• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಟಿ ವೈದ್ಯ: 100 ರೂ.ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಸವಣೂರು ಕುಟುಂಬ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಅಕ್ಟೋಬರ್ 15 : ಮೂಳೆ ಮುರಿದಾಗ ಖಾಸಗಿ ವೈದ್ಯರ ಬಳಿ ಹೋದರೆ ಲಕ್ಷಾಂತರ ರೂಪಾಯಿ ಬಿಲ್ ಪೀಕುತ್ತಾರೆ. ಆದರೆ, ಇಲ್ಲೊಬ್ಬ ನಾಟಿ ವೈದ್ಯ ಕೇವಲ 100 ರೂಪಾಯಿಯೊಳಗೆ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ದೇಹದ ಯಾವುದೇ ಭಾಗದ ಮೂಳೆ ಮುರಿದರೂ, ಈ ವೈದ್ಯ ಕೇವಲ ಮೂರು-ನಾಲ್ಕು ವಾರಗಳಲ್ಲಿ ಸರಳ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡುತ್ತಾರೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕುಂಕೂರು ಎನ್ನುವ ಗ್ರಾಮದ ಸವಣೂರು ಕುಟುಂಬದವರು ಈ ಚಮತ್ಕಾರಿ ನಾಟಿ ವೈದ್ಯರು. ಬಡವರ ಪಾಲಿಗೆ ದೇವರಂತೆ ಕೆಲಸ ಮಾಡುತ್ತಿರುವ ಸವಣೂರು ಕುಟುಂಬ, ಕೇವಲ 100 ರೂ.ಗಳಲ್ಲಿ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುತ್ತಾರೆ.

ದಾವಣಗೆರೆ; ಕೀಲುನೋವಿಗೆ ಬಾಗಳಿ ಗ್ರಾಮದಲ್ಲಿ ನಾಟಿ ವೈದ್ಯನ ಚಿಕಿತ್ಸೆದಾವಣಗೆರೆ; ಕೀಲುನೋವಿಗೆ ಬಾಗಳಿ ಗ್ರಾಮದಲ್ಲಿ ನಾಟಿ ವೈದ್ಯನ ಚಿಕಿತ್ಸೆ

ಗಿಡಮೂಲಿಕೆಗಳಿಂದ ಔಷಧ ನೀಡುವ ಸವಣೂರು ಕುಟುಂಬ, ನಿಗದಿತ ಸಮಯದಲ್ಲೆ ಮೂಳೆ ಮುರಿತವನ್ನು ಗುಣ ಮಾಡುತ್ತಾರೆ. ಚನ್ನಬಸಪ್ಪ ಸವಣೂರು ಎಂಬುವರು ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ವಂಶಪರಂಪರಾಗತವಾಗಿ ನಾಟಿ ಚಿಕಿತ್ಸೆ ನೀಡುತ್ತಿದ್ದಾರೆ. ತಮ್ಮ ಚಿಕಿತ್ಸೆ ಮೂಲಕ ಈ ಕುಟುಂಬ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಸಂಜೀವಿನಿಯಾಗಿದ್ದಾರೆ.

ಕುಂಕೂರು ಎಂಬ ಈ ಗ್ರಾಮದಲ್ಲಿ ಚನ್ನಬಸಪ್ಪ ಸವಣೂರು ಅವರು ಕುಟುಂಬದಲ್ಲಿ ಹಿರಿಯರು. ಮೂಳೆ ಮುರಿತ ಪರೀಕ್ಷಿಸಿ, ಮೂಳೆ ಜೋಡಣೆ ಮಾಡುತ್ತಾರೆ. ಕೂಲಿ ಕಾರ್ಮಿಕರು, ಆಟೋ ಡ್ರೈವರ್ ಸೇರಿದಂತೆ ಎಲ್ಲ ವರ್ಗದ ಜನರೂ ಇವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿದ್ದು ಕೈ ಕಾಲಿಗೆ ಪೆಟ್ಟಾದರೆ, ನಡೆಯುವಾಗ ಆಯತಪ್ಪಿ ಕಾಲು ಉಳುಕಿದರೆ, ಅವಘಡಗಳಲ್ಲಿ ಸಿಕ್ಕಿ ಕಾಲು ಮುರಿದ ತಕ್ಷಣ ಈ ಭಾಗದ ಜನರ ಮನದಲ್ಲಿ ನೆನಪಾಗುವ ಮೊದಲ ಹೆಸರೇ ಕುಂದಗೋಳ ತಾಲ್ಲೂಕಿನ ಕುಂಕೂರು ದೇಸೀ ವೈದ್ಯ ಚನ್ನಬಸಪ್ಪ ಸವಣೂರು ಕುಟುಂಬ.

ಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯ

 ಆಸ್ಪತ್ರೆಯಲ್ಲಿ ಗುಣವಾಗದೇ ಇವರ ಬಳಿ ಬಂದದ್ದೂ ಉಂಟು

ಆಸ್ಪತ್ರೆಯಲ್ಲಿ ಗುಣವಾಗದೇ ಇವರ ಬಳಿ ಬಂದದ್ದೂ ಉಂಟು

ಕುಂಕೂರು ಗ್ರಾಮದ ಸುತ್ತಮುತ್ತಲ ನೂರಾರು ರೋಗಿಗಳು ಮೂಳೆಗೆ ಸಂಬಂಧಿಸಿದ ಸಮಸ್ಯೆ ಹೊತ್ತು ಸವಣೂರು ಕುಟುಂಬವನ್ನು ಹರಸಿ ಬರುತ್ತಾರೆ. ರೋಗಿಗೆ ತೀವ್ರ ಘಾಸಿಯಾಗಿ ಪ್ರಯಾಣಿಸಲು ಸಾಧ್ಯವಾಗದ ಸಂದರ್ಭದಲ್ಲಿ ಇವರೇ ರೋಗಿ ಬಳಿ ತೆರಳಿ ಚಿಕಿತ್ಸೆ ನೀಡಿ ಬರುವುದೂ ಉಂಟು. ಹತ್ತಾರು ಆಸ್ಪತ್ರೆ ಅಲೆದು ಗುಣಮುಖರಾಗದೆ, ಇವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾದ ಹಲವರು ಇವರ ಕೈಗುಣ, ಚಿಕಿತ್ಸೆ ಕುರಿತು ಹಾಡಿ ಹೊಗಳಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕೈ ಉಳುಕಿನಿಂದ ಹಿಡಿದು ಕಾಲು ಮುರಿತ, ಕೀಲು ತಪ್ಪುವುದು, ಸೊಂಟ ಮುರಿತ ಇತ್ಯಾದಿಯಾಗಿ ದೇಹದ ಯಾವುದೇ ಮೂಳೆಗೆ ತೊಂದರೆಯಾದರೂ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡುತ್ತಾರೆ. ಮೂಳೆ ಮುರಿತದ ತೀವ್ರತೆಯನ್ನು ಆಧರಿಸಿ 3 ದಿನದ ಅಲ್ಪಾವಧಿ ಚಿಕಿತ್ಸೆಯಿಂದ- ಆರು ತಿಂಗಳ ದೀರ್ಘಕಾಲಿಕ ಚಿಕಿತ್ಸೆಯನ್ನೂ ನೀಡುತ್ತಾರೆ. ಚನ್ನಬಸಪ್ಪ ನಾಟಿ ವೈದ್ಯರಾದದ್ದೇ ಒಂದು ಕುತೂಹಲಕಾರಿ ಸಂಗತಿ. ವ್ಯವಸಾಯ ಹಿನ್ನೆಲೆಯ ಬಡ ಕುಟುಂಬದಿಂದ ಬಂದ ಚನ್ನಬಸಪ್ಪ ಅವರು ಕುಂಕೂರು ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಜನರ ಸೇವೆ ಎಂದು ಆರಂಭಿಸಿದರು. ಇವರ ಕುಟುಂಬ ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿತ್ತು.

 ರೋಗಿಗಳಿಂದ ಹಣ ಬಯಸದ ಚನ್ನಬಸಪ್ಪ

ರೋಗಿಗಳಿಂದ ಹಣ ಬಯಸದ ಚನ್ನಬಸಪ್ಪ

ಯಾವುದೇ ಫಲಾಪೇಕ್ಷೆಗಳನ್ನು ಬಯಸದೇ ಚನ್ನಬಸಪ್ಪ ಅವರು ಬಸವಣ್ಣನ ದೇವಸ್ಥಾನದಲ್ಲಿ ಈ ನಾಟಿ ಔಷಧಿಯ ಕಾಯಕ ಶುರು ಮಾಡಿದರು. ಆದರೆ ಇವರು ಯಾವತ್ತೂ ಯಾವುದಕ್ಕೂ ಆಸೆ ಪಡಲಿಲ್ಲ. ರೋಗಿಗಳಿಂದ ಒಂದು ನೈಯಾ ಪೈಸಾ ಆಸೆಯನ್ನು ಪಡೆಯುವುದಿಲ್ಲ. ಇನ್ನೂ, ರೋಗಿಗಳ ಹತ್ತಿರ ಹಣವನ್ನು ಪಡೆಯುತ್ತಿರಲಿಲ್ಲ. ರೋಗಿಗಳು ಏನಾದರೂ ಕೊಡಲಿಕ್ಕೆ ಬಂದರೆ ಅದನ್ನು ಬಸವಣ್ಣನ ದೇವಸ್ಥಾನದ ಹುಂಡಿಗೆ ಹಾಕಲು ಹೇಳುತ್ತಿದ್ದರು. ಅದರಲ್ಲಿ ಒಂದು ರೂಪಾಯಿಯನ್ನೂ ಚನ್ನಬಸಪ್ಪ ಅವರು ಮುಟ್ಟಿಲ್ಲ. ಅವರು ಬಡ ರೋಗಿಗಳಿಗೆ ನಿಸ್ವಾರ್ಥ ಸೇವೆಯನ್ನು ಮಾಡುತ್ತ ಬಂದಿದ್ದಾರೆ. ತನ್ನ ಗ್ರಾಮದ ಸುತ್ತಮುತ್ತಲ ಬಡ ಜನರ ನೋವಿಗೆ ಸ್ಪಂದಿಸಬೇಕು ಎಂದು ನಿರ್ಧರಿಸಿ. ಬಡ ರೋಗಿಗಳ ಶುಶ್ರೂಷೆಯಲ್ಲಿ ಮಗ್ನರಾಗಿದ್ದಾರೆ.

 ಸುತ್ತಮುತ್ತಲಿನ ಜಿಲ್ಲೆಗಳಿಂದ ಚಿಕಿತ್ಸೆಗೆ ಆಗಮಿಸುವ ರೋಗಿಗಳು

ಸುತ್ತಮುತ್ತಲಿನ ಜಿಲ್ಲೆಗಳಿಂದ ಚಿಕಿತ್ಸೆಗೆ ಆಗಮಿಸುವ ರೋಗಿಗಳು

ಇವರಿಂದ ಚಿಕಿತ್ಸೆ ಪಡೆಯಲು ಕೇವಲ ಸುತ್ತಮುತ್ತಲಿನ ಹಳ್ಳಿಯಿಂದ ಮಾತ್ರವಲ್ಲದೆ ಚಿತ್ರದುರ್ಗ, ದಾವಣಗೆರೆ ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ಆದೋನಿ, ಕಲ್ಯಾಣದುರ್ಗ, ರಾಯದುರ್ಗ ಮುಂತಾದ ಸ್ಥಳದಿಂದ ರೋಗಿಗಳು ಆಗಮಿಸುತ್ತಾರೆ. ಮೂಳೆ ಮುರಿತಕ್ಕೆ ನಾಟಿ ಔಷಧ ನೀಡುವುದು ಸುಲಭದ ಮಾತಲ್ಲ. ಇದಕ್ಕೆ ಅನುಭವ ಅಗತ್ಯ, ಜೊತೆಗೆ ಮೂಳೆ ಮುರಿತದ ತೀವ್ರತೆ ಆಧರಿಸಿ ಮುರಿದ ದೇಹದ ಭಾಗಕ್ಕೆ ಜಾಗರೂಕತೆಯಿಂದ ಬಾರ ಹೇರಬೇಕು, ಬಾರ ಹೇರುವಾಗ ತೂಕದಲ್ಲಿ ಹೆಚ್ಚು ಕಡಿಮೆಯಾಗಬಾರದು. ರೋಗಿಯಿಂದ ಯಾವುದೇ ಶುಲ್ಕ ಪಡೆಯದೇ ಚಿಕಿತ್ಸೆ ನೀಡುವ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿರುವ ಕೆಲ ಸ್ಥಳೀಯ ಸಂಘ- ಸಂಸ್ಥೆಗಳು ಈ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಿವೆ.

 ಕುಂಕೂರಿಗೆ ಹೋಗುವುದೇಗೆ

ಕುಂಕೂರಿಗೆ ಹೋಗುವುದೇಗೆ

ಚನ್ನಬಸಪ್ಪ ನಿಧನದ ನಂತರ ಅವರ ಸಹೋದರರು ಈಗ ಈ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಗುರುಶಾಂತಪ್ಪ ಸವಣೂರು ಈ ಕಾಯಕ ಮಾಡುತ್ತಿದ್ದ ರೋಗಿಗಳಿಂದ ಕೇವಲ 100 ಶುಲ್ಕವನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಬಂದಂತಹ ದುಡ್ಡಿನಲ್ಲಿ ಬಸವಣ್ಣನಿಗೆ ಪಾಲು ನೀಡುತ್ತಿದ್ದಾರೆ. ಚನ್ನಬಸಪ್ಪನವರು ತಾವೇ ಕಾಡಿಗೆ ತೆರಳಿ ಔಷಧಕ್ಕೆ ಸಂಬಂಧಪಟ್ಟಂತಹ ಗಿಡಮೂಲಿಕೆಗಳನ್ನು ತರುತ್ತಿದ್ದರು. ಆದರೆ ಪ್ರಸ್ತುತ ಅವರ ಕುಟುಂಬ ಬೇರೆ ಕಡೆಯಿಂದ ತರಿಸಿಕೊಂಡು ಚಿಕಿತ್ಸೆ ಮುಂದುವರಿಸುತ್ತಿದ್ದಾರೆ.

ಹುಬ್ಬಳ್ಳಿ ಬೆಂಗಳೂರು ಮಾರ್ಗದಲ್ಲಿ ಜಿಗಳೂರು ಎಂಬ ಕ್ರಾಸ್ ಬರುತ್ತದೆ. ಜಿಗಳೂರು ಕ್ರಾಸ್ ನಿಂದ ಕೇವಲ 5 ಕಿಲೋಮೀಟರ್ ಸಂಚರಿಸಿದರೆ ಬಡವರ ಸಂಜೀವಿನಿಯಾಗಿರುವ ಕುಂಕೂರು ಗ್ರಾಮ ಬರುತ್ತದೆ. ಯಾವುದೇ ಫಲಾಪೇಕ್ಷೆಗಳನ್ನು ಬಯಸದೇ ಬಡ ರೋಗಿಗಳ ನಿಸ್ವಾರ್ಥ ಸೇವೆ ಮಾಡುತ್ತಿರುವ ಸವಣೂರು ಕುಟುಂಬಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು.

English summary
Channabasappa from Savanur, A Nati vaidya from kunkuru village, kundgol taluk, Dharawad district, who gave treatment for bones fracture for just 100 rupees,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X