ಜ.12ರಂದು ಮೋದಿ ಭೇಟಿ: ಹುಬ್ಬಳ್ಳಿಯಲ್ಲಿ ಸಂಚಾರ ಮಾರ್ಗ ಬದಲಾವಣೆ, ಪಾರ್ಕಿಂಗ್ ಸ್ಥಳಗಳ ಬಗ್ಗೆ ಇಲ್ಲಿ ತಿಳಿಯಿರಿ

ಹುಬ್ಬಳ್ಳಿ, ಜನವರಿ 11: ಪ್ರಧಾನಿ ನರೇಂದ್ರ ಮೋದಿ ಅವರು ಜ.12ರಂದು 26ನೇ ರಾಷ್ಟ್ರೀಯ ಯುವಜನೋತ್ಸವ (ಎನ್‌ವೈಎಫ್‌) ಉದ್ಘಾಟಿಸುವ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ಸ್ಥಳ ಹಾಗೂ ಸಂಚಾರ ಮಾರ್ಗ ಬದಲಾವಣೆಯ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ನವಲಗುಂದದಿಂದ ಬರುವವರು ಕೆ.ಎಚ್. ಪಾಟೀಲ್ ರಸ್ತೆ ಮತ್ತು ಶೃಂಗಾರ್ ಕ್ರಾಸ್‌ನಲ್ಲಿ ಇಳಿಯಬೇಕು. ಗದಗ ರಸ್ತೆ ಅಥವಾ ವಿನೋಭಾನಗರದಲ್ಲಿ ವಾಹನ ನಿಲುಗಡೆ ಮಾಡಬಹುದು.

ಮಕರ ಸಂಕ್ರಾಂತಿ ವಿಶೇಷ ಪುಟ

ಗದಗ ರಸ್ತೆಯಿಂದ ಬರುವ ಬಸ್‌ಗಳು ಅಂಬೇಡ್ಕರ್ ವೃತ್ತದಲ್ಲಿ ಜನರನ್ನು ಇಳಿಸಿ ಚಿಲ್ಲಿ ಮೈದಾನದಲ್ಲಿ ನಿಲುಗಡೆ ಮಾಡಬಹುದು.

PM Narendra Modi’s visit: Police announce traffic diversions, parking spots

ಗಬ್ಬೂರು ಕ್ರಾಸ್‌ನಿಂದ ಬರುವ ವಾಹನಗಳು ತಮ್ಮ ಪ್ರಯಾಣಿಕರನ್ನು ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಇಳಿಸಬಹುದು ಮತ್ತು ಗಿರಾನಿ ಚಾಲ್ ಮೈದಾನ ಮತ್ತು ಎಂ.ಟಿ. ಮಿಲ್ಸ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.

ಕಾರವಾರ ರಸ್ತೆಯಿಂದ ಬರುವ ವಾಹನಗಳು ಗ್ಲಾಸ್‌ ಹೌಸ್‌ ವೆಲ್‌ ಬಳಿ ಜನರನ್ನು ಇಳಿಸಿ, ಗ್ಲಾಸ್‌ ಹೌಸ್‌ ವೆಲ್‌ ಮೈದಾನದಲ್ಲಿ ವಾಹನ ನಿಲ್ಲಿಸಬಹುದು.

PM Narendra Modi’s visit: Police announce traffic diversions, parking spots

ಧಾರವಾಡದಿಂದ ಬರುವ ವಾಹನಗಳು ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹೊಸೂರಿನ ರಾಯ್ಕರ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.

ಇದೇ ವೇಳೆ ಬುಧವಾರ ಮತ್ತು ಗುರುವಾರ ಮಧ್ಯಾಹ್ನ 1 ಗಂಟೆಯಿಂದ 7 ಗಂಟೆ ವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಗೋಕುಲ್ ರಸ್ತೆ, ಮೊಫ್ಯೂಸಿಲ್ ಡಿಪೋದಿಂದ ಸಿದ್ದೇಶ್ವರ ಪಾರ್ಕ್, ಶಿರೂರು ಪಾರ್ಕ್, ಕಿಮ್ಸ್ ಮುಖ್ಯರಸ್ತೆ, ಹೊಸೂರು ರಸ್ತೆ, ಭಗತ್ ಸಿಂಗ್ ವೃತ್ತ, ಸರ್ಕ್ಯೂಟ್ ಹೌಸ್ ರಸ್ತೆ, ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್, ರೈಲ್ವೆ ಮೈದಾನದವರೆಗಿನ ರಸ್ತೆ.

PM Narendra Modi’s visit: Police announce traffic diversions, parking spots

ಕಾರವಾರ ರಸ್ತೆಯಿಂದ ಬರುವ ಸರ್ಕಾರಿ ಸಾರಿಗೆ ಬಸ್‌ಗಳನ್ನು ಕಾರವಾರ ರಸ್ತೆ ಪ್ಲಾಜಾದಲ್ಲಿ (ಸೇತುವೆಯ ಕೆಳಗಡೆ) ಗುರುತಿಸಲಾಗಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ.

ದೀರ್ಘ ಪ್ರಯಾಣದ ಸರ್ಕಾರಿ ಸಾರಿಗೆ ಬಸ್ಸುಗಳು ರಿಂಗ್ ರಸ್ತೆ ಮತ್ತು ಬೈಪಾಸ್ ರಸ್ತೆಗಳಲ್ಲಿ ಸಂಚರಿಸಬಹುದು. ಬೆಂಗಳೂರಿನಿಂದ ಬರುವ ಬಸ್‌ಗಳು ಗಬ್ಬೂರು ಬೈಪಾಸ್‌ನಲ್ಲಿ ನಿಲುಗಡೆ ಮಾಡಬಹುದು. ಗದಗ ರಸ್ತೆಯಿಂದ ಬರುವ ಬಸ್‌ಗಳು ರೈಲ್ವೇ ಲೋಕೋ ಶೆಡ್‌ನಲ್ಲಿ ನಿಲ್ಲಬೇಕು. ನವಲಗುಂದ ರಸ್ತೆಯಿಂದ ಬರುವ ಬಸ್‌ಗಳು ಆಕ್ಸ್‌ಫರ್ಡ್ ಕಾಲೇಜು ರೈಲ್ವೆ ಸೇತುವೆಯಲ್ಲಿ ನಿಲ್ಲಬೇಕು. ಬೆಳಗಾವಿ ಮತ್ತು ಧಾರವಾಡದಿಂದ ಬರುವ ಬಸ್‌ಗಳು ತಾರಿಹಾಳ್ ಸೇತುವೆಯಲ್ಲಿ ನಿಲುಗಡೆ ಮಾಡಬಹುದು.

ಹುಬ್ಬಳ್ಳಿ-ಧಾರವಾಡ ಚಿಗರಿ, ಬೇಂದ್ರೆ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ಸಿಟಿ ಬಸ್‌ಗಳು ಕಿಮ್ಸ್ ಆಸ್ಪತ್ರೆಯಲ್ಲಿ ನಿಲ್ಲಲಿವೆ.

ಧಾರವಾಡದಿಂದ ಬರುವ ಇತರೆ ಲಘು ಮೋಟಾರು ವಾಹನಗಳು ಪ್ರೆಸಿಡೆಂಟ್ ಹೋಟೆಲ್, ಸಾಯಿನಗರ, ಜೆಕೆ ಶಾಲೆ, ಗೋಪನಕೊಪ್ಪ, ಕೇಶ್ವಾಪುರ ಅಥವಾ ಕುಸುಗಲ್ ಮೂಲಕ ಸಂಚರಿಸಬಹುದು. ಧಾರವಾಡದಿಂದ ಬರುವ ಭಾರಿ ವಾಹನಗಳು ನವನಗರ, ಗಾಮನಗಟ್ಟಿ ಕೈಗಾರಿಕಾ ವಸಾಹತು, ತಾರಿಹಾಳ ಬೈಪಾಸ್ ಮೂಲಕ ಸಂಚರಿಸಬಹುದು. ನಗರದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ನವಲಗುಂದ ಮತ್ತು ಗದಗ ಕಡೆಯಿಂದ ಬರುವ ಭಾರಿ ವಾಹನಗಳು ವರ್ತುಲ ರಸ್ತೆ ಮೂಲಕ ಸಂಚರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+