Dharwad Power Cut: ನಾಳೆ ಡಿ.21 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ, ಸ್ಥಳಗಳ ಮಾಹಿತಿ, ಸಮಯ
ಧಾರವಾಡ, ಡಿಸೆಂಬರ್ 20: ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿಸೆಂಬರ್ 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಿರ್ವಹಣೆ ಕಾಮಗಾರಿ ನಡೆಯಲಿದೆ. ಈ ನಿಮಿತ್ತ ನಾಳೆ ಡಿಸೆಂಬರ್ 21 ರಂದು ಈ ಕೆಳಗಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯದ ಪ್ರದೇಶಗಳು
ಧಾರವಾಡದ ಎತ್ತಿನಗುಡ್ಡ, ಕೃಷಿ ವಿಶ್ವವಿದ್ಯಾಲಯ ಆವರಣ, ಕುಮಾರೇಶ್ವರ ನಗರ, ಸೈದಾಪುರ, ಬೆಳಗಾವಿ ಮುಖ್ಯ ರಸ್ತೆ, ನಾರಾಯಣಪುರ, ಸಿಐಟಿ ಬಿಕೆಎಚ್‌ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿ.ಟಿ.ಸಿ ಕ್ಯಾಂಪಸ್, ಮೆಹಬೂಬ ನಗರ, ಹಶ್ಮಿ ನಗರ, ಮಾಳಾಪುರ, ಏರ್‌ಟೆಕ್, ಜಯಲಕ್ಷ್ಮೀ ಇಂಡಸ್ಟ್ರಿಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಪಿ ಕಾರ್ಖಾನೆ, ಕಿಲ್ಲಾ, ಸಾಧುನವರ ಎಸ್ಟೇಟ್, ನರೇಂದ್ರ, ಮಮ್ಮಿಗಟ್ಟಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಲಿದೆ.

ಅದೇ ರೀತಿ ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ, ತಾಜನಗರ, ಬಿಎಸ್. ಕೆ ಬಡಾವಣೆ, ಮಾಳಾಪುರ ಲಾಸ್ಟ್ ಬಸ್ ಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನ ಕೇರಿ, ಎಪಿಎಂಸಿ, ಫೈರ್ ಸ್ಟೇಷನ್, ರಾಮನಗೌಡ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠಾ ಕಾಲೋನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂಬಿ ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ, ಹಳೆಯ ಎಸ್.ಪಿ ವೃತ್ತ, ಲಕ್ಷ್ಮೀ ಗುಡಿ, ಪೋಲಿಸ್ ಹೆಡ್ ಕ್ವಾಟರ್ಸ್ ಪ್ರದೇಶ, ಬೇಂದ್ರೆ ನಗರ, ಹಿರೇಮಠ ಬಡಾವಣೆ, ಐಶ್ವರ್ಯ ನ್ಯಾನೋಸಿಟಿ, ನಂದಿ ಹೈವೇ ಬೈಪಾಸ್, ಮಲ್ಲಿಗೆ ನಗರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಜಿ ಸಿಎಂ ವಿರುದ್ಧ ಟೆಂಗಿನಕಾಯಿ ಆರೋಪ
ಸರ್ಕಾರಗಳು, ವ್ಯಕ್ತಿಗಳು ಬದಲಾಗಬಹುದು. ಆದ್ರೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದ ಕಾಮಗಾರಿ ರದ್ದುಗೊಳಿಸಬಾರದು. ಈಸೆಂಟ್ರಲ್ ಕ್ಷೇತ್ರದಲ್ಲಿ 30 ಕೋಟಿ ರೂಪಾಯಿ ಕಾಮಗಾರಿ ರದ್ದು ಮಾಡಲಾಗಿದೆ. ಬೇರೆ ನೆಪ ಹಾಕಿ ಕಾಮಗಾರಿ ಪ್ರಕ್ರಿಯೆ ಸ್ಥಗಿಗೊಳಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದ ಹಿಂದಿನ ಶಾಸಕರು ಎಂದು ಹೇಳಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ವಿರುದ್ಧ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದ್ದಾರೆ.

ಆದ್ರೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಇಂತಹ ಬೆಳವಣಿಗೆ ನಡೆದಿವೆ. ತಾಂತ್ರಿಕ ತೊಂದರೆಯಿಂದ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ ಎಂದು ಪತ್ರ ಬಂದಿದೆ. ತಮ್ಮ ಪ್ರಭಾವ ಬೀರಿ ಯಾರೂ ಅಭಿವೃದ್ಧಿ ವಿಚಾರದಲ್ಲಿ ಚೆಲ್ಲಾಟ ಆಡಬಾರದು. ಹಿಂದಿನ ಶಾಸಕರು ಅಧಿಕಾರಿಗಳ ಮೇಲೆ ಮೌಖಿಕವಾಗಿ ಒತ್ತಡ ತಂದಿದ್ದಾರೆ.
ಮೊದಲ ಹಂತದಲ್ಲಿ 16 - 17 ಕೋಟಿ ರೂಪಾಯಿ ಕ್ಲಿಯರೆನ್ಸ್ ಸಿಕ್ಕಿತ್ತು. ಆದ್ರೆ ಎರಡನೇ ಹಂತದ ಕಾಮಗಾರಿಗಳಿಗೆ ಅಡ್ಡಗಾಲು ಹಾಕಲಾಗಿದೆ. ಇದರಿಂದ ನಗರದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರು.












Click it and Unblock the Notifications