• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಹಾಗೂ ಸೋನಿಯಾಗೆ ಕಪ್ಪ ಕೊಡಬೇಕು; ಹುಬ್ಬಳ್ಳಿಯಲ್ಲಿ ಸಿ.ಎಂ. ಇಬ್ರಾಹಿಂ ವ್ಯಂಗ್ಯ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್, 07: ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷದವರಿಗೆ ದೇಶ ಹಾಗೂ ರಾಜ್ಯದ ಜನರ ಚಿಂತೆ ಇಲ್ಲ. ಸರ್ಕಾರ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ನಮ್ಮ ಪಕ್ಷಕ್ಕೆ ಕೈ ಹಾಕುತ್ತಾರೆ. ಹಾಗೂ ಮೋದಿ ಹಾಗೂ ಸೋನಿಯಾಗೆ ಕಪ್ಪ ಕೊಡಬೇಕು ಎಂದು ಧಾರವಾಡದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ಕಾಂಗ್ರೆಸ್‌ಗೆ ವಿರೋಧ ಪಕ್ಷದಲ್ಲಿ ಕುಳಿತು ಅಭ್ಯಾಸ ಇಲ್ಲ. ಬಿಜೆಪಿಗೆ ಅಧಿಕಾರ ನಡೆಸಿ ಅಭ್ಯಾಸ ಇಲ್ಲ. ಎರಡು ಪಕ್ಷದವರು ಭರತ ನಾಟ್ಯ ಕಳಿತವರಾಗಿದ್ದಾರೆ. ಇನ್ನು ರಾಹುಲ್ ಗಾಂಧಿ ಭಾರತ್‌ ಜೋಡೋ ಯಾತ್ರೆಯನ್ನು‌ ಮಾಡುತಿದ್ದಾರೆ. ನಾನು ಅವರಿಗೆ ಮೊದಲು ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಜೋಡೋ ಮಾಡಿ ಎಂದು ಹೇಳುತ್ತೇನೆ. ಕುಮಾರಸ್ವಾಮಿಗೆ ಸಿ.ಎಂ ಮಾಡಿದ್ದೀರಿ, ಅಲ್ಲಿ ಹೋಗಿ ಗುಲಾಂ ನಬಿ ಆಜಾದ್ ಕೇಳಿಕೊಂಡು ಸರ್ಕಾರ ಮಾಡಲು ಹೇಳಿದ್ದೀರಿ. 14 ತಿಂಗಳು ಸರ್ಕಾರ ನಡೆಯಲು ಬಿಡಲಿಲ್ಲ. ನಮ್ಮದು ದರಿದ್ರ ರಾಜ್ಯ ಅಲ್ಲ. 5 ಲಕ್ಷ ಕೋಟಿ ಆದಾಯ ಇದೆ. ಪ್ರಧಾನಿ ಮೋದಿ ಹಾಗೂ ಸೋನಿಯಾಗೆ ಕಪ್ಪ ಕೊಡಬೇಕು. ಇದು ಜಗತ್ ಜಾಹೀರು ಆಗಲಿದೆ ಎಂದರು.

ವಿವಿಧ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ: ಸಿದ್ದರಾಮಯ್ಯವಿವಿಧ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ: ಸಿದ್ದರಾಮಯ್ಯ

ಸಿದ್ದರಾಮಣ್ಣ ಕಾಲದಲ್ಲಿ ಯಾರು ಹಣವನ್ನು ಮಾಡಲಿಲ್ಲ ಹೇಳಾ? ಕೆಲವರು ಬೇಲ್ ಮೇಲೆ ಹೊರಗಡೆ ಇದ್ದು, ಕೆಲವರು ಜೈಲ್‌ನಲ್ಲಿದ್ದಾರೆ. ಬೇಲ್‌ ಮೇಲೆ‌ ಇದ್ದವರು ಊರಿನ ಹೊರಗೆ ಜನ್ಮದಿನ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಟಾಂಗ್ ಕೊಟ್ಟರು. ನಾನು ಆರ್‌ಎಸ್‌ಎಸ್ ಎಲ್ಲರ ಮೇಲೆ ಟೀಕೆ ಮಾಡುವುದಿಲ್ಲ. ತಿರುಗಾಡಲು ಚಪ್ಪಲಿ ಇರಲಿಲ್ಲ, ಜೋಶಿ ನೂರಾರು ಕೋಟಿ ಮಾಡಿದ್ದಾರೆ. ಶಟ್ಟರ್ ಆಸ್ತಿ ಎಷ್ಟು? ಎಂದು ಪ್ರಶ್ನೆ ಮಾಡಿದರು.

 ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಇಬ್ರಾಹಿಂ ಕಿಡಿ

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಇಬ್ರಾಹಿಂ ಕಿಡಿ

ಎಸ್‌.ಆರ್ ಬೊಮ್ಮಾಯಿ ನನ್ನ ಜೊತೆ ಸೆಕ್ರೆಟರಿಯಾಗಿ ಇದ್ದವರಾಗಿದ್ದರು. ಈ ರಾಜ್ಯದಲ್ಲಿ ಶಾಂತಿ ನೆಲೆಸಬೇಕು, ನಿಮಗೆ ಹೊಟ್ಟೆ, ಬಟ್ಟೆ, ರೊಟ್ಟಿ ಎಲ್ಲ ಕೊಡಲಾಗಿದೆ. ಹಲಾಲ್ ಕಟ್ಟೋ ಜಟಕಾ‌ ಕಟ್ಟೋ ಅಂತೆ, ನೀವು ರಾಜ್ಯಬಾರ ಮಾಡಲು ಬಂದಿದ್ಧೀರಿ. ಇದು ಚರ್ಚೆ ಮಾಡುವ ವಿಷಯನಾ? ಚಾಣಕ್ಯ ಹೇಳಿದ್ದಾನೆ, ದೇಶದ ವ್ಯಾಪಾರಿ ಆಗಿರಬಾರದು. ಅದಕ್ಕೆ ಅಲ್ಲಿ ಜನ ಭಿಕಾರಿ ಆಗುತ್ತಾರೆ. ಇಂದಿರಾಗಿಂತ ಹೆಚ್ಚಿನದಾಗಿ ಮೋದಿಗೆ ಅವಕಾಶ ಸಿಕ್ಕಿದೆ. ಆದರೆ ಇವರನ್ನು ಹುಟ್ಟಸಿದ್ದು ಅದಾನಿ ಮತ್ತು ಅಂಬಾನಿ ಎಂದರು. ಹಳೇ ಮೈಸೂರಿಗಿಂತ ಈ‌ ಭಾಗದಲ್ಲಿ ಹೆಚ್ಚು ಸ್ಥಾನ ಬೇಕು. ಇಲ್ಲಿ ಪಕ್ಷಕ್ಕೆ ಸೆರ್ಪಡೆ ಆಗುತ್ತಿದ್ದಾರೆ. 1, 2, 3 ನಮ್ಮ ಮಿಷನ್, ಜನರಿಗೆ ನಾವು ಮೆಜಾರಿಟಿ ಕೊಡಿ ಎನ್ನುತ್ತೇವೆ. ದೇವೇಗೌಡರು ಸುಪ್ರಿಂ ಲೀಡರ್ ಇದ್ದಂತೆ. ನಮಗೆ ಒಬ್ಬೊಂಟಿ ಅಧಿಕಾರ ಸಿಗದೇ ಇದ್ದರೆ ಬೇರೆಯವರ ಜೊತೆ ಸರ್ಕಾರ‌ವನ್ನು ರಚಿಸುವುದಿಲ್ಲ. ಬರಿ ಸೀಟು ಕೊಡುವರು ನಂಬರ್ ಕೊಡುವುದಿಲ್ಲ, ಬದಲಾಗಿ ಅಧಿಕಾರ ಕೊಡಬೇಕು ಎಂದರು.

 ಬಹುಮತ ಬಂದರೆ ಕುಮಾರಸ್ವಾಮಿ ಸಿಎಂ

ಬಹುಮತ ಬಂದರೆ ಕುಮಾರಸ್ವಾಮಿ ಸಿಎಂ

ಕಾಂಗ್ರೆಸ್ ಒಮ್ಮೆಯೂ ಮುಸ್ಲಿಮರನ್ನು ಅಧ್ಯಕ್ಷ ಮಾಡಿಲ್ಲ. ಜೆಡಿಎಸ್ ಪಕ್ಷ ಮೂರು ಸಾರಿ ಅಧ್ಯಕ್ಷನನ್ನಾಗಿ ಮಾಡಿದೆ. ಬಹುಮತ ಬಂದರೆ ಕುಮಾರಸ್ವಾಮಿ ಸಿಎಂ ಆಗುತ್ತಾರೆ. 14 ಜನ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ದೇವೆಗೌಡರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ನಾನು ಈಗಾಗಲೇ ಶೇ60ರಷ್ಟು ಪ್ರವಾಸ ಮಾಡಿದ್ದೇನೆ. ಪಂಚಮಸಾಲಿ ಎಂದು ಹೊರಟವರು ಬಸವಣ್ಣನ ಪೀಠ ಮಾಡಲು ಹೊರಟಿಲ್ಲ. ಇನ್ನು ಎಎಪಿಗೆ ಇಲ್ಲಿ ಕಷ್ಟ ಆಗಿದೆ. ಇಲ್ಲಿ ಭಾಷೆ ಕೇಜ್ರಿವಾಲ್‌ ಅವರಿಗೆ ಬರಲ್ಲ. ಕೆಲವು ಕಡೆ ನಾವು ಅವರಿಗೆ ಸೀಟು ಕೊಡಬಹುದು, ಅವರು ಆಗ ಮಾತನಾಡುತ್ತಾರೆ. ಹಿಂದಿ ಹೇರಿಕೆ ಬಗ್ಗೆ ನಾವು ವಿರೋಧ ಮಾಡುತ್ತೇವೆ. ನಮಗೆ ಅವ್ವ‌, ಅಪ್ಪ ಎಂದು ರೂಢಿ, ಅಪ್ಪಾಜಿ ಅಂತಾ ಹೇಳಿ ರೂಢಿ ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಲಿಂಗಾಯತ ಹೋರಾಟಕ್ಕೆ ಕೈ ಹಾಕಿ ತಪ್ಪು ಮಾಡಿತ್ತು. ಆಗ ನಾನು ಇದು ಜಂಗಮರ ಜಗಳ ಎಂದು ಹೇಳಿದ್ದೆ ಎಂದರು. ರಾಹುಲ್ ಗಾಂಧಿಗೆ ಒಳ್ಳೆಯದಾಗಲಿ, ಅವರು ಸಂಸಾರಸ್ಥರಾಗಲಿ ಎಂದು ಬೇಡಿಕೊಳ್ತೇನೆ ಎಂದು ಸಿ.ಎಂ. ಇಬ್ರಾಹಿಂ ಅವರು ಹಾರೈಸಿದರು.

 ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ

ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ

ಈಗಾಗಲೇ ಕಾಂಗ್ರೆಸ್ ಮುಳುಗುತ್ತಿದೆ. ಯಾರೇ ಅಧ್ಯಕ್ಷರಾಗಿ ನೇಮಕ ಆಗಲಿ ರಾಷ್ಟ್ರ, ರಾಜ್ಯ ರಾಜಕೀಯದಲ್ಲಿ ಏನು ಬದಲಾವಣೆ ಆಗುವುದಿಲ್ಲ. ಬಿಜೆಪಿ ರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಎಐಸಿಸಿ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ದೊಡ್ಡದೊಂದು ಕಾರ್ಯಕ್ರಮ ಮಾಡುತ್ತಾರೆ. ಅದು ನಮಗೆ ಏನು ತಾಕುವುದಿಲ್ಲ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಅವರು ಕೂಡ ರಸ್ತೆಗಿಳಿದು ಭಾರತ್ ಜೋಡೋ ಮಾಡುತ್ತಿದ್ದಾರೆ.

 ಕಾಂಗ್ರೆಸ್‌ ವಿರುದ್ದ ಶೆಟ್ಟರ್‌ ಆಕ್ರೋಶ

ಕಾಂಗ್ರೆಸ್‌ ವಿರುದ್ದ ಶೆಟ್ಟರ್‌ ಆಕ್ರೋಶ

ಭಾರತ್‌ ಜೋಡೋ ಪಾದಯಾತ್ರೆಯಿಂದ ಬಿಜೆಪಿಗೆ ಏನು ತಾಕುವುದಿಲ್ಲ ಎಂದರು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲು ಹಲವಾರು ಸಂಘಟನೆಗಳು ಪಾಲಿಕೆಗೆ ಮನವಿ ನೀಡಿವೆ. ಈ ಹಿನ್ನೆಲೆಯಲ್ಲಿ, ಆ ನಿರ್ಧಾರಗಳನ್ನು ಪಾಲಿಕೆ ತೆಗೆದುಕೊಳ್ಳುತ್ತದೆ. ಪಾಲಿಕೆಯೇ ಯೋಗ್ಯವಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

English summary
JDS State President CM Ibrahim expressed outrage in Dharwad, one should give Donation to Prime Minister Narendra Modi and Sonia Gandi, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X