Rajyotsava Award 2023: ಪೇಡಾನಗರಿಯ ನಾಲ್ವರು ಆಯ್ಕೆ
ಧಾರವಾಡ, ಅಕ್ಟೋಬರ್, 31: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಇಂದು (ಅಕ್ಟೋಬರ್ 31) ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ ರಾಜ್ಯೋತ್ಸವ ಪ್ರಶಸ್ತಿಗೆ ಧಾರವಾಡದ ನಾಲ್ವರು ಆಯ್ಕೆ ಆಗಿದ್ದಾರೆ.
ಸಂಗೀತ ಮತ್ತು ನೃತ್ಯದಲ್ಲಿ ನೀಲಾ ಎಂ ಕೊಡ್ಲಿ, ರಂಗಭೂಮಿ ಕ್ಷೇತ್ರದಲ್ಲಿ ಹೆಚ್.ಬಿ.ಸರೋಜಮ್ಮ, ಕ್ರೀಡೆ ಕ್ಷೇತ್ರದಲ್ಲಿ ಅಶೋಕ್ ಏಣಗಿ, ಕೃಷಿ ಕ್ಷೇತ್ರದಲ್ಲಿ ದ್ಯಾವನಗೌಡ ಪಾಟೀಲ್ ಆಯ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ನಾಲ್ವರು ಸಾಧಕರಿಗೆ ಸರ್ಕಾರವು ನವೆಂಬರ್ 1 (ಬುಧವಾರ) ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.

1. ಚಲನಚಿತ್ರ ಕ್ಷೇತ್ರ
* ಡಿಂಗ್ರಿ ನಾಗರಾಜ್
* ಬ್ಯಾಂಕ್ ಜನಾರ್ಧನ್
2. ರಂಗಭೂಮಿ ಕ್ಷೇತ್ರ
* ಎ.ಜಿ. ಚಿದಂಬರ ರಾವ್ ಜಂಬೆ
* ಪಿ. ಗಂಗಾಧರ ಸ್ವಾಮಿ
* ಹೆಚ್.ಬಿ.ಸರೋಜಮ್ಮ
* ತಯ್ಯಬಖಾನ್ ಎಂ.ಇನಾಮದಾರ
* ಡಾ.ವಿಶ್ವನಾಥ್ ವಂಶಾಕೃತ ಮಠ
* ಪಿ.ತಿಪ್ಪೇಸ್ವಾಮಿ
3. ಸಂಗೀತ ಕ್ಷೇತ್ರ
* ಡಾ.ನಯನ ಎಸ್.ಮೋರೆ
* ನೀಲಾ ಎಂ ಕೊಡ್ಲಿ
* ಶಬ್ಬೀರ್ ಅಹಮದ್
* ಡಾ.ಎಸ್ ಬಾಳೇಶ ಭಜಂತ್ರಿ
4. ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ
* ಟಿ.ಶಿವಶಂಕರ್
* ಕಾಳಪ್ಪ ವಿಶ್ವಕರ್ಮ
* ಮಾರ್ಥಾ ಜಾಕಿಮೋವಿಚ್
* ಪಿ.ಗೌರಯ್ಯ
5. ಯಕ್ಷಗಾನ & ಬಯಲಾಟ ಕ್ಷೇತ್ರ
* ಅರ್ಗೋಡು ಮೋಹನದಾಸ ಶೆಣೈ
* ಕೆ. ಲೀಲಾವತಿ ಬೈಪಾಡಿತ್ತಾಯ
* ಕೇಶಪ್ಪ ಶಿಳ್ಳಿಕ್ಯಾತರ
* ದಳವಾಯಿ ಸಿದ್ದಪ್ಪ
6. ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ
* ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
* ಶಿವಂಗಿ ಶಣ್ಮರಿ
* ಮಹದೇವು
* ನರಸಪ್ಪಾ
* ಶಕುಂತಲಾ ದೇವಲಾನಾಯಕ
* ಎಚ್.ಕೆ ಕಾರಮಂಚಪ್ಪ
* ಶಂಭು ಬಳಿಗಾರ
* ವಿಭೂತಿ ಗುಂಡಪ್ಪ
* ಚೌಡಮ್ಮ
7. ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ
* ಹುಚ್ಚಮ್ಮ ಬಸಪ್ಪ ಚೌದ್ರಿ
* ಚಾರ್ಮಾಡಿ ಹಸನಬ್ಬ
* ಕೆ.ರೂಪ್ಲಾ ನಾಯಕ್
* ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
* ನಾಗರಾಜು.ಜಿ
8. ಆಡಳಿತ ಕ್ಷೇತ್ರ
* ಬಲರಾಮ್, ತುಮಕೂರು
9. ವೈದ್ಯಕೀಯ ಕ್ಷೇತ್ರ
* ಡಾ.ಸಿ. ರಾಮಚಂದ್ರ, ಬೆಂಗಳೂರು
* ಡಾ.ಪ್ರಶಾಂತ್, ದ.ಕನ್ನಡ
10. ಸಾಹಿತ್ಯ ಕ್ಷೇತ್ರ
* ಪ್ರೊ. ಸಿ.ನಾಗಣ್ಣ, ಚಾಮರಾಜನಗರ
* ಸುಬ್ಬು ಹೊಲೆಯಾರ್, ಹಾಸನ
* ಸತೀಶ್ ಕುಲಕರ್ಣಿ, ಹಾವೇರಿ
* ಲಕ್ಷ್ಮೀಪತಿ ಕೋಲಾರ
* ಪರಪ್ಪ ಗುರುಪಾದಪ್ಪ ಸಿದ್ದಾಪುರ
* ಡಾ. ಕೆ ಷರೀಫಾ
11. ಶಿಕ್ಷಣ ಕ್ಷೇತ್ರ
* ರಾಮಪ್ಪ, ರಾಯಚೂರು
* ಕೆ.ಚಂದ್ರಶೇಖರ್, ಕೋಲಾರ
* ಕೆ.ಟಿ ಚಂದು, ಮಂಡ್ಯ
12. ಕ್ರೀಡಾ ಕ್ಷೇತ್ರ
* ಟಿ.ಎಸ್. ದಿವ್ಯಾ , ಕೋಲಾರ
* ಅದಿತಿ ಅಶೋಕ್, ಬೆಂಗಳೂರು
* ಅಶೋಕ್ ಗದಿಗೆಪ್ಪ ಏಣಗಿ, ಧಾರವಾಡ
13. ಪರಿಸರ ಕ್ಷೇತ್ರ
* ಸೋಮನಾಥ ರೆಡ್ಡಿ ಪೂರ್ಮಾ
* ದ್ಯಾವನಗೌಡ ಟಿ ಪಾಟೀಲ
* ಶಿವರೆಡ್ಡಿ ಹನುಮರೆಡ್ಡಿ ವಾಸನ
14. ನ್ಯಾಯಾಂಗ ಕ್ಷೇತ್ರ
* ಜ. ವಿ ಗೋಪಾಲ ಗೌಡ
15. ಸಂಕೀರ್ಣ ಕ್ಷೇತ್ರ
* ಎಂಎಂ ಮದರಿ
* ಹಾಜಿ ಅಬ್ದುಲ್ಲಾ, ಪರ್ಕಳ
* ಮಿಮಿಕ್ರಿ ದಯಾನಂದ್
* ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
* ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ
16. ಮಾಧ್ಯಮ ಕ್ಷೇತ್ರ
* ದಿನೇಶ ಅಮೀನ್ಮಟ್ಟು
* ಜವರಪ್ಪ
* ಮಾಯಾ ಶರ್ಮ
* ರಫೀ ಭಂಡಾರಿ
17. ವಿಜ್ಞಾನ ಮತ್ತು ತಂತ್ರಜ್ಞಾನ
* ಎಸ್. ಸೋಮನಾಥನ್ ಶ್ರೀಧರ್ ಪನಿಕರ್
* ಪ್ರೊ. ಗೋಪಾಲನ್ ಜಗದೀಶ್
18. ಹೊರನಾಡು ಮತ್ತು ಹೊರದೇಶ
* ಸೀತಾರಾಮ ಅಯ್ಯಂಗಾರ್
* ದೀಪಕ್ ಶೆಟ್ಟಿ
* ಶಶಿಕಿರಣ್ ಶೆಟ್ಟಿ
19. ಸ್ವಾತಂತ್ರ್ಯ ಹೋರಾಟಗಾರ
* ಪುಟ್ಟಸ್ವಾಮಿ ಗೌಡ












Click it and Unblock the Notifications