ಸಂತೋಷ್ ಲಾಡ್: ನಾಯಕರ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ ಬಗ್ಗೆ ಹೇಳಿದ್ದೇನು?

ಧಾರವಾಡ‌, ಜೂನ್ 10: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಸ್ವಕ್ಷೇತ್ರಗಳಲ್ಲೇ ಪಕ್ಷಕ್ಕೆ ಹಿನ್ನಡೆ ಆಗಿದೆ ಎಂಬ ವಿಚಾರ ಮುನ್ನಡೆಲೆಗೆ ಬಂದಿದೆ. ಇದೀಗ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಪ್ರತಿಕ್ರಿಯಿಸಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರು ಸಹ ಪ್ರತಿ ಪಕ್ಷಕ್ಕೆ ಒಳ್ಳೆಯ ಪೈಟ್ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಫೈಟ್ ನೀಡಿದೆ. ಇಲ್ಲಿ ಸಂತೋಷ್ ಲಾಡ್ ಜೊತೆ ಫೈಟ್ ಎಂಬುದು ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

Santosh Lad Reaction about Congress setback in Minister Constituency in LS Polls 2024

ನಾನು ಜಿಲ್ಲಾ ಉಸ್ತುವಾರಿ ಸಚಿನಾಗಿದ್ದೇನೆ. ನಾನು ಮಾತ್ರವಲ್ಲದೇ ನಮ್ಮ ಶಾಸಕರಾದ ವಿನಯ ಕುಲಕರ್ಣಿ, ಎನ್ ಎಚ್‌ ಕೊನರಡ್ಡಿ, ಪ್ರಸಾದ್ ಅಬ್ಬಯ್ಯ ಎಲ್ಲರೂ ಪದಾಧಿಕಾರಿಗಳು ಚುನಾವಣೆಯಲ್ಲಿ ಉತ್ತಮ ಫೈಟ್ ಕೊಟ್ಟಿದ್ದೇವೆ. ನನ್ನ ಕ್ಷೇತ್ರದಲ್ಲೇ ಬಿಜೆಪಿಗೆ 30 ಸಾವಿರ ಲಿಡ್ ಆಗಿದೆ, ಕಳೆದ ಬಾರಿ 40 ಲಿಡ್ ಸಾವಿರ ಆಗಿತ್ತು ಎಂದು ಅವರೇ ಹೇಳಿದರು.

ಲೋಕಸಭಾ ಚುನಾವಣೆ ವೇಳೆ ಬಿಜೆಪಿಯೇ ಲಿಡ್ ಇದೆ. ಜನ ಅವರಿಗೆ ಮತ ಹಾಕಿದ್ದಾರೆ ಎಂದರೆ ನಾವು ಒಪ್ಪಿಕೊಳ್ಳಬೇಕು. ಕರ್ನಾಟಕದಲ್ಲಿ ಹಾಗೂ ದೇಶದ ಹಲವು ಕಡೆ ಮೋದಿ ಅಲೇಯೆ ಇಲ್ಲ. ಇದು ಮಾಧ್ಯಮಗಳಲ್ಲಿನ ಅಲೇ. ಕಳೆದ ಬಾರಿಗೆ ಹಾಗೂ ಈ ಬಾರಿಗೆ ನಮ್ಮದೇ ಜಿಲ್ಲೆಯಲ್ಲಿ ನಾವು ಶೇಕಡಾ 11% ಹೆಚ್ಚು ಮತಗಳನ್ನು ಪಡೆದಿದ್ದೆವೆ ಎಂದು ಅವರು ವಿವರಿಸಿದರು.

ನರೇಂದ್ರ ಮೋದಿ ಅಲೇ ಎಲ್ಲಿದೆ?

ಕರ್ನಾಟಕ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರ ಮೇಲೆಯೇ ಮತ ಕೇಳಿದ್ದಾರೆ. ಮೋದಿ ಅವರೇ ಒಂದುವರೆ ಲಕ್ಷ ಮತದಿಂದ ಗೆದ್ದಿದ್ದಾರೆ. ಭಾರತದ ಎರಡನೇ ಪ್ರಧಾನಿ ಇಷ್ಟು ಕಡಿಮೆ ಮತಗಳಿಂದ ಗೆದ್ದಿದ್ದಾರೆ. ಚಂದ್ರಶೇಖರ್ ಅವರು ಆದ ಮೇಲೆ ಇವರೇ ಒಂದುವರೆ ಲಕ್ಷ ಮತಗಳಿಂದ ಗೆದ್ದವರು.

Santosh Lad Reaction about Congress setback in Minister Constituency in LS Polls 2024

5 ಲಕ್ಷ ಮತಗಳಿಂದ ಗೆಲ್ಲುವವರು ಎಂದಿದ್ದ ಇವರಿಗೆ ಉತ್ತರ ಪ್ರದೇಶದಲ್ಲಿ ಅತೀ ಕಡಿಮೆ ಮತಗಳು ಬಂದಿವೆ. ನರೇಂದ್ರ ಮೋದಿ ಅವರ ಕ್ಷೇತ್ರದಲ್ಲಿ ಅವರದೇ ಹೆಸರಿನ ಒಬ್ಬ ಚುನಾವಣೆಗೆ ನಿಲ್ಲುತಿದ್ದ. ಆದರೆ ಅವನಿಗೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಲೇ ಇಲ್ಲ. ಅವರು ಒಂದು ವೇಳೆ ನಿಂತಿದ್ದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಡ್ ಇನ್ನೂ ಕಡಿಮೆ ಆಗುತ್ತಿತ್ತು ಎಂದು ಅವರು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+