ಕಾಂಗ್ರೆಸ್ ಆತ್ಮಹತ್ಯೆ ಪರಿಸ್ಥಿತಿಗೆ ತಲುಪುತ್ತೆ: ಪ್ರಹ್ಲಾದ್ ಜೋಶಿ
ಧಾರವಾಡ, ಜುಲೈ, 14 : ರಾಜ್ಯದ ಅಧಿಕಾರ ಗದ್ದುಗೆಯಲ್ಲಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ವಿಪರೀತವಾಗಿ ಹೆಚ್ಚಿದೆ. ಇದರಿಂದ ಪಕ್ಷ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಂಡಿದೆ ಎಂದು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡ ಜಿ.ಪಂ ಸಭಾ ಭವನದಲ್ಲಿ ಜರುಗಿದ ಕೇಂದ್ರ ಪುರಸ್ಕೃತ ಗ್ರಾಮಾಭಿವೃದ್ದಿ ಕಾರ್ಯಕ್ರಮಗಳ ಜನಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಮಾತನಾಡಿದರು. ಕಾಂಗ್ರೆಸ್ ನಲ್ಲಿ ಈಗಾಗಲೇ ಬಂಡಾಯದ ಸುನಾಮಿ ಎದ್ದಿದೆ. ಅವರೊಳಗೆ ಕಾದಾಟ ಏರ್ಪಟ್ಟು ಬಿದ್ದು ಹೋಗುವ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಸೂಚಿಸಿ, ಕೆಟ್ಟ ಹೆಸರು ತಂದುಕೊಳ್ಳುವ ಮೂರ್ಖತೆ ಬಿಜೆಪಿ ಪಕ್ಷಕ್ಕಿಲ್ಲ ಎಂದು ಹೇಳಿದರು.[ವ್ಯಾಪಂ ಹಗರಣ ಸಿಬಿಐ ತನಿಖೆಗೆ, ಸುಪ್ರೀಂಕೋರ್ಟ್ ಆದೇಶ]

ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೈಗೊಳ್ಳುವ ಪ್ರತಿಯೊಂದು ಸಂಗತಿಗಳಿಗೂ ಬಿಜೆಪಿ ಬೆಂಬಲವಿದೆ. ಅವಿಶ್ವಾಸ ಮಂಡಿಸುವಷ್ಟು ಸಂಖ್ಯಾಬಲ ಎರಡೂ ಪಕ್ಷಗಳೂ ಹೊಂದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹಲವಾರು ಮಾರ್ಗಗಳಿವೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದರು.
ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಜುಲೈ 30ರೊಳಗೆ ಭೇಟಿ ನೀಡಲಿದ್ದು, ಆತ್ಮಹತ್ಯೆ ಕುರಿತು ಸೂಕ್ತ ಮಾಹಿತಿ ಕಲೆ ಹಾಕಲಿದ್ದೇವೆ ಎಂದು ತಿಳಿಸಿದರು.












Click it and Unblock the Notifications