ED: ಭ್ರಷ್ಟಾಚಾರ ಆರೋಪ ಸಂಬಂಧ ಸಚಿವ ನಾಗೇಂದ್ರ ಬಂಧನ: ಸಂತೋಷ್ ಲಾಡ್ ಹೇಳಿದ್ದೇನು?

ಹುಬ್ಬಳ್ಳಿ, ಜುಲೈ 12: ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಷ್ಟೇ ನಾನು ಮಾಹಿತಿ ಪಡೆದುಕೊಂಡಿದ್ದು, ಪ್ರಕರಣದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದರು.

ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರೂಲ್ಸ್ ಪ್ರಕಾರ ನಡೆಯುತ್ತಿದ್ದುಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈಗ ಎಸ್‌ಬಿಐ ಬ್ಯಾಂಕ್ ನವರು ಸಿಬಿಐಗೆ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ, ಈಗ ಇಡಿ ಕೂಡ ಪ್ರವೇಶಿಸಿದೆ. ಎಸ್‌ಐಟಿ ತನಿಖೆ ಸಹ ನಡೆಯುತ್ತಿದೆ.

Santosh Lad Reaction about Minister Nagendra arrested by ED amp amp Corruption allegations by BJP

ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದ ಅವರು, ಭ್ರಷ್ಟಾಚಾರ ಆಗಿರೋದಕ್ಕೆ ಇಡಿ ವಶವೇ ಸಾಕ್ಷಿ ಎಂದು ವಿಜಯೇಂದ್ರ ಹೇಳಿದ್ದಾರೆ. ಈ ಬಗ್ಗೆ ಉತ್ತರಿಸಿದ ಅವರು, ನಾಗೇಂದ್ರ ಅವರಿಂದ ಭ್ರಷ್ಟಾಚಾರ ಆಗಿದೆಯೋ ಇಲ್ಲವೋ ವರದಿ ಬಂದ ಮೇಲೆಯೇ ಗೊತ್ತಾಗುತ್ತದೆ ಎಂದು ಲಾಡ್ ತಿರುಗೇಟು ಕೊಟ್ಟರು.

ಎಲೆಕ್ಟ್ರೋಲ್ ಬಾಂಡ್ ಭ್ರಷ್ಟಾಚಾರ ಪ್ರಸ್ತಾಪಿಸಿ ಲಾಡ್ ಪ್ರಶ್ನೆ

ಎಲೆಕ್ಟ್ರೋಲ್ ಬಾಂಡ್ ನಲ್ಲಿ ಭ್ರಷ್ಟಾಚಾರ ಆಗಿದೆಯೋ? ಇಲ್ಲವೊ? ಗೊತಿಲ್ಲ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ

ವಿಜಯೇಂದ್ರ ಅವರನ್ನು ಮಾಧ್ಯಮಗಳು ಕೇಳಬೇಕು ಎಂದ ಅವರು, ಅದರಲ್ಲಿ ಭ್ರಷ್ಟಾಚಾರ ಆಗಿದೆಯೋ ಇಲ್ಲವೋ ಎಂದು ಸುಪ್ರೀಂಕೋರ್ಟ್ ಇದನ್ನು ಅಸಂವಿಧಾನಿಕ ಅಂತಾ ಯಾಕೆ ಹೇಳಿತು? ಎಂದು ಪ್ರಶ್ನಿಸಿದರು.

Santosh Lad Reaction about Minister Nagendra arrested by ED amp amp Corruption allegations by BJP

ಅಷ್ಟೇ ಯಾಕೆ ಸಿಬಿಐ ತನಿಖೆ ಆಗಬಾರದು? ಅಭಿವೃದ್ಧಿ ಇಲ್ಲ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ವಿಪಕ್ಷಗಳ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು ಅವರ ದೃಷ್ಟಿಯಲ್ಲಿ ಹೇಳಿರಬಹುದು. ಆದರೆ ಅಭಿವೃದ್ಧಿ ಆಗುತ್ತಿದೆ.

ಗ್ಯಾರೆಂಟಿ ಯೋಜನೆಗಳಿಂದ ಬಿಜೆಪಿಗೆ ಹೊಟ್ಟೆ ಕಿಚ್ಚು

ಅಭಿವೃದ್ಧಿ ಸಂಬಂಧಿತ ಸಭೆಗಳು ಆಗುತ್ತಿವೆ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿರುವುದೇ ಬಿಜೆಪಿಯವರ ಹೊಟ್ಟೆ ಕಿಚ್ಚಿಗೆ ಕಾರಣ.

ಹೀಗಾಗಿ ಅವರು ಏನೇನೋ ಹೇಳಬೇಕಲ್ವಾ? ಹೇಳುತ್ತಾರೆ. ಇನ್ನು ಈಗ ಅಧಿವೇಶನ ಬಂದಿದ್ದು. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಲಾತ್ ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ಏನಾಗಿದೆ?

ಇವರ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ? ಹತ್ತು ವರ್ಷ ಮೋದಿ ಅವಧಿಯಲ್ಲಿ ಏನಾಗಿದೆ ಅಭಿವೃದ್ಧಿ?

ಅದಕ್ಕೆ ಸ್ಪಷ್ಟೀಕರಣ ಕೊಡುತ್ತಾರೆ. ಒಟ್ಟಿನಲ್ಲಿ ಆರೋಪ‌ ಮಾಡುತ್ತಿರುತ್ತಾರೆ.

ರಾಜ್ಯ ಸರ್ಕಾರ ಕೈ ಹೈಕಮಾಂಡಗೆ ಎಟಿಎಂ ಆರೋಪ, ಆರೋಪಗಳಿಗೆ ನಾವೇನು ಉತ್ತರ ಕೊಡಲು ಬರುವುದಿಲ್ಲ. ಇಡಿ ಬಗ್ಗೆ ಮೂರು ಏಜೆನ್ಸಿಗಳಿಂದ ತನಿಖೆ ನಡೆದಿದೆ. ಸಿಬಿಐ ಇದೆ, ಎಸ್‌‌ಐಟಿ ಇದೆ, ಇಡಿ ಇದೆ ತನಿಖೆ ನಡೆಯುವ ಮೊದಲೇ ಈ ರೀತಿ ಆರೋಪ‌ ಮಾಡಿದರೆ ಇದಕ್ಕೆ ಏನು ಹೇಳಲಾರೆ ಎಂದರು.

ಅವರ ಹಗರಣಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ, ಆದರೂ ಅವರು ಟೀಕೆಗಳನ್ನು ಮಾಡುತ್ತಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಸ್ವಾಗತಿಸಿದರು.

ಬಸವರಾಜ ರಾಯರೆಡ್ಡಿ ಅನುದಾನದ ಬಗ್ಗೆ ಹೇಳಿಕೆ ವಿಚಾರ. ಯಾವ ರೀತಿ ಅನುದಾನ ಬಂದಿಲ್ಲ ಎನ್ನುವುದು ಅವರ ವೈಯಕ್ತಿಕ ವಿಷಯ. 56-60 ಕೋಟಿ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದೇವೆ ಎಂದು ಹಿರಿಯ ಸಚಿವ ರಾಯರಡ್ಡಿ ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಕೇಳಿರುವ ಹೆಚ್ಚಿನ ಅನುದಾನ ಸಿಕ್ಕಿಲ್ಲ ಅದಕ್ಕಾಗಿ ಕೇಳಿರಬಹುದು ಎಂದು ಸಚಿವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+