ಧಾರವಾಡ; ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಮನೆಗೆ ಡಿಸಿ ಭೇಟಿ
ಧಾರವಾಡ, ಮಾರ್ಚ್ 03; ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಕರ್ನಾಟಕದ ಹಲವಾರ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಧಾರವಾಡ ಜಿಲ್ಲೆಯ 4 ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ವಿದ್ಯಾರ್ಥಿಗಳ ಮನೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸುರಕ್ಷಿತವಾಗಿ ತಾಯ್ನಾಡಿಗೆ ಮರಳುವ ಭರವಸೆಯನ್ನು ನೀಡಿದರು.
ಧಾರವಾಡದ ಇಬ್ಬರು, ಹುಬ್ಬಳ್ಳಿಯ ಓರ್ವ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಓರ್ವ ವಿದ್ಯಾರ್ಥಿನಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಮನೆಗಳಿಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿದರು.
ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಮರಳಿ ಕರೆತರಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಪೋಷಕರಿಗೆ ವಿವರಿಸಿದರು. ಶೀಘ್ರದಲ್ಲೇ ಸುರಕ್ಷಿತವಾಗಿ ವಿದ್ಯಾರ್ಥಿಗಳು ವಾಪಸ್ ಆಗುವ ಭರವಸೆಯನ್ನು ನೀಡಿದರು, ಕುಟುಂಬಕ್ಕೆ ದೈರ್ಯದಿಂದ ಇರುವಂತೆ ಹೇಳಿದರು.
ಉಕ್ರೇನ್‌ನಲ್ಲಿ ಸಿಲುಕಿದ್ದ 31 ವಿದ್ಯಾರ್ಥಿಗಳು ಬುಧವಾರ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಫೆಬ್ರವರಿ 27 ರಿಂದ ಇದುವರೆಗೂ ರಾಜ್ಯಕ್ಕೆ ಮರಳಿದವರ ಸಂಖ್ಯೆ 86. ರಾಜ್ಯದ 694 ಮಂದಿ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. 314 ಜನರ ಮನೆಗಳಿಗೆ ಸರ್ಕಾರದ ಅಧಿಕಾರಿಗಳು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ಧಾರವಾಡದ ನಾಲ್ವರು ಸಿಲುಕಿದ್ದಾರೆ
ವೈದ್ಯಕೀಯ ವಿಧ್ಯಾಭ್ಯಾಸಕ್ಕೆ ಉಕ್ರೇನ್‌ಗೆ ತೆರಳಿರುವ ಧಾರವಾಡದ ಇಬ್ಬರು, ಹುಬ್ಬಳ್ಳಿಯ ಓರ್ವ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಓರ್ವ ವಿದ್ಯಾರ್ಥಿನಿ ಮನೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಎಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ವಿದೇಶಾಂಗ ಮಂತ್ರಾಲಯ, ಉಕ್ರೇನ್‍ನ ಕೀವ್ ನಗರದಲ್ಲಿರುವ ಭಾರತೀಯ ದೂತಾವಾಸ ಕಚೇರಿ, ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿವೆ. ಅದಕ್ಕೆ ಅಗತ್ಯವಿರುವ ಸುರಕ್ಷಿತ ಸಾರಿಗೆ, ರಾಜತಾಂತ್ರಿಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿವೆ ಎಂದು ಪಾಲಕರಿಗೆ ವಿವರಿಸಿದರು.

ಪೋಷಕರಿಗೆ ಧೈರ್ಯ ತುಂಬಿದರು
ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಧಾರವಾಡದ ಮಿಲನ್ ಎನ್. ದೇವಮಾನೆ, ಫೌಜಿಯಾ ಮುಲ್ಲಾ, ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪೂರ ಹಾಗೂ ಕುಂದಗೋಳ ತಾಲೂಕು ಯರಗುಪ್ಪಿಯ ಚೈತ್ರಾ ಸಂಶಿ ನಿವಾಸಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬುಧವಾರ ಭೇಟಿ ನೀಡಿದರು. ವಿದ್ಯಾರ್ಥಿಗಳ ಫೋಷಕರನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಸರ್ಕಾರ ಕೈಗೊಂಡ ಕ್ರಮಗಳನ್ನು ಮನವರಿಕೆ ಮಾಡಿಕೊಟ್ಟರು.

ಯರಗುಪ್ಪಿಯ ಚೈತ್ರಾ ಸಂಶಿ
ಯರಗುಪ್ಪಿಯ ವಿದ್ಯಾರ್ಥಿನಿ ಚೈತ್ರಾ ಸಂಶಿ ರೈಲಿನ ಮೂಲಕ ಪೋಲೆಂಡ್ ದೇಶದ ಗಡಿಗೆ ಬರುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿಯೇ ಪಾಲಕರಿಗೆ ಚೈತ್ರಾ ಸಂಶಿ ವಿಡಿಯೋ ಕರೆ ಮಾಡಿದ್ದರು. ಚೈತ್ರಾ ಸಂಶಿ ಅವರೊಂದಿಗೆ ಜಿಲ್ಲಾಧಿಕಾರಿಗಳು ಮಾತನಾಡಿದರು. ವಿದ್ಯಾರ್ಥಿನಿಗೆ ಸುರಕ್ಷಿತವಾಗಿ ಮರಳುವ ಭರವಸೆ ತುಂಬಿದರು.
ಕರ್ನಾಟಕದ 694 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಈ ಪೈಕಿ 314 ಜನರ ಮನೆಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪೋಷಕರಿಗೆ ಧೈರ್ಯ ಹೇಳಿದ್ದಾರೆ. 425 ಜನರ ಕುಟುಂಬಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಲಾಗಿದೆ.

ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ
ಫೌಜಿಯಾ ಮುಲ್ಲಾ ರೋಮೆನಿಯಾ ದೇಶ ತಲುಪಿದ್ದಾರೆ. ಮಿಲನ್ ದೇವಮಾನೆ ಕೂಡ ಉಕ್ರೇನ್ ಗಡಿ ದಾಟುತ್ತಿದ್ದಾರೆ. ಇನ್ನೋರ್ವ ವಿದ್ಯಾರ್ಥಿನಿ ನಾಜಿಯಾ ಗಾಜಿಪೂರ ಕೂಡ ರೈಲಿನಲ್ಲಿ ಇರಬಹುದು ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಭಾರತದ ವಿದೇಶಾಂಗ ಮಂತ್ರಾಲಯವು ರೋಮೆನಿಯಾ, ಪೋಲೆಂಡ್ ಸೇರಿದಂತೆ ಉಕ್ರೇನ್‍ನ ಪೂರ್ವ ಭಾಗದ ಗಡಿ ರಾಷ್ಟ್ರಗಳಲ್ಲಿ ವಸತಿ, ಊಟ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದೆ. ಭಾರತಕ್ಕೆ ಕರೆತರಲು ಅನೇಕ ವಿಮಾನಗಳ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಲಾಗಿದೆ.












Click it and Unblock the Notifications