ಕಲಘಟಗಿ: ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೀಡಾದ ಯುವತಿಗೆ ಸಂತೋಷ್ ಲಾಡ್ ನೆರವು
ಧಾರವಾಡ, ಮೇ 04: ಕಲಘಟಗಿ-ಅಳ್ನಾವರ ವಿಧಾನಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗಿದೆ. ಪ್ರಚಾರದ ಜೊತೆ ಜೊತೆಗೆ ಸಂತೋಷ್ ಲಾಡ್ ಜನ ಸೇವೆ ಕೂಡ ಸಾಗಿದ್ದು, ಅನಾರೋಗ್ಯಕ್ಕೀಡಾದ ಯುವತಿಗೆ ನೆರವಾಗುವ ಮೂಲಕ ಸಂತೋಷ್ ಲಾಡ್ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಹೋದಲ್ಲೆಲ್ಲ ಸಾವಿರಾರು ಜನರು ಸೇರಿ ಹರ್ಷೋಧ್ಗಾರಗಳಿಂದ ಲಾಡ್ ಅವರನ್ನು ಸ್ವಾಗತಿಸುತ್ತಿದ್ದಾರೆ. ಇಂದೂ ಕೂಡ ಸಂತೋಷ್ ಲಾಡ್ ಕಲಘಟಗಿಯ ಮತಕ್ಷೇತ್ರದ ದುಮ್ಮವಾಡ ಗ್ರಾಮಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ಹಿಂದೆ ಅನಾರೋಗ್ಯಕ್ಕೀಡಾಗಿ ಸಂತೋಷ್ ಲಾಡ್ ಅವರಿಂದ ಸಹಾಯ ಹಸ್ತ ಪಡೆದು ಚೇತರಿಸಿಕೊಳ್ಳುತ್ತಿರುವ ದುಮ್ಮವಾಡದ ಯುವತಿ ಮಂಜುಳಾ ಬಸರಿಕೊಪ್ಪ ಅವರು ಸಂತೋಷ್ ಲಾಡ್ ಅವರ ಸಹಾಯ ನೆನೆದು ಭಾವುಕರಾದರು.
ಮಂಜುಳಾ ಅವರು ಮಾತಾಡುತ್ತ ಸಂತೋಷ್ ಲಾಡ್ ಅವರ ಸಹಾಯಹಸ್ತ ನೆನೆಯುತ್ತಿದ್ದಂತೆ ಸಂಕೋಚಕ್ಕೀಡಾದ ಲಾಡ್ ಅವರು ಸಹಾಯ ಮಾಡಿದ್ದೆಲ್ಲ ಈ ಹೊತ್ತಲ್ಲಿ ಹೇಳುವುದು ಬೇಡ ಅಂದರೂ ಸಹ ಅಲ್ಲಿ ನೆರೆದಿದ್ದ ಗ್ರಾಮಸ್ಥರು ಒತ್ತಾಯ ಮಾಡಿ ಯುವತಿಯ ಮಾತುಗಳನ್ನು ಕೇಳಿದ್ದು ವಿಶೇಷವಾಗಿತ್ತು.
ಸಂತೋಷ್ ಲಾಡ್ ಅವರು ಹೀಗೆ ಸಂಕಷ್ಟದಲ್ಲಿದ್ದ ಸಾವಿರಾರು ಜನರಿಗೆ ಸಹಾಯಹಸ್ತ ಚಾಚುತ್ತಲೇ ಬಂದಿದ್ದಾರೆ. ತಮ್ಮದೇ ಸಂತೋಷ್ ಲಾಡ್ ಫೌಂಡೇಶನ್‌ನ ಆಶ್ರಯದಲ್ಲಿ ಬಡ ರೋಗಿಗಳಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಸಹಾಯಕ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಸಂತೋಷ್ ಲಾಡ್ ಅವರು ಇಷ್ಟೆಲ್ಲ ಸಹಾಯಹಸ್ತ ಮಾಡುತ್ತಿದ್ದರೂ ಯಾವುದೇ ಪ್ರಚಾರ ಬಯಸದೇ ಜನಸೇವೆಯನ್ನು ಕಾಯಕದಂತೆ ಮಾಡುತ್ತ ಬರುತ್ತಿರುವುದು ವಿಶೇಷ ಎನ್ನುವುದು ಸ್ಥಳೀಯರ ಅಭಿಪ್ರಾಯಾಯವಾಗಿದೆ.

ನವಲೂರಿನಲ್ಲಿ ದೀಪಕ ಚಿಂಚೋರೆ ಪಾದಯಾತ್ರೆ
ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ನವಲೂರಿನಲ್ಲಿ ಭರ್ಜರಿ ಪಾದಯಾತ್ರೆ ನಡೆಸುವ ಮುಖಾಂತರ ಮತಯಾಚನೆ ಮಾಡಿದರು. ದೀಪಕ ಚಿಂಚೋರೆ ಅವರಿಗೆ ಎಐಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀತಾ ಹಾಗೂ ಪಾಲಿಕೆ ಸದಸ್ಯ ಡಾ.ಮಯೂರ್ ಮೋರೆ ಅವರು ಸಾಥ್ ನೀಡಿ ಚಿಂಚೋರೆ ಪರ ಮತಯಾಚನೆ ಮಾಡಿದರು.
ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ದೀಪಕ ಚಿಂಚೋರೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕು. ನನ್ನ ಜೊತೆ ಮತದಾರರು ಮುಂದಿನ ಏಳು ದಿನಗಳ ಕಾಲ ಬಿಸಿಲಲ್ಲಿ ನಿಂತರೆ ಸಾಕು. ನಾನು ಅವರನ್ನು ಐದು ವರ್ಷಗಳ ಕಾಲ ನೆರಳಲ್ಲಿ ನಿಲ್ಲುವಂತೆ ಮಾಡುತ್ತೇನೆ ಎಂದರು.
ಮನೆ, ಮನೆಗೆ ಭೇಟಿ ನೀಡಿದ ದೀಪಕ ಚಿಂಚೋರೆ ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಚಿಂಚೋರೆ ಅವರೊಂದಿಗೆ ಪಾದಯಾತ್ರೆಯಲ್ಲಿ ಸ್ವಾತಿ ಮಾಳಗಿ, ಅಲಿ ಗೊರವನಕೊಳ್ಳ, ಶೋಭಾ, ಮಂಜುನಾಥ ಬಡಕುರಿ, ಮಹಾವೀರ ಶಿವಣ್ಣವರ, ಮಹಾವೀರ ಜೈನ್, ಮಹೇಶ ಕಟ್ಟಿ, ಪ್ರಕಾಶ ಬೆಂಗೇರಿ, ಎಸ್.ಕೆ.ಪಾಟೀಲ, ಫಕ್ಕೀರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.












Click it and Unblock the Notifications