್ತು ಪ್ರಮಾಣೀಕರಣವನ್ನು ರೋಸ್‌ಮರ್ಟಾ ಟೆಕ್ನಾಲಜಿ ನೀಡುತ್ತದೆ. ದೆಹಲಿ ಮೂಲದ ಈ ಕಂಪನಿಯು ಸಾಧನ ಮತ್ತು ಸಂಪನ್ಮೂಲಗಳನ್ನು ಪೂರೈಸುವ ಟೆಂಡರ್ ಪಡೆದಿದೆ.

ಈ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಪ್ರಾರಂಭ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, "ಸಾರಿಗೆ ಇಲಾಖೆಯು ಹಳೆಯ ಬಸ್‌ಗಳನ್ನು ಬದಲಾಯಿಸಿ ಹೊಸ ಸಿಎನ್‌ಸಿ ಮತ್ತು ವಿದ್ಯುಚ್ಛಾಲಿತ ಬಸ್‌ಗಳನ್ನು ರಾಜ್ಯದಲ್ಲಿ ತರಲಿದೆ. ಕೇಂದ್ರ ಸರ್ಕಾರವು ಹಳೆಯ ಬಸ್‌ಗಳನ್ನು ಬದಲಾಯಿಸಿ ಸಿಎನ್‌ಜಿ ಮತ್ತು ವಿದ್ಯುಚ್ಛಾಲಿತ ಬಸ್‌ಗಳ ಮೂಲಕ ಬದಲಾಯಿಸಲು ಸೂಚಿಸಿದೆ. ಆದ್ದರಿಂದ ಈ ಬಸ್‌ಗಳು ರಸ್ತೆಯ ಮೇಲೆ ಸದ್ಯದಲ್ಲೇ ಸಂಚರಿಸಲು ಪ್ರಾರಂಭಿಸುತ್ತವೆ" ಎಂದರು.

Transport department inaugurates Inspection & Certification (I&C) Center in Dharwad

ಅವರು ಎಲ್ಲ ಜಿಲ್ಲೆಗಳಲ್ಲೂ ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿಗೆ ಸಿಬ್ಬಂದಿಯ ವೇತನಕ್ಕೆ 2,500 ಕೋಟಿ ರೂ. ಹಣಕಾಸು ಪೂರೈಸಿದ್ದಾರೆ. ಸರ್ಕಾರವು ಮುಷ್ಕರದಲ್ಲಿ ಭಾಗವಹಿಸಿದ್ದು ಕೆಲಸದಿಂದ ತೆಗೆದ ಉದ್ಯೋಗಿಗಳನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುತ್ತಿದೆ ಎಂದರು.

Transport department inaugurates Inspection & Certification (I&C) Center in Dharwad

ಹೊಸದಾಗಿ ಪ್ರಾರಂಭಗೊಂಡ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರವು ಹಾನಿಕಾರಕ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸುತ್ತದೆ ಮತ್ತು ಪರಿಸರ ಸಂರಕ್ಷಿಸುತ್ತದೆ. ಅಂದರೆ ಗಾಳಿಯ ಗುಣಮಟ್ಟ, ದೃಢ ವಾಹನದ ಹೆಚ್ಚಿನ ಮರುಮಾರಾಟ ಮೌಲ್ಯ ಮತ್ತು ಇಂಧನ ಕ್ಷಮತೆ ಸುಧಾರಣೆ ಹಾಗೂ ಹಣದ ಉಳಿತಾಯವನ್ನು ಈ ಕೇಂದ್ರದಲ್ಲಿ ನಿಯಮಿತ ತಪಾಸಣೆಯಿಂದ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+