Get Updates
Get notified of breaking news, exclusive insights, and must-see stories!

Santosh Lad: ಪ್ರಧಾನಿ ಮೋದಿ ಪ್ರಚಾರಕ್ಕೆ ಮೀಸಲಿಡುವ ದಿನಗಳ ಲೆಕ್ಕ ಕೊಟ್ಟ ಸಚಿವ

ಧಾರವಾಡ, ಏಪ್ರಿಲ್ 03: ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಪ್ರಧಾನಿ ಮೋದಿಯವರು ಎಷ್ಟು ಸಾರಿ ಬರುತ್ತಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯಕ್ಕೆ 40 ರಿಂದ 50 ಸಾರಿ ಬರುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಾಗ್ದಾಳಿ ನಡೆಸಿದರು.

ಧಾರವಾಡ ಚುನಾವಣಾ ಪ್ರಚಾರದಲ್ಲಿರುವ ಸಚಿವ ಸಂತೋಷ್ ಲಾಡ್ ಅವರು ಸುದ್ದಿಗಾರರ ಜೊತೆ ಮಾತನಾಡಿದರು, ಪ್ರಧಾನಿಯವರು ಸಾವಿರಾರು ದಿನಗಳನ್ನು ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಕಳೆದ 10 ವರ್ಷದಲ್ಲಿ ಎಲ್ಲ ರಾಜ್ಯಗಳ ರಾಜಕಾರಣದಲ್ಲಿ ಅವರು ಸಾಕಷ್ಟು ದಿನಗಳನ್ನು ಕಳೆದಿದ್ದಾರೆ ಎಂದು ಲೇವಡಿ ಮಾಡಿದರು.

Santosh Lad Explain About PM Modi Karnataka Visit Election Campaign Days details

ಸಾವಿರಾರು ದಿನಗಳನ್ನು ಪ್ರಚಾರಕ್ಕೆ ಮಿಸಲು ಇಟ್ಟಿರುವ ಪ್ರಧಾನಿ ಮೋದಿ ಬಿಟ್ಟರೆ ದೇಶದಲ್ಲಿ ಯಾರು ಪ್ರಚಾರ ಮಾಡೋದು ಬೇಡವಾ? ಬ್ರ್ಯಾಂಡ್ ಮೋದಿ ಬಿಟ್ಟರೆ ಬ್ರ್ಯಾಂಡ ಇಂಡಿಯಾ ಎಂಬುದೇನು ಇಲ್ಲ. ಭಾರತಕ್ಕೆ ಮೋದಿಯವರನ್ನು ಬ್ರ್ಯಾಂಡ್ ಎಂದು ಕೂರಿಸಿದೆ ಎಂದು ಅವರು ದೂರಿದರು.

ಬಿಜೆಪಿ ಜನರ ನಂಬಿಕೆ ಕಳೆದುಕೊಂಡಿದೆ

ರಾಜ್ಯದಲ್ಲಿ ಪ್ರಧಾನಿ ಮೋದಿಯವರ ಗಾಳಿ ಕಡಿಮೆ ಆಗಿದೆ. ಜನರ ನಂಬಿಕೆಯನ್ನು ಬಿಜೆಪಿ ಕಳೆದುಕೊಂಡಿದೆ. ರೈತಾಪಿ ವರ್ಗ, ಯುವಕರು ,ಮೋದಿ ಅವರಿಗೆ ಕೇಳುವ ಪ್ರಶ್ನೆಗೆ ಉತ್ತರ ಅವರ ಬಳಿ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕಳೆದ ಒಂದು ದಶಕದಲ್ಲಿ ಅವರು ಏನು ಮಾಡಿದ್ದಾರೆ ಎಂದು ಅಮಿತ್ ಶಾ ರೋಡ್ ಶೋ ವಿಚಾರವಾಗಿ ಅವರು ಪ್ರಶ್ನಿಸಿದರು.

ದೇಶಕ್ಕೆ‌ ಮೋದಿ ಅವರನ್ನು ಬ್ರ್ಯಾಂಡ್‌ನಂತೆ ಬಿಂಬಿಸಿದ್ದಾರೆ. ಬಿಜೆಪಿಯುವರ ಶಾಸಕರಿಗೆ 50 ಕೋಟಿ ಕೊಟ್ಟು ಕೊಂಡುಕ್ಕೊಳ್ಳುತ್ತಾರೆ ಎಂದು ಆರೋಪಿಸಿದ ಧಾರವಾಡ ಉಸ್ತುವಾರಿ ಸಚಿವರು, ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.

Santosh Lad Explain About PM Modi Karnataka Visit Election Campaign Days details

10 ವರ್ಷಗಳಲ್ಲಿ ಬೆಲೆ ಏರಿಕೆ ಪಟ್ಟಿ ಕೊಟ್ಟ ಸಚಿವ

ಬಿಜೆಪಿ ಅವರು 10 ವರ್ಷದಲ್ಲಿ ಎನೂ ಮಾಡಿದ್ದಾರೆ ಎಲ್ಲದರ ಬೆಲೆ ಏರಿಕೆ ಮಾಡಿದ್ದಾರೆ. ಚಿನ್ನದ ಬೆಲೆ 67000ಕ್ಕೆ ಏರಿಕೆ ಆಗಿದೆ. 58 ರೂಪಾಯಿಯ ಮೌಲ್ಯ ಇಂದು ಡಾಲರ್ ಮುಂದೆ ಮೌಲ್ಯ ಕಳೆದುಕೊಂಡಿದೆ. 84 ರೂಪಾಯಿಗೆ ಒಂದು ಡಾಲರ್ ಆಗಿದೆ. ಪ್ರತಿ ಕೇಜಿ 30 ಇರುವ ಸಕ್ಕರೆ ಬೆಲೆ 50 ರೂ. ಆಗಿದೆ ಎಂದು ಬೆಲೆ ಹೆಚ್ಚಳ ಕುರಿತು ಅವರು ವಿವರಿಸಿದರು.

100 ಸ್ಮಾರ್ಟ್‌ ಸಿಟಿ ಎಂದ ಬಿಜೆಪಿ ಸರ್ಕಾರ ಸ್ಮಾರ್ಟ್‌ ಸಿಟಿಗಳನ್ನು ಮಾಡಿದರಾ?. ಜಿಡಿಪಿ ಬಗ್ಗೆ ಮಾತನಾಡುವ ಅವರು ಬಾಂಗ್ಲಾದೇಶ ಪರ್ ಕ್ಯಾಪಿಟಲ್ ಇನ್‌ಕಮ್ 2,30,000 ಇದ್ದರೆ ಭಾರತದ್ದು ಕೇವಲ 1,80,000 ಇದೆ. 2004 ರಲ್ಲಿ ಎಲ್ಲಿ ಜೇಡಿಪಿ 7000 ಬಿಲಿಯನ್ ಡಾಲರ್ ಇತ್ತು. 2014 ರಲ್ಲಿ 2.2 ಟ್ರಿಲಿಯನ್ ಡಾಲರ್ ಮಾಡಿದ್ದೆವು ಎಂದರು.

ಜನರ ದಾರಿ ತಪ್ಪಿಸುವುದು ಬಿಡಿ

ಪ್ರಚಾರದ ವೇಳೆ ಬರುವುದು, ಜನರಿಗೆ ಏನೋನೋ ತಪ್ಪು ಮಾಹಿತಿ ಕೊಟ್ಟು ಹೋಗುವುದು. ಜನರ ದಿಕ್ಕು ತಪ್ಪಿಸುವುದನ್ನು ಬಿಡಬೇಕು. ಪ್ರಧಾನಿಯವರು ಯಾಕೆ ಎಲೆಕ್ಟ್ರಾಲ್ ಬಾಂಡ್‌ಗಳ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯವರು ಡೇಲೈಟ್ ದರೋಡೆ ಮಾಡಿದವರು ಎಂದು ಅವರು ಆಕ್ರೋಶ ಹೊರ ಹಾಕಿದರು.

ಚುನಾವಣೆ ವೇಳೆ ದೇಶ, ಅಭಿಮಾನ, ಹಿಂದುತ್ವ, ಹಿಂದೂಸ್ತಾನ್, ತಾಲಿಬಾನ್, ಪಾಕಿಸ್ತಾನ ಇವೆಲ್ಲ ಕೈ ಬಿಡಬೇಕು. ನೀವು ಸುಳ್ಳು ಹೇಳೋದನ್ನು ಮೊದಲು ಬಿಡಿ. ನೀವು ಬಂದ ಮೇಲೆ ಭಾರತ ಸಾಲದಲ್ಲಿದೆ ಎಂದು ಅವರು ದೂರಿದರು.

ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲ ಸಮಾಜದವರ ಜೊತೆ ಸಭೆ ಮಾಡುತ್ತಿದ್ದೇವೆ. ಇವತ್ತು ಅದೇ ರೀತಿ ಲಿಂಗಾಯತ ಸಮಾಜದ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಸಮಾಜದ ಎಲ್ಲ ಮುಖಂಡರನ್ನು ಕರೆಯಿಸಿ ಸಭೆ ಮಾಡುತ್ತಿದೆ. ಅವರ ಸಲಹೆಗಳನ್ನು ಪಡೆದು ಚುನಾವಣೆ ಎದುರಿಸಲಿದೆ.

ಪ್ರಧಾನಿ ಮೋದಿಯವರು ಹೆಚ್ಚು ಕೆಲಸ ಮಾಡಿದ್ದಾರೆಂದು ಪ್ರಹ್ಲಾದ್ ಜೋಶಿಯವರು ಹೇಳುತ್ತಾರೆ. ಕೆಲಸ ಮಾಡಿದ್ದರೇ ಅವರು ಯಾಕೆ ಇಷ್ಟೊಂದು ಪ್ರಚಾರ ಪಡೆಯುತ್ತಾರೆ. ಟಿವಿ ಜಾಹೀರಾತು ಕೊಡುತ್ತಾರೆ. ಪ್ರಹ್ಲಾದ್ ಜೋಶಿಯವರು ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ ಎಂದು ಸಂತೋಷ್ ಲಾಡ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+